ಭಾರತವು ಒಂದು ಗಂಭೀರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸುಮಾರು 20 ಕೋಟಿ ಜನತೆ ಮಾನಸಿಕ ಖಾಯಿಲೆಗಳೊಂದಿಗೆ ಬದುಕುತ್ತಿದ್ದಾರೆ. ಅವರಲ್ಲಿ ಐದು ಜನರಲ್ಲಿ ಒಬ್ಬರಿಗಿಂತಲೂ ಕಡಿಮೆ ಸಂಖ್ಯೆಯ ಜನರಿಗೆ ಚಿಕಿತ್ಸೆ ದೊರಕುತ್ತಿದೆ. ನಗರಗಳು ದೊಡ್ಡದಾಗುತ್ತಿದ್ದಂತೆ ಸಮಸ್ಯೆಯಲ್ಲಿರುವ ವ್ಯಕ್ತಿಗಳಿಗೆ, ತಮ್ಮ ಸಮುದಾಯಗಳಿಂದ ಈ ಹಿಂದೆ ಸಿಗುತ್ತಿದ್ದ ಬೆಂಬಲವು ಇಲ್ಲವಾಗುತ್ತಿರುವುದರಿಂದ, ಸಮಸ್ಯೆಯು ಮತ್ತಷ್ಟು ಬಿಗಡಾಯಿಸುತ್ತಿದೆ. ಕೇವಲ ಮನೋರೋಗತಜ್ಞರು ಅಥವಾ ಮನಃಶಾಸ್ತ್ರಜ್ಞರ ಮೇಲೆ ಅವಲಂಬನೆ ಹೊಂದುವುದರಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ತಜ್ಞರ ಸಂಖ್ಯೆ ಬಹಳ ಕಡಿಮೆ ಇದೆ ಹಾಗೂ ಹೊಸ ತಜ್ಞರ ತರಬೇತಿಯು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತದೆ. ಜನರು ಅಸ್ವಸ್ಥರಾಗುವವರೆಗೂ ಕಾಯುತ್ತಾ ಕುಳಿತುಕೊಳ್ಳುವುದೂ ಸಹ ತಪ್ಪಾದ ಧೋರಣೆಯೇ. ಖಾಯಿಲೆಯನ್ನು ತಡೆಗಟ್ಟುವುದಕ್ಕೆ ಹಾಗೂ ಚೇತರಿಸಿಕೊಳ್ಳುವುದಕ್ಕೆ ಸಮಾನವಾದ ಒತ್ತನ್ನು ನೀಡುವಂತಹ ಒಂದು ವ್ಯವಸ್ಥೆ ಭಾರತಕ್ಕೆ ಬೇಕಾಗಿದೆ.
ಕೆಲವು ವಿಭಾಗಗಳ ಜನತೆ ರೋಗಕ್ಕೆ ತುತ್ತಾಗುವುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ: ಸೈನಿಕರು, ಆರೋಗ್ಯ ಸೇವಾ ಕಾರ್ಯಕರ್ತರು, ವಿಮಾನಯಾನ ಸಿಬ್ಬಂದಿ, ವಲಸಿಗರು ಹಾಗೂ ಮಾನಸಿಕ ಖಾಯಿಲೆಯ ಕೌಟುಂಬಿಕ ಹಿನ್ನೆಲೆ ಹೊಂದಿರುವವರು. ಈ ವಿಭಾಗದ ಜನರಿಗೆ ಹೆಚ್ಚಿಗೆ ಗಮನ ನೀಡುವ ಅವಶ್ಯಕತೆಯಿದೆ.
ರೋಗದ ತಡೆಗಟ್ಟುವಿಕೆಯು ಮನೋಧಾರ್ಡ್ಯದಿಂದ ಪ್ರಾರಂಭವಾಗುತ್ತದೆ. ಮಕ್ಕಳು ಹಾಗೂ ಯುವಜನರು ತಮ್ಮ ಜೀವನಪರ್ಯಂತ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುವಂತಹ ಸಾಧನಗಳನ್ನು ನಾವು ಅವರಿಗೆ
ಒದಗಿಸಬಹುದು. ಮಕ್ಕಳನ್ನು ಇಡೀದಿನ ಚೆನ್ನಾಗಿ ನೋಡಿಕೊಳ್ಳುವುದು ಹಾಗೂ ಆರಂಭದಲ್ಲೇ ಅವರು ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಸಾಮಾಜಿಕ ಹಾಗೂ ಭಾವನಾತ್ಮಕ ಕೌಶಲ್ಯಗಳನ್ನು ಬೆಳೆಸುವ ಶಾಲಾ ಕಾರ್ಯಕ್ರಮಗಳು ನಂತರದ ವರ್ಷಗಳಲ್ಲಿ ಖಿನ್ನತೆಗೆ ಗುರಿಯಾಗುವುದನ್ನು ಕಡಿಮೆ ಮಾಡುತ್ತವೆ. ಯುವಜನತೆಯ ವ್ಯಕ್ತಿತ್ವ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವುದು ಮತ್ತು ವಿದ್ಯಾರ್ಥಿ ಜೀವನದಲ್ಲಿ ತರಬೇತಿ ನೀಡುವುದು ಅವರ ಸೂಕ್ಷ್ಮವಾದ ವಯಸ್ಸಿನ ಕಾಲಘಟ್ಟದಲ್ಲಿ ನೆರವಾಗುತ್ತದೆ.
ಆದರೆ ಮನೋಧಾರ್ಡ್ಯ ಮಾತ್ರವೇ ಸಾಕಾಗುವುದಿಲ್ಲ. ವಾತಾವರಣದಲ್ಲಿ ಈ ಖಾಯಿಲೆಗಳನ್ನು ತಂದೊಡ್ಡುವಂತಹ ಅಂಶಗಳನ್ನೂ ಸಹ ನಾವು ಕಡಿಮೆ ಮಾಡಬೇಕು. ಆರ್ಥಿಕ ಅಸ್ಥಿರತೆ, ರಕ್ಷಣೆ ಇಲ್ಲದ ವಸತಿ ವ್ಯವಸ್ಥೆ. ಶಾಲೆಗಳಲ್ಲಿ ರೌಡಿಗಳ ಪೀಡನೆಗೆ ತುತ್ತಾಗುವುದು ಹಾಗೂ ಗೋಡೆಬಣ್ಣಗಳಲ್ಲಿರುವ ಸೀಸದಂತಹ ವಿಷಯುಕ್ತ ಪದಾರ್ಥಗಳು, ಇವೆಲ್ಲವೂ ದೀರ್ಘಕಾಲದಲ್ಲಿ ಹಾನಿಯನ್ನುಂಟು ಮಾಡುತ್ತವೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳು, ಕಠಿಣವಲ್ಲದ ನಮ್ಯತೆಯುಳ್ಳ ನಗರ ಪ್ರದೇಶದ ಉದ್ಯೋಗಗಳು, ಸುರಕ್ಷಿತವಾದ ಶಾಲೆಗಳು ಹಾಗೂ ಗೋಡೆಬಣ್ಣಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಂತ್ರಣಗಳು ಈ ಖಾಯಿಲೆಯ ಒತ್ತಡಗಳನ್ನು ಕಡಿಮೆ ಮಾಡುತ್ತವೆ.
ಈ ಖಾಯಿಲೆಗಳನ್ನು ತಡೆಗಟ್ಟುವುದಕ್ಕೆ ಅವಶ್ಯಕವಾದ ಮೂರನೆಯ ಕ್ರಮವೆಂದರೆ, ಸಮಸ್ಯೆಯನ್ನು ಗುರುತಿಸುವುದು. ಕೆಲವು ವಿಭಾಗದ ಜನತೆ ಅಪಾಯದ ಸಾಧ್ಯತೆಯನ್ನು ಹೆಚ್ಚಿಗೆ ಹೊಂದಿರುತ್ತಾರೆ: ಸೈನಿಕರು, ಆರೋಗ್ಯ ಸೇವಾ ಕಾರ್ಯಕರ್ತರು, ವಿಮಾನಯಾನ ಸಿಬ್ಬಂದಿ, ವಲಸಿಗರು ಹಾಗೂ ಮಾನಸಿಕ ಖಾಯಿಲೆಯ ಕೌಟುಂಬಿಕ ಹಿನ್ನೆಲೆ ಹೊಂದಿರುವವರು. ಈ ವಿಭಾಗದ ಜನರಿಗೆ ಹೆಚ್ಚಿಗೆ ಗಮನ ನೀಡುವ ಅವಶ್ಯಕತೆಯಿದೆ. ಆಘಾತ ಸಂಭವಿಸಿದ ನಂತರ ಮಾನಸಿಕ ಪ್ರಥಮ ಚಿಕಿತ್ಸೆ, ಒತ್ತಡ ಕಡಿಮೆ ಮಾಡಲು ದುಡಿಯುವ ಸ್ಥಳಗಳಲ್ಲಿ ಬದಲಾವಣೆ ಅಥವಾ ವಂಶಪಾರಂಪರ್ಯದ ಕಾರಣದಿಂದಾಗಿ ಖಾಯಿಲೆಯ ಅಪಾಯ ಎದುರಿಸುತ್ತಿರುವವರಿಗೆ ಆಪ್ತ ಸಲಹೆ ಇವುಗಳು ಅವಶ್ಯವಾಗುತ್ತವೆ.
ಸಮಸ್ಯೆಯನ್ನು ತಡೆಗಟ್ಟಲು ಬಲವಾದ ಕ್ರಮಗಳನ್ನು ತೆಗೆದುಕೊಂಡ ಮೇಲೂ ಸಹ ಅನೇಕ ವ್ಯಕ್ತಿಗಳು ಖಾಯಿಲೆಗೆ ತುತ್ತಾಗುತ್ತಾರೆ. ಚೇತರಿಸಿಕೊಳ್ಳಲು ನೆರವಾಗುವಂತಹ ಸರಿಯಾದ ವ್ಯವಸ್ಥೆಯಿಲ್ಲದಿದ್ದಾಗ, ಖಾಯಿಲೆ ಮರುಕಳಿಸುವುದು ಹೆಚ್ಚಾಗುತ್ತದೆ ಹಾಗೂ ಮೊದಲು ಗಳಿಸಿಕೊಂಡಿದ್ದಂತಹ ಆರೋಗ್ಯವು ನಷ್ಟವಾಗುತ್ತದೆ. ಆದರೆ ಭಾರತವು ಕೇವಲ ಮನೋರೋಗತಜ್ಞರ ಮೇಲೆ ಅವಲಂಬಿಸಿಕೊಂಡಿರಲು ಸಾಧ್ಯವಿಲ್ಲ. ಸಮುದಾಯ ಆರೋಗ್ಯ ಕಾರ್ಯಕರ್ತರು ನೆರವಾಗಬಹುದು ಆದರೆ ಅವರಿಗೆ ಅಲ್ಪ ಕಾಲಾವಧಿಯ ತರಬೇತಿ ನೀಡಿ ಚಿಕಿತ್ಸೆ ನೀಡುವ ಕೆಲಸವನ್ನು ಕೊಡುವುದು ಅಪಾಯಕಾರಿ. ಇದು ತಪ್ಪಾದ ರೋಗ ನಿರ್ಣಯ ಮಾಡುವ ಮೂಲಕ ಹಾನಿಯುಂಟು ಮಾಡಬಹುದು ಎಂದು ಅಧ್ಯಯನಗಳು ಹೇಳುತ್ತವೆ.
ಹೋಮ್ ಅಗೇಯ್ನ್ ನಂತಹ ನೆರವಿನೊಂದಿಗೆ ಬದುಕುವ ಕಾರ್ಯಕ್ರಮಗಳು ಜನರು ಆರೋಗ್ಯ ಸಂಸ್ಥೆಗಳಾಚೆಗೂ ಚೆನ್ನಾಗಿ ಬದುಕನ್ನು ನಡೆಸಿಕೊಂಡಿರಲು ಸಾಧ್ಯ ಎಂದು ಎತ್ತಿ ತೋರಿಸುತ್ತದೆ.
ವಿವಿಧ ಹಂತಗಳ ಚಿಕಿತ್ಸಾ ಮಾದರಿಯು ಒಂದು ಉತ್ತಮ ಮಾರ್ಗ. ಸಮುದಾಯ ಆರೋಗ್ಯ ಸೇವಾ ಕಾರ್ಯಕರ್ತರು, ರೋಗ ಲಕ್ಷಣಗಳನ್ನು ಗುರುತಿಸುವುದು ಹಾಗೂ ಸರಳವಾದ ಸ್ವಯಂ-ಆರೈಕೆಯ ಪರಿಕರಗಳನ್ನು ನೀಡುವುದಕ್ಕೆ ಮಾತ್ರ ತಮ್ಮ ಗಮನವನ್ನು ಹರಿಸಬೇಕು. ಒಂದು ಚಿಕ್ಕ, ಪ್ರಶಸ್ತಿಪತ್ರವನ್ನು ಪಡೆದುಕೊಂಡ ತಂಡವು-ವರ್ತನೆಗಳ ಚಿಕಿತ್ಸೆಯ ಆರೋಗ್ಯ ಸಹಾಯಕರು-ಆರು ತಿಂಗಳುಗಳ ಅವಧಿಯ ತರಬೇತಿಯನ್ನು ಪಡೆದುಕೊಂಡು, ತಜ್ಞರ ಕೆಳಗೆ ಕೆಲಸ ಮಾಡಬೇಕು ಹಾಗೂ ಹೆಚ್ಚು ಸಂಕೀರ್ಣವಾದ ಖಾಯಿಲೆಗಳನ್ನು ಹೊಂದಿರುವವರನ್ನು ನಿಭಾಯಿಸಬೇಕು. ಈ ಗುಂಪಿಗೆ ಸೇರಿದ ರೋಗಿಗಳ ಮೇಲ್ವಿಚಾರಣೆಯನ್ನು ಕೇಂದ್ರೀಕರಿಸುವುದರಿಂದ, ಅಪಾಯಗಳು ಕಡಿಮೆಯಾಗುತ್ತವೆ, ಚಿಕಿತ್ಸೆಗೆ ತಗಲುವ ವೆಚ್ಚವನ್ನು ನಿಯಂತ್ರಿಸಬಹುದು ಹಾಗೂ ಈ ಮಾದರಿಯನ್ನು ವಿಸ್ತರಿಸಬಹುದು.
ಈ ಚಿಕಿತ್ಸಾಕ್ರಮದಲ್ಲಿ ಚೇತರಿಸಿಕೊಳ್ಳುವುದು ವಿವಿಧ ರೀತಿಯಲ್ಲಾಗಬಹುದು. ಸಣ್ಣ ಪ್ರಮಾಣದಲ್ಲಿ ಖಾಯಿಲೆಗಳನ್ನು ಹೊಂದಿರುವವರಿಗೆ ಸ್ವಯಂ-ನೆರವಿನ ವಿಡಿಯೊಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಗುಂಪು ಕಾರ್ಯಕ್ರಮಗಳು ನೆರವಾಗುತ್ತವೆ. ಸ್ಥಳೀಯ ವೈದ್ಯರು ಮತ್ತು ದೂರದಲ್ಲಿರುವ ವಿಷಯತಜ್ಞರ ಮಾರ್ಗದರ್ಶನದಡಿಯಲ್ಲಿ ವರ್ತನೆಗಳ ಚಿಕಿತ್ಸೆಯ ಆರೋಗ್ಯ ಸಹಾಯಕರು ಸಾಮಾನ್ಯವಾದ ಖಾಯಿಲೆಗಳಿಗೆ ರೂಢಿಯಲ್ಲಿರುವ ಚಿಕಿತ್ಸೆಯನ್ನು ನೀಡುತ್ತಾರೆ. ಗಂಭೀರವಾದ ಖಾಯಿಲೆಗಳಿಂದ ಬಳಲುತ್ತಿರುವವರನ್ನು ದೂರಚಿಕಿತ್ಸೆಯ ಮೂಲಕ, ಮನೋರೋಗತಜ್ಞರೊಂದಿಗೆ ಸಂಪರ್ಕದಲ್ಲಿರುವ ಆಸ್ಪತ್ರೆಗಳು ನಿಭಾಯಿಸಬೇಕು. ದೀರ್ಘಕಾಲೀನ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ರೋಗದಿಂದ ಚೇತರಿಸಿಕೊಳ್ಳುವುದು ಎಂದರೆ ಅದು ಸಮುದಾಯದ ನೆರವಿನಿಂದ ಆಗಬೇಕು ಹಾಗೂ ಅವರ ಘನತೆಯನ್ನು ಕಾಪಾಡುವುದರ ಕುರಿತೂ ಗಮನ ಹರಿಸಬೇಕು. ಹೋಮ್ ಅಗೇಯ್ನ್ ನಂತಹ ನೆರವಿನೊಂದಿಗೆ ಬದುಕುವ ಕಾರ್ಯಕ್ರಮಗಳು ಜನರು ಆರೋಗ್ಯ ಸಂಸ್ಥೆಗಳಾಚೆಗೂ ಚೆನ್ನಾಗಿ ಬದುಕು ನಡೆಸಬಹುದು ಎಂಬುದನ್ನು ಎತ್ತಿ ತೋರಿಸುತ್ತವೆ. ಭಾರತದ ಮಾನಸಿಕ ಆರೋಗ್ಯದ ಬಿಕ್ಕಟ್ಟಿಗೆ ಕಾರಣವು ಕೇವಲ ಮನೋರೋಗ ಚಿಕಿತ್ಸಕರು ಕಡಿಮೆ ಸಂಖ್ಯೆಯಲ್ಲಿ ಇರುವುದಲ್ಲ. ಅದು ಕಾರ್ಯತಂತ್ರಕ್ಕೆ ಸಂಬಂಧಿಸಿದ್ದು. ಶಾಲೆಗಳು, ದುಡಿಯುವ ಸ್ಥಳಗಳು ಹಾಗೂ ಸಾಮಾಜಿಕ ನೀತಿಗಳ ಮೂಲಕ ಮಾನಸಿಕ ಖಾಯಿಲೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ರೋಗಿಗಳು ಚೇತರಿಸಿಕೊಳ್ಳುವುದನ್ನು, ಪ್ರಶಸ್ತಿಪತ್ರವನ್ನು ಪಡೆದುಕೊಂಡ ಆರೋಗ್ಯ ಸೇವಾ ಕಾರ್ಯಕರ್ತರನ್ನು ಹೊಂದಿರುವ ಸಮುದಾಯಗಳಿಗೆ ಒಪ್ಪಿಸುವುದು ಹಾಗೂ ದೀರ್ಘಾವಧಿಯಲ್ಲಿ ನೆರವು ನೀಡುವುದು, ಇವುಗಳ ಮೂಲಕ ಭಾರತವು ತೀವ್ರವಾದ ಮಾನಸಿಕ ರೋಗದ ಬಿಕ್ಕಟ್ಟನ್ನು ಒಂದು ಭರವಸೆ ಮತ್ತು ಘನತೆಯೊಂದಿಗೆ ನಿರ್ವಹಿಸಬಹುದಾದ ಸವಾಲಾಗಿ ಪರಿವರ್ತಿಸಬಹುದು.
