ಲಸಿಕೆ ನೀಡುವುದು ಕೇವಲ ಒಂದು ಸೇವೆಯಲ್ಲ—ಅದು ನಾವು ಪ್ರತಿಯೊಂದು ಮಗುವಿಗೂ ನೀಡುವ ಭರವಸೆಯಾಗಿದೆ. ಭಾರತವು ಕಳೆದ ಶತಮಾನದ ದ್ವಿತೀಯಾರ್ಧದಲ್ಲಿ, ಅಂದರೆ 1985 ರಲ್ಲಿ ‘ಸಾರ್ವತ್ರಿಕ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ’ವನ್ನು (ಯೂನಿವರ್ಸಲ್ ಇಮ್ಯುನೈಸೇಷನ್ ಪ್ರೋಗ್ರಾಮ್) ಪ್ರಾರಂಭಿಸುವ ಮೂಲಕ ಈ ಭರವಸೆಗೆ ಬೆಂಬಲವನ್ನು ನೀಡಿತು, ಇದನ್ನು ಈಗ ಜಾಗತಿಕವಾಗಿ ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಉಪಕ್ರಮಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ದೇಶವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, 2026 ರಲ್ಲಿ ಲಸಿಕೆ ಹಾಕುವ ಸಂಪೂರ್ಣ ಪ್ರಮಾಣವು ಶೇಕಡಾ 98.4 ರ ಮಟ್ಟವನ್ನು ತಲುಪಿದೆ.
ಈ ಕಾರ್ಯಕ್ರಮವು ಪೋಲಿಯೋ, ತಾಯಿ ಮತ್ತು ನವಜಾತ ಶಿಶುಗಳ ಧನುರ್ವಾಯು, ಮತ್ತು ಯಾವ್ಸ್ ಕಾಯಿಲೆಗಳನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ. ಹಾಗೆಯೇ ಪ್ರತಿ ವರ್ಷ 2.9 ಕೋಟಿ ಗರ್ಭಿಣಿಯರನ್ನು ಮತ್ತು 2.54 ಕೋಟಿ ಮಕ್ಕಳನ್ನು 12 ತಡೆಗಟ್ಟಬಹುದಾದ ಕಾಯಿಲೆಗಳಿಂದ ರಕ್ಷಿಸುತ್ತಿದೆ.
ನಿರಂತರವಾಗಿ ಬೆಳೆಯುವ ಮತ್ತು ಚಲಿಸುವ ನಗರದಲ್ಲಿ, ಮಕ್ಕಳು ವಲಸೆ ಹೋದಾಗ ಅವರ ಜಾಡನ್ನು ಪತ್ತೆಹಚ್ಚುವುದು ಮತ್ತು ಅವರು ಅವಶ್ಯಕವಾದ ಎಲ್ಲ ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುವುದನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುವುದು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಪದೇಪದೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು, ವಾಸಸ್ಥಾನಗಳನ್ನು ಬದಲಾಯಿಸುವುದು ಮತ್ತು ದಾಖಲಾತಿಗಳ ಕೊರತೆಯು ನಿರಂತರವಾಗಿ ಚಿಕಿತ್ಸೆ ಪಡೆದುಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ. ಇದರ ಪರಿಣಾಮವಾಗಿ, ನಗರಗಳ ಅನಧಿಕೃತ ವಸತಿ ಪ್ರದೇಶಗಳಲ್ಲಿ ವಾಸಿಸುವ ಅನೇಕ ಮಕ್ಕಳು ನಿಯತವಾಗಿ ನಿಗಾ ಇಡುವ ವ್ಯವಸ್ಥೆಯಿಂದ ಹೊರಗುಳಿಯುತ್ತಾರೆ, ಇದು ಲಸಿಕೆ ಹಾಕಿಸಿಕೊಳ್ಳುವುದು ತಪ್ಪಿಹೋಗುವ ಅಥವಾ ವಿಳಂಬವಾಗುವ ಅಪಾಯವನ್ನು ಹೆಚ್ಚಿಸುತ್ತದೆ.
ಇಲ್ಲಿ ವಾಸಿಸುವ ಕುಟುಂಬಗಳು ಪ್ರಮುಖವಾಗಿ ಯುವ ಕುಟುಂಬಗಳಾಗಿದ್ದು, ಅನೇಕರು ಆಗಷ್ಟೇ ಹುಟ್ಟಿದ ಮಕ್ಕಳನ್ನು ಹೊಂದಿದ್ದಾರೆ ಮತ್ತು ಜೀವನ ನಿರ್ವಹಣೆಗಾಗಿ ನಿರಂತರವಾಗಿ ವಲಸೆ ಹೋಗುತ್ತಿರುತ್ತಾರೆ. ವಲಸೆ ಮತ್ತು ಬದುಕುಳಿಯುವ ಹೋರಾಟದ ಈ ಜೀವನಚಕ್ರದಲ್ಲಿ, ಒಂದು ಪ್ರಮುಖವಾದ ಅಗತ್ಯವನ್ನು ಅಜಾಗರೂಕತೆಯಿಂದ ನಿರ್ಲಕ್ಷಿಸಲಾಗುತ್ತದೆ: ಅದೆಂದರೆ ತಮ್ಮ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸುವುದು.
ಬೆಂಗಳೂರಿನ ಬೆಳ್ಳಂದೂರು ಪ್ರದೇಶದಲ್ಲಿ ವಾಸಿಸುವ ಸಮುದಾಯಗಳೊಂದಿಗೆ ನಮ್ಮ (ಅಜೀಂ ಪ್ರೇಮ್‌ಜೀ ಫೌಂಡೇಷನ್) ಪಯಣವು 2022 ರಲ್ಲಿ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಪ್ರಾರಂಭವಾಯಿತು—ಆ ಸಮಯದಲ್ಲಿ ಆರೋಗ್ಯ ಸೇವೆಯು ಒಂದು ಅತ್ಯಗತ್ಯ ಸೇವೆಯಾಗಿ ಎಷ್ಟು ಮುಖ್ಯ ಎಂಬುದು ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿತು. ಸುಲಭವಾಗಿ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆಯಿರುವ ನಗರದ ಅನಧಿಕೃತ ವಸತಿ ಪ್ರದೇಶಗಳಲ್ಲಿ ಹೊರಹೊಮ್ಮುವ ತುರ್ತು ಅಗತ್ಯಗಳಿಗೆ ಸ್ಪಂದಿಸಲು ನಾವು ಬೆಂಗಳೂರಿನಲ್ಲಿ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಬೆಳ್ಳಂದೂರು ಪ್ರದೇಶದಲ್ಲಿ, ಸಮುದಾಯ ಆಧಾರಿತ ಕೆಲಸಗಳಲ್ಲಿ, ವಿಶೇಷವಾಗಿ ಶಿಕ್ಷಣ ಮತ್ತು ಸಾಮಾಜಿಕ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಸುದೀರ್ಘ ಇತಿಹಾಸವನ್ನು ಹೊಂದಿರುವ ‘ಗುಬ್ಬಚ್ಚಿ’ ಎಂಬ ಸಂಸ್ಥೆಯ ಸಹಭಾಗಿತ್ವದಲ್ಲಿ ಇದನ್ನು ಮಾಡಲಾಯಿತು.
ತುರ್ತು ಪರಿಸ್ಥಿತಿಗೆ ಸ್ಪಂದಿಸುವ ಪ್ರತಿಕ್ರಿಯೆಯಾಗಿ ಪ್ರಾರಂಭವಾದ ಈ ಕಾರ್ಯಕ್ರಮವು ಕ್ರಮೇಣ ಕಟ್ಟಕಡೆಯ ವ್ಯಕ್ತಿಯೂ ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದನ್ನು ಬಲಪಡಿಸುವ ನಿರಂತರ ಪ್ರಯತ್ನವಾಗಿ ವಿಕಸನಗೊಂಡಿತು. ಕಾಲ ಕಳೆದಂತೆ, ಈ ಕಾರ್ಯಕ್ರಮವು ತಕ್ಷಣದ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಬೆಂಬಲವನ್ನು ನೀಡುವುದನ್ನು ಮೀರಿ, ನಿರಂತರವಾಗಿ ಸಮುದಾಯದ ಒಳಗೊಳ್ಳುವಿಕೆಯನ್ನು ಖಚಿತಪಡಿಸುವ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಸಂಪರ್ಕವನ್ನು ಸುಧಾರಿಸುವ ಮತ್ತು ಅಗತ್ಯ ಆರೋಗ್ಯ ಸೇವೆಗಳನ್ನು ಜನರು ವಾಸಿಸುವ ಸ್ಥಳಗಳಿಗೆ ಹತ್ತಿರ ತರುವ ಕಾರ್ಯಕ್ರಮವಾಗಿ ವಿಸ್ತರಿಸಿಕೊಂಡಿತು.
ಅಂಚಿನಲ್ಲಿರುವ ಜೀವನ
ಕುಟುಂಬಗಳು ಪದೇಪದೇ ವಲಸೆ ಹೋಗುವುದು ಮತ್ತು ವೇಗವಾಗಿ ಬದಲಾಗುತ್ತಿರುವ ವಸತಿ ಪ್ರದೇಶಗಳ ಮಾದರಿಗಳ ಕಾರಣದಿಂದಾಗಿ, ಸ್ಥಳೀಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಫಲಾನುಭವಿಗಳ ಪಟ್ಟಿಯನ್ನು ನಿರಂತರವಾಗಿ ನವೀಕರಿಸುವಲ್ಲಿ ಮತ್ತು ನಿಖರವಾಗಿ ನಿರ್ವಹಿಸುವಲ್ಲಿ ಸವಾಲುಗಳನ್ನು ಎದುರಿಸುತ್ತದೆ.
ಬೆಳ್ಳಂದೂರಿನ ವಸತಿ ಪ್ರದೇಶಗಳು ಪ್ರಮುಖವಾಗಿ ದೇಶದ ಪೂರ್ವ ಭಾಗದ ರಾಜ್ಯಗಳಿಂದ ಬಂದಿರುವ ಸಾವಿರಾರು ವಲಸೆ ಕುಟುಂಬಗಳಿಗೆ ನೆಲೆಯಾಗಿವೆ. ಅವರು ಹೆಚ್ಚಾಗಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾರೆ ಮತ್ತು ದಟ್ಟವಾದ, ಅನಧಿಕೃತ ವಸತಿಪ್ರದೇಶಗಳಲ್ಲಿ, ಸಾಮಾನ್ಯವಾಗಿ ಸೀಮಿತ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸಣ್ಣ ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಾರೆ. ಇಲ್ಲಿ ವಾಸಿಸುವ ಕುಟುಂಬಗಳು ಪ್ರಮುಖವಾಗಿ ಯುವ ಕುಟುಂಬಗಳಾಗಿದ್ದು, ಅನೇಕರಿಗೆ ಆಗಷ್ಟೇ ಹುಟ್ಟಿದ ಮಕ್ಕಳಿವೆ ಮತ್ತು ಅವರು ಜೀವನ ನಿರ್ವಹಣೆಗಾಗಿ ನಿರಂತರವಾಗಿ ವಲಸೆ ಹೋಗುತ್ತಿರುತ್ತಾರೆ. ವಲಸೆ ಮತ್ತು ಬದುಕುಳಿಯುವ ಹೋರಾಟದ ಈ ಜೀವನಚಕ್ರದಲ್ಲಿ, ಒಂದು ಪ್ರಮುಖವಾದ ಅಗತ್ಯವನ್ನು ಅಜಾಗರೂಕತೆಯಿಂದ ನಿರ್ಲಕ್ಷಿಸಲಾಗುತ್ತದೆ: ಅದೆಂದರೆ ತಮ್ಮ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸುವುದು.
ಆಗಾಗ್ಗೆ ವಲಸೆ ಹೋಗುವುದು ನಿರಂತರವಾಗಿ ಲಸಿಕೆ ಹಾಕುವ ಪ್ರಕ್ರಿಯೆಗೆ ಗಮನಾರ್ಹ ಸವಾಲನ್ನು ಒಡ್ಡುತ್ತದೆ. ಅನೇಕ ಕುಟುಂಬಗಳು ತಮ್ಮ ಮೂಲ ಸ್ಥಳಗಳಿಂದ ಅಪೂರ್ಣ ದಾಖಲೆಗಳನ್ನು ತರುತ್ತವೆ ಅಥವಾ ಪ್ರಸ್ತುತ ಸ್ಥಳದಲ್ಲಿ ಲಸಿಕೆ ಹಾಕಿಸಿಕೊಳ್ಳುವ ವೇಳಾಪಟ್ಟಿಯನ್ನು ಮುಂದುವರಿಸಲು ಯಾವುದೇ ದಾಖಲೆಗಳನ್ನು ಹೊಂದಿರುವುದಿಲ್ಲ. ಕುಟುಂಬಗಳು ಪದೇಪದೇ ವಲಸೆ ಹೋಗುವುದು ಮತ್ತು ವೇಗವಾಗಿ ಬದಲಾಗುತ್ತಿರುವ ವಸತಿ ಪ್ರದೇಶಗಳ ಮಾದರಿಗಳ ಕಾರಣದಿಂದಾಗಿ, ಸ್ಥಳೀಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಫಲಾನುಭವಿಗಳ ಪಟ್ಟಿಯನ್ನು ನಿರಂತರವಾಗಿ ನವೀಕರಿಸುವಲ್ಲಿ ಮತ್ತು ನಿಖರವಾಗಿ ನಿರ್ವಹಿಸುವಲ್ಲಿ ಸವಾಲುಗಳನ್ನು ಎದುರಿಸುತ್ತದೆ. ಇದರ ಪರಿಣಾಮವಾಗಿ, ವಲಸೆ ಸಮುದಾಯಗಳ ಅನೇಕ ಮಕ್ಕಳು ಅಧಿಕೃತ ಪಟ್ಟಿಗಳಿಂದ ಹೊರಗುಳಿಯುತ್ತಾರೆ, ಇದು ಲಸಿಕೆ ಹಾಕಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಂತರವನ್ನು ಉಂಟುಮಾಡುತ್ತದೆ.
ಲಸಿಕೆ ಹಾಕುವ ಪ್ರಕ್ರಿಯೆಯ ಬಗ್ಗೆ ಇರುವಂಥ ಸೀಮಿತ ತಿಳಿವಳಿಕೆ, ಅಪರಿಚಿತ ಭಾಷೆ ಮತ್ತು ಸ್ಥಳೀಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಇರುವ ಕಡಿಮೆ ಜ್ಞಾನದಿಂದಾಗಿ ವಲಸಿಗ ಸಮುದಾಯಕ್ಕೆ ಈ ಸವಾಲುಗಳು ಮತ್ತಷ್ಟು ಸಂಕೀರ್ಣವಾಗುತ್ತವೆ. ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕೆಂದು ಇಚ್ಛಿಸಿದಾಗಲೂ, ಎಲ್ಲಿಗೆ ಹೋಗಬೇಕು ಅಥವಾ ತಮಗೆ ಲಭ್ಯವಿರುವ ಸೇವೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಅನೇಕರಿಗೆ ಖಚಿತ ಮಾಹಿತಿ ಇರುವುದಿಲ್ಲ.
ಆ ಪ್ರದೇಶದಲ್ಲಿ ಸಮುದಾಯ ಆರೋಗ್ಯ ಸಹಾಯಕರಾಗಿ ಕೆಲಸ ಮಾಡುವ ಬಬ್ಲಿ ದಾಸ್ ಅವರು ನಮಗೆ ಹೇಳಿದಂತೆ, “ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನಾನು ಮೊದಲ ಬಾರಿಗೆ ಬೆಳ್ಳಂದೂರಿನ ಸಮುದಾಯಗಳ ಸಂಪರ್ಕಕ್ಕೆ ಬಂದಾಗ, ನನಗೆ ಒಂದು ಮುಖ್ಯವಾದ ವಿಷಯವು ಗಮನಕ್ಕೆ ಬಂದಿತು- ಅದೆಂದರೆ, ಲಸಿಕೆ ಹಾಕುವ ಕಾರ್ಯಕ್ರಮವು ಅಸ್ತಿತ್ವದಲ್ಲಿದೆ. ಆದರೆ ಪ್ರತಿಯೊಂದು ಮಗುವನ್ನೂ ಅದು ತಲುಪುತ್ತಿಲ್ಲ”.
ನಮ್ಮ ಪಯಣ: ಬಿಕ್ಕಟ್ಟಿನಿಂದ ನಿರಂತರತೆಯತ್ತ
ಈ ಕುಟುಂಬಗಳನ್ನು ನಿರಂತರವಾಗಿ ತಲುಪಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಬೆಂಬಲದ ಅಗತ್ಯವಿದೆ ಎಂಬುದು ಸ್ಪಷ್ಟವಾಯಿತು — ಮತ್ತು ನಮ್ಮ ತಿಳಿವಳಿಕೆ ಮತ್ತು ಸಮುದಾಯಗಳಲ್ಲಿನ ನಮ್ಮ ಉಪಸ್ಥಿತಿಯು ಈ ಅಂತರವನ್ನು ತುಂಬಲು ಸಹಾಯ ಮಾಡುತ್ತದೆ.
ವಿಶ್ವಾಸವನ್ನು ಬೆಳೆಸುವುದು ಈ ಪ್ರಯತ್ನದ ಪ್ರಮುಖ ಅಂಶವಾಗಿತ್ತು. ಲಸಿಕೆಗಳನ್ನು ಉಚಿತವಾಗಿ ಕೊಡಲಾಗುತ್ತದೆ ಮತ್ತು ಆರೋಗ್ಯ ಸೇವೆಗಳು ಅವರಿಗೆ ಲಭ್ಯವಿವೆ ಎಂದು ಕುಟುಂಬಗಳಿಗೆ ಭರವಸೆ ನೀಡಲಾಯಿತು. ಕುಟುಂಬಗಳು ಸ್ಥಳಾಂತರಗೊಂಡಾಗಲೂ ನಿರಂತರವಾಗಿ ನಿಗಾ ಇಡುವ ಮೂಲಕ ಆರೋಗ್ಯ ಸೇವೆಯು ನಿರಂತರವಾಗಿ ಸಿಗುವುದನ್ನು ಕಾಯ್ದುಕೊಳ್ಳಲಾಯಿತು.

ಈ ತಿಳಿವಳಿಕೆಯೊಂದಿಗೆ, ಯಾವುದೇ ಮಗುವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ನಾವು ಒಂದು ಸಮಗ್ರವಾದ ಮಧ್ಯಪ್ರವೇಶದ ಯೋಜನೆಯನ್ನು ಅಭಿವೃದ್ಧಿಪಡಿಸಿದೆವು. ಸಮುದಾಯದೊಂದಿಗೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾ, ನಾವು ಪ್ರತಿ ಮನೆ, ಗರ್ಭಿಣಿ ಮಹಿಳೆ ಮತ್ತು ಮಗುವನ್ನು ಗುರುತಿಸಲು ಮನೆ-ಮನೆಗೆ ಹೋಗಿ ಸಮೀಕ್ಷೆ ಮಾಡಲು ಪ್ರಾರಂಭಿಸಿದೆವು. ಇದರಿಂದ, ಅಧಿಕೃತ ದಾಖಲೆಗಳಿಂದ ಕಾಣೆಯಾದ ಕುಟುಂಬಗಳಿಗಾಗಿ ನಾವು ಸಮುದಾಯ ಮಟ್ಟದಲ್ಲಿ ಫಲಾನುಭವಿಗಳ ಪಟ್ಟಿಗಳನ್ನು ರಚಿಸಿದೆವು ಮತ್ತು ಈ ದತ್ತಾಂಶವನ್ನು ನಿಯತವಾಗಿ ಎ ಎನ್ ಎಂ ಗಳು (ಸಹಾಯಕ ಶುಶ್ರೂಷಕಿ ಸೂಲಗಿತ್ತಿಯರು) ಮತ್ತು ಪಿ ಎಚ್ ಸಿ ಗಳೊಂದಿಗೆ (ಪ್ರಾಥಮಿಕ ಆರೋಗ್ಯ ಕೇಂದ್ರಗಳು) ಹಂಚಿಕೊಂಡೆವು, ಇದರಿಂದಾಗಿ ಎಲ್ಲಾ ಮಕ್ಕಳನ್ನು ಲಸಿಕೆ ನೀಡುವ ಪ್ರಕ್ರಿಯೆಯ ಸೂಕ್ಷ್ಮ ಯೋಜನೆಗಳಲ್ಲಿ ಸೇರಿಸಿಕೊಳ್ಳಬಹುದು. ನಿರಂತರವಾಗಿ ಪತ್ತೆ ಹಚ್ಚುವುದು ಹಾಗೂ ನಿಗಾ ಇಡುವುದರ ಮೂಲಕ ಲಸಿಕೆ ಹಾಕಿಸಿಕೊಳ್ಳುವುದು ಬಾಕಿ ಇರುವ ಮಕ್ಕಳ ಪಟ್ಟಿಯನ್ನು ನವೀಕರಿಸುವುದನ್ನು ಮತ್ತು ಮಕ್ಕಳು ಬಾಕಿ ಇರುವ ಲಸಿಕೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಯಿತು.
ವಿಶ್ವಾಸವನ್ನು ಬೆಳೆಸುವುದು ಈ ಪ್ರಯತ್ನದ ಪ್ರಮುಖ ಅಂಶವಾಗಿತ್ತು. ಲಸಿಕೆಗಳನ್ನು ಉಚಿತವಾಗಿ ಕೊಡಲಾಗುತ್ತದೆ ಮತ್ತು ಆರೋಗ್ಯ ಸೇವೆಗಳು ಅವರಿಗೆ ಲಭ್ಯವಿವೆ ಎಂದು ಕುಟುಂಬಗಳಿಗೆ ಭರವಸೆ ನೀಡಲಾಯಿತು. ಲಸಿಕೆಯನ್ನು ನೀಡುವ ದಿನಗಳಂದು, ನಮ್ಮ ಮುಂಚೂಣಿ ಆರೋಗ್ಯ ಕಾರ್ಯಕರ್ತರು—ಸಮುದಾಯ ಆರೋಗ್ಯ ಸಹಾಯಕರು—ನೆನಪಿಸುವುದು, ಜೊತೆಗೆ ಹೋಗುವುದು ಮತ್ತು ಸ್ಥಳದಲ್ಲೇ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಕುಟುಂಬಗಳಿಗೆ ಬೆಂಬಲ ನೀಡಿದರು, ಇದು ಸಮುದಾಯಗಳು ಮತ್ತು ಆರೋಗ್ಯ ಸೇವೆ ಒದಗಿಸುವವರ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಕುಟುಂಬಗಳು ಸ್ಥಳಾಂತರಗೊಂಡಾಗಲೂ ನಿರಂತರವಾಗಿ ನಿಗಾ ಇಡುವ ಮೂಲಕ ಆರೋಗ್ಯ ಸೇವೆಯು ನಿರಂತರವಾಗಿ ಸಿಗುವುದನ್ನು ಕಾಯ್ದುಕೊಳ್ಳಲಾಯಿತು.
ಬದಲಾವಣೆ ಎಂದರೆ ಹೇಗಿರುತ್ತದೆ
ವೇಗವಾಗಿ ಬದಲಾಗುತ್ತಿರುವ ನಗರದ ವಸತಿ ಪ್ರದೇಶಗಳಲ್ಲಿ ಯಾವ ಮಕ್ಕಳಿಗೆ ಲಸಿಕೆ ಹಾಕಬೇಕಾಗಿದೆ ಎನ್ನುವುದನ್ನು ಪತ್ತೆ ಮಾಡುವುದು ಕಷ್ಟಕರವಾಗಿರುವಾಗ, ಜಂಟಿಯಾಗಿ ಯೋಜನೆ ಮಾಡುವುದು, ಸಮುದಾಯವನ್ನು ಸಜ್ಜುಗೊಳಿಸುವುದು, ಲಸಿಕೆ ಹಾಕಿಸಿಕೊಳ್ಳಬೇಕಾದ ಮಕ್ಕಳ ಪಟ್ಟಿ ಮಾಡುವುದು, ಮತ್ತೆ ಮತ್ತೆ ಭೇಟಿ ಮಾಡುವುದು ಮತ್ತು ಲಸಿಕೆ ಹಾಕುವ ಸಮಯದಲ್ಲಿ ಆ ಸ್ಥಳದಲ್ಲಿ ಸಮನ್ವಯದಿಂದ ಕೆಲಸ ಮಾಡುವುದು ಮುಂತಾದ ಉಪಕ್ರಮಗಳು ಅಗತ್ಯ ಲಸಿಕೆಗಳು ಮಕ್ಕಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳವಲ್ಲಿ ಸಹಾಯ ಮಾಡಿವೆ.
ಕಾಲ ಕಳೆದಂತೆ, ಪಿ ಎಚ್ ಸಿ ತಂಡಗಳು, ಎ ಎನ್ ಎಂ ಗಳು ಮತ್ತು ಇತರ ಮುಂಚೂಣಿ ಕಾರ್ಯಕರ್ತರೊಂದಿಗೆ ನಿರಂತರವಾದ ಸಮನ್ವಯ ಮತ್ತು ಬಾಂಧವ್ಯವನ್ನು ಬೆಳೆಸಿಕೊಂಡಿರುವುದು ವಿಶ್ವಾಸವನ್ನು ಬಲಪಡಿಸಿದೆ, ಸಂವಹನವನ್ನು ಉತ್ತಮಪಡಿಸಿದೆ ಮತ್ತು ಲಸಿಕೆ ಹಾಕುವ ಪ್ರಕ್ರಿಯೆಯ ಚಟುವಟಿಕೆಗಳನ್ನು ಹೆಚ್ಚು ನಿಯತವಾಗಿ ಯೋಜಿಸಲು ಅನುವು ಮಾಡಿಕೊಟ್ಟಿದೆ. ಇದರ ಪರಿಣಾಮವಾಗಿ, ಈ ವಸತಿ ಪ್ರದೇಶಗಳಲ್ಲಿ ನಡೆಸಲಾಗುವ ಲಸಿಕೆ ಹಾಕುವ ಕಾರ್ಯಕ್ರಮದ ಸಂಖ್ಯೆಯು ತಿಂಗಳಿಗೆ ನಾಲ್ಕಕ್ಕಿಂತ ಹೆಚ್ಚಾಗಿದ್ದು ಗಮನಾರ್ಹವಾಗಿದೆ. ಪ್ರತಿ ಕಾರ್ಯಕ್ರಮವು ಈಗ ಸುಮಾರು 40-50 ಮಕ್ಕಳನ್ನು ತಲುಪುತ್ತದೆ, ಇದು ಹೆಚ್ಚಿನ ಸಂಖ್ಯೆಯ ಮಕ್ಕಳು—ವಿಶೇಷವಾಗಿ ವಲಸಿಗ ಮತ್ತು ಹಿಂದುಳಿದ ಕುಟುಂಬಗಳ ಮಕ್ಕಳು—ತಮ್ಮ ಸಮುದಾಯಗಳ ವಾಸಸ್ಥಳಗಳಿಗೆ ಹತ್ತಿರದಲ್ಲೇ ನಿಯತವಾಗಿ ಲಸಿಕೆಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ.

ಈ ಸುಧಾರಣೆಗಳು ಸಮುದಾಯ ಮಟ್ಟದ ಪ್ರಯತ್ನಗಳು ಮತ್ತು ಸ್ಥಳೀಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವಿನ ಒಗ್ಗೂಡುವಿಕೆಯನ್ನು ಪ್ರತಿಬಿಂಬಿಸುತ್ತವೆ, ಇದು ಉತ್ತಮ ಆರೋಗ್ಯ ಸೇವೆಯನ್ನು ನಿರಂತರವಾಗಿ ಪಡೆದುಕೊಳ್ಳುವುದಕ್ಕೆ ಮತ್ತು ನಿಗಾ ಇಡುವುದಕ್ಕೆ ಸಹಾಯ ಮಾಡುತ್ತದೆ. ಈ ಸಹಯೋಗದ ವಿಧಾನವು ಕಟ್ಟಕಡೆಯ ಮಗುವಿಗೂ, ವಿಶೇಷವಾಗಿ ವಲಸೆ ಮತ್ತು ಹಿಂದುಳಿದ ವಸತಿ ಪ್ರದೇಶಗಳಲ್ಲಿ ನಿಯತವಾಗಿ ಲಸಿಕೆ ಹಾಕಿಸಿಕೊಳ್ಳುವುದರಿಂದ ಮಕ್ಕಳು ಹೆಚ್ಚಾಗಿ ತಪ್ಪಿಸಿಕೊಳ್ಳುವ ಕಡೆಗಳಲ್ಲಿ ಲಸಿಕೆಯನ್ನು ತಲುಪಿಸುವ ಪ್ರಯತ್ನಗಳನ್ನು ಬಲಪಡಿಸಿದೆ. ಜಂಟಿಯಾಗಿ ಯೋಜನೆ ಮಾಡುವುದು, ಸಮುದಾಯವನ್ನು ಸಜ್ಜುಗೊಳಿಸುವುದು, ಲಸಿಕೆ ಹಾಕಿಸಿಕೊಳ್ಳಬೇಕಾದ ಮಕ್ಕಳ ಪಟ್ಟಿ ಮಾಡುವುದು, ಮತ್ತೆ ಭೇಟಿ ನೀಡುವುದು ಮತ್ತು ಲಸಿಕೆ ಹಾಕುವ ಸಮಯದಲ್ಲಿ ಆ ಸ್ಥಳದಲ್ಲಿ ಸಮನ್ವಯದಿಂದ ಕೆಲಸ ಮಾಡುವುದರ ಮೂಲಕ, ವೇಗವಾಗಿ ಬದಲಾಗುತ್ತಿರುವ ನಗರದ ವಸತಿ ಪ್ರದೇಶಗಳಲ್ಲಿ ಯಾವ ಮಕ್ಕಳಿಗೆ ಲಸಿಕೆ ಹಾಕಬೇಕಾಗಿದೆ ಎನ್ನುವುದನ್ನು ಪತ್ತೆ ಮಾಡುವುದು ಕಷ್ಟಕರವಾಗಿರುವಾಗ, ಈ ಉಪಕ್ರಮಗಳು, ಅಗತ್ಯ ಲಸಿಕೆಗಳು ಮಕ್ಕಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿವೆ.
ಸಮುದಾಯಗಳು ಈಗ ಲಸಿಕಾ ಹಾಕುವ ಪ್ರಕ್ರಿಯೆಯ ಬಗ್ಗೆ ಹೆಚ್ಚು ಪರಿಚಿತವಾಗಿವೆ ಹಾಗೂ ಈ ಪ್ರಕ್ರಿಯೆಯೊಂದಿಗೆ ಉತ್ತಮವಾಗಿ ಹೊಂದಿಕೊಂಡಿವೆ. ಅರ್ಹ ಮಕ್ಕಳನ್ನು ಗುರುತಿಸಲು, ಕುಟುಂಬಗಳನ್ನು ಸಜ್ಜುಗೊಳಿಸಲು ಮತ್ತು ಹೊಸದಾಗಿ ಬಂದ ಕುಟುಂಬಗಳನ್ನು ಲಸಿಕೆ ಹಾಕುವ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲು ಎ ಎನ್ ಎಂ ಗಳು ಮತ್ತು ಸಿ ಎಚ್ ಎ ಗಳು (ಸಮುದಾಯ ಆರೋಗ್ಯ ಸಹಾಯಕರು) ನಿಕಟವಾಗಿ ಕೆಲಸ ಮಾಡುತ್ತಾರೆ. ಬೆಳ್ಳಂದೂರಿನ ಅಂಗನವಾಡಿ ಕೇಂದ್ರದಲ್ಲಿ ಈಗ ನಿಯತವಾಗಿ ಲಸಿಕೆ ಹಾಕುವ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಅಲ್ಲಿ ಮಕ್ಕಳು ಪ್ರತಿ ತಿಂಗಳು ಲಸಿಕೆಗಳನ್ನು ಪಡೆಯುತ್ತಾರೆ. ಅವರ ಲಸಿಕೆ ಹಾಕಿಸಿಕೊಂಡಿರುವ ಮಾಹಿತಿಯನ್ನು ‘ತಾಯಿ ಕಾರ್ಡ್’ನಲ್ಲಿ (ಕರ್ನಾಟಕದಲ್ಲಿ ತಾಯಿ ಮತ್ತು ಮಕ್ಕಳ ರಕ್ಷಣೆ ಕಾರ್ಡ್ ಅನ್ನು ಹೀಗೆ ಕರೆಯಲಾಗುತ್ತದೆ) ಮತ್ತು ನಮ್ಮ ದಾಖಲೆಗಳಲ್ಲಿ ನವೀಕರಿಸಲಾಗುತ್ತದೆ, ಇದು ಮುಂದಿನ ಲಸಿಕೆ ತೆಗೆದುಕೊಳ್ಳಲು ನಿಗಾ ಇಡುವ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. ಇದು ಲಸಿಕೆ ಹಾಕುವ ಪ್ರಕ್ರಿಯೆಯ ಬಗ್ಗೆ ಪೋಷಕರ ಮನೋಭಾವದಲ್ಲಿ ಗೋಚರಿಸುವಂಥ ಬದಲಾವಣೆಗೂ ಕಾರಣವಾಗಿದೆ. ಒಬ್ಬ ಸಮುದಾಯ ಆರೋಗ್ಯ ಸಹಾಯಕರು ಹಂಚಿಕೊಂಡಂತೆ, “ನಾವು ಮನೆ ಮನೆಗೆ ಹೋದಾಗ, ಪೋಷಕರು ನಿರಾಳರಾಗುತ್ತಾರೆ. ಈಗ ಅವರು ಯಾವುದೇ ಭಯವಿಲ್ಲದೆ ಲಸಿಕೆ ಹಾಕಿಸಲು ಬರುತ್ತಾರೆ.”
