ಕೆಲಸವನ್ನು ಹುಡುಕುತ್ತಾ ಮತ್ತು ಬದುಕುಳಿಯಲು ಕುಟುಂಬಗಳು ಮತ್ತು ವ್ಯಕ್ತಿಗಳು ಭಾರತದ ದೂರದ ಮೂಲೆಗಳಿಂದ ಬೆಂಗಳೂರಿಗೆ ಬಹುಕಾಲದಿಂದಲೂ ಬರುತ್ತಿದ್ದಾರೆ. ಅವರ ಹಳ್ಳಿಗಳಲ್ಲಿ ಉದ್ಯೋಗಗಳು ಅಪರೂಪವಾಗಿವೆ ಮತ್ತು ಕುಟುಂಬವನ್ನು ಬೆಂಬಲಿಸಲು ಆದಾಯವು ಬಹಳ ಚಿಕ್ಕದಾಗಿದೆ. ಉತ್ತಮ ಭವಿಷ್ಯದ ಕುರಿತಾದ ಭರವಸೆಯೊಂದಿಗೆ ಅವರು ಈ ನಗರಕ್ಕೆ ದೀರ್ಘ ಪ್ರಯಾಣವನ್ನು ಮಾಡುತ್ತಾರೆ.
ಅವರು ಮೊದಲಿಗೆ ಬಂದಾಗ ಪ್ರತಿಯೊಂದೂ ಅಪರಿಚಿತವಾಗಿರುತ್ತದೆ, ನಗರವು ಸಂಕಷ್ಟಗಳನ್ನು ತರುತ್ತದೆ, ಭಾಷೆ ಗೊತ್ತಿರುವುದಿಲ್ಲ ಮತ್ತು ನಗರದ ಕೊಳಚೆಯ ಹೊರೆಯು ಅವರ ಬಾಗಿಲಿನಲ್ಲಿ ಇರುತ್ತದೆ. ಯಾವುದೇ ಶಾಶ್ವತವಾದ ಆಶ್ರಯವಿಲ್ಲದೆ ಕುಟುಂಬಗಳು ತಗಡಿನ ಗುಡಿಸಲುಗಳ ಗುಂಪುಗಳಲ್ಲಿ ಆಶ್ರಯ ಪಡೆಯುತ್ತವೆ. ಪ್ರತಿಯೊಂದು ಕುಟುಂಬವು ಕೇವಲ ಒಂದು ಕೊಠಡಿಯಲ್ಲಿ ಬದುಕಿರುತ್ತದೆ ಮತ್ತು ಅವರಿಗೆ ಇಡಿಯ ವಾರಕ್ಕೆ ಮೂರು ಡ್ರಮ್ ಗಳಷ್ಟು ನೀರು ಸಿಗುತ್ತದೆ, 15 ಕುಟುಂಬಗಳೊಂದಿಗೆ ಒಂದೇ ಸ್ನಾನದ ಮನೆಯನ್ನು ಹಂಚಿಕೊಳ್ಳಬೇಕಾಗುತ್ತದೆ. ಯಾವುದೇ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೈರ್ಮಲ್ಯ ಎಂಬುದು ಒಂದು ಸತತವಾದ ಹೋರಾಟವಾಗುತ್ತದೆ.
ಇಂತಹ ಪರಿಸ್ಥಿತಿಗಳು ಇದ್ದಾಗ ಅವರು ಬದುಕುಳಿಯುವುದಕ್ಕಾಗಿ ದುಡಿಯುತ್ತಾರೆ. ಅವರಿಗೆ ದೊರಕುವ ಕೆಲಸಗಳು ಸಾಮಾನ್ಯವಾಗಿ ಕಸವನ್ನು ವಿಂಗಡಿಸುವುದು, ಕಟ್ಟಡದ ಕೆಲಸ ಅಥವಾ ವಾಣಿಜ್ಯ ಕಂಪನಿಗಳಿಗಾಗಿ ಸರಬರಾಜು ಸೇವೆ. ಇನ್ನು ಮಹಿಳೆಯರು ಮನೆ ಕೆಲಸದವರಾಗಿ ಅಥವಾ ಹತ್ತಿರದ ಮನೆಗಳಲ್ಲಿ ಸೌಂದರ್ಯ ಸೇವೆಯನ್ನು ಒದಗಿಸುವುದರಲ್ಲಿ ದುಡಿಯುತ್ತಾರೆ. ಅವರ ಆದಾಯದಿಂದಾಗಿ ಹೇಗೋ ಆಹಾರವನ್ನು ಹೊಂದಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಆದರೆ ಆದಾಯವು ಅಸ್ಥಿರವಾಗಿರುತ್ತದೆ, ಮತ್ತು ಬದುಕಲು ಕನಿಷ್ಠ ಜೀವನ ಅವಶ್ಯಕತೆಗಳಿಗೂ ಕಷ್ಟ ಎಂಬಂತೆ ಆಗಿರುತ್ತದೆ.
ಆರೋಗ್ಯ ಸೇವೆಯು ಇನ್ನೊಂದು ಪ್ರಮುಖ ಅಡೆತಡೆಯಾಗಿರುತ್ತದೆ. ಸಾರ್ವಜನಿಕ ಆರೋಗ್ಯ ಸೇವೆಗಳ ಕುರಿತು ಇರುವ ತಿಳುವಳಿಕೆ ಮಿತವಾಗಿರುತ್ತದೆ. ಆಸ್ಪತ್ರೆಗಳು ದೂರದಲ್ಲಿ ಇರುತ್ತವೆ. ಭಾಷೆ ಒಂದು ಅಡಚಣೆಯಾಗಿರುತ್ತದೆ ಮತ್ತು ರಾಜ್ಯ ಸರ್ಕಾರದ ಗುರುತಿನ ಚೀಟಿ ಇಲ್ಲದಿರುವುದು ಈ ನಿವಾಸಿಗಳನ್ನು ದುಬಾರಿಯಾದ ಖಾಸಗಿ ಚಿಕಿತ್ಸಾಲಯಗಳ ಕಡೆಗೆ ಅಥವಾ ಅರ್ಹತೆ ಇಲ್ಲದಿರುವ ವೈದ್ಯರ ಕಡೆಗೆ ತಳ್ಳುತ್ತವೆ. ಅನೇಕರು ಸ್ಥಳೀಯ ಔಷಧಾಲಯ ಅಥವಾ ಪುಟ್ಟ ಚಿಕಿತ್ಸಾಲಯಗಳ ಮೇಲೆ ಅವಲಂಬಿತರಾಗುತ್ತಾರೆ. ಅಲ್ಲಿ ವೆಚ್ಚ ದುಬಾರಿಯಾಗಿರುತ್ತದೆ ಮತ್ತು ಚಿಕಿತ್ಸೆಯು ಅನಿಶ್ಚಿತವಾಗಿರುತ್ತದೆ.
ಮೇಲೆ ನೀಡಿರುವ ಚಿತ್ರಣವು ನಗರದ ವಿವಿಧ ಭಾಗಗಳಲ್ಲಿ ವಾಸವಾಗಿರುವ ಅನೇಕ ವಲಸಿಗರ ಮಟ್ಟಿಗೆ ಸತ್ಯವಾದದ್ದು. ಅಂತಹದೊಂದು ವಲಸಿಗರ ಬಡಾವಣೆಯು, ಬೆಂಗಳೂರಿನ ತುಬರಹಳ್ಳಿಯಲ್ಲಿ ಇದೆ. ಇಲ್ಲಿ ತಾನಾಲ್ ಎಂಬ ಲಾಭೋದ್ದೇಶರಹಿತ ಸಂಘಟನೆಯು ಈ ಸವಾಲುಗಳನ್ನು ಎದುರಿಸುವಲ್ಲಿ ಇತ್ತೀಚೆಗೆ ಸ್ವಲ್ಪ ಕೆಲಸ ಮಾಡಿದೆ. ಒಂದಷ್ಟು ಜನ ಸಾಮುದಾಯಿಕ ಆರೋಗ್ಯ ಕಾರ್ಯಕರ್ತರ ಪಡೆಯೊಂದಿಗೆ ಅವರು ಈ ಕಂದರವನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ.
ಪ್ರತಿಯೊಂದು ಕುಟುಂಬವು ಕೇವಲ ಒಂದು ಕೊಠಡಿಯಲ್ಲಿ ಬದುಕಿರುತ್ತದೆ ಮತ್ತು ಅವರಿಗೆ ಇಡಿಯ ವಾರಕ್ಕೆ ಮೂರು ಡ್ರಮ್ ಗಳಷ್ಟು ನೀರು ಸಿಗುತ್ತದೆ, 15 ಕುಟುಂಬಗಳೊಂದಿಗೆ ಒಂದೇ ಸ್ನಾನದ ಮನೆಯನ್ನು ಹಂಚಿಕೊಳ್ಳಬೇಕಾಗುತ್ತದೆ.
ಮಧ್ಯಪ್ರವೇಶ
ಅದೇ ವಸತಿ ಪ್ರದೇಶಗಳಲ್ಲಿ ವಾಸವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ತರಬೇತಿಯನ್ನು ಹೊಂದಿರುವ ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು, ಮನೆಯಿಂದ ಮನೆಗೆ ತೆರಳಿ, ಕುಟುಂಬಗಳನ್ನು ಭೇಟಿಯಾಗಿ ಆರೋಗ್ಯದ ಕುರಿತಾದ ಮಾಹಿತಿಯನ್ನು ಸರಳವಾದ ಮಾತುಗಳಲ್ಲಿ ಹಂಚಿಕೊಳ್ಳುತ್ತಾರೆ ಮತ್ತು ನಗರದಲ್ಲಿರುವ ಸಾರ್ವಜನಿಕ ಆರೋಗ್ಯ ಸೇವಾ ವ್ಯವಸ್ಥೆಗಳನ್ನು ಪಡೆದುಕೊಳ್ಳುವಲ್ಲಿ ಬೆಂಬಲಿಸುತ್ತಾರೆ. ಅವರನ್ನು ಕೆಲಸಕ್ಕೆ ತೆಗೆದುಕೊಂಡು ಸಂಘಟನೆಯು ತರಬೇತಿಯನ್ನು ನೀಡಿರುತ್ತದೆ ಮತ್ತು ಅವರಿಗೆ ಸಮುದಾಯದ ಒಳಗೆ ಆಳವಾದ ಸಂಪರ್ಕಗಳು ಇರುತ್ತವೆ. ಅವರ ಹಾಜರಿಯು ಒಂದು ಮುಖ್ಯವಾದ ಕಂದರವನ್ನು ಮುಚ್ಚುತ್ತದೆ ಹಾಗೂ ಪುನರ್ ಆಶ್ವಾಸನೆಯನ್ನು ಮತ್ತು ಕಾರ್ಯಸಂಬಂಧಿ ನೆರವನ್ನು ನೀಡುತ್ತದೆ.

ಕುಟುಂಬಗಳನ್ನು ಚಿಕಿತ್ಸಾ ಕಾಳಜಿಯೊಂದಿಗೆ ಸಂಪರ್ಕಿಸುತ್ತಾ ಮತ್ತು ಔಷಧಿ ಹಾಗೂ ಪ್ರಯೋಗಾಲಯದ ಪರೀಕ್ಷೆಗಳನ್ನು ಪಡೆದುಕೊಳ್ಳಲು ನೆರವಾಗುತ್ತಾ, ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು ತುಬರಹಳ್ಳಿಯ ನಿವಾಸಿಗಳಿಗೆ ಆರೋಗ್ಯ ಸೇವೆಯು ತುಂಬಾ ದೂರವಾಗದಿರುವಂತೆ ನೋಡಿಕೊಳ್ಳುತ್ತಾರೆ.
ಸುರಕ್ಷಿತ ತಾಯ್ತನದತ್ತ ಬಬಿತಾಳ ಯಾತ್ರೆ
ಪಶ್ಚಿಮ ಬಂಗಾಳದಿಂದ ಬಂದಿರುವ 26 ವರ್ಷ ವಯಸ್ಸಿನ ಮಹಿಳೆಯಾದ ಬಬಿತಾ ತನ್ನ ಗಂಡ ಮತ್ತು ಮೂವರು ಚಿಕ್ಕ ಮಕ್ಕಳೊಂದಿಗೆ ತುಬರಹಳ್ಳಿ ವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಕುಟುಂಬವು ಸುಮಾರು ಐದು ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿದೆ. ಆಕೆಯ ಗಂಡ ಕಸವನ್ನು ವಿಂಗಡಿಸುವ ಕೆಲಸವನ್ನು ಮಾಡುತ್ತಾರೆ ಮತ್ತು ಕೆಲವು ವಾಣಿಜ್ಯ ಸೇವೆ ನೀಡುವ ಸಂಸ್ಥೆಯ ಜೊತೆಯಲ್ಲಿ ಆಹಾರ ಅಥವಾ ದವಸಧಾನ್ಯವನ್ನು ಸರಬರಾಜು ಮಾಡುವವರಾಗಿ ಕೆಲಸ ಮಾಡುತ್ತಾರೆ. ಹತ್ತಿರದ ವಸತಿ ಸಮುಚ್ಛಯಗಳಲ್ಲಿ ಬಬಿತಾ ಮನೆ ಕೆಲಸದವರಾಗಿ ಕೆಲಸ ಮಾಡುತ್ತಾರೆ.
ಕುಟುಂಬಗಳನ್ನು ಚಿಕಿತ್ಸಾ ಕಾಳಜಿಯೊಂದಿಗೆ ಸಂಪರ್ಕಿಸುತ್ತಾ ಮತ್ತು ಔಷಧಿ ಹಾಗೂ ಪ್ರಯೋಗಾಲಯದ ಪರೀಕ್ಷೆಗಳನ್ನು ಪಡೆದುಕೊಳ್ಳಲು ನೆರವಾಗುತ್ತಾ, ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು ತುಬರಹಳ್ಳಿಯ ನಿವಾಸಿಗಳಿಗೆ ಆರೋಗ್ಯ ಸೇವೆಯು ತುಂಬಾ ದೂರವಾಗದಿರುವಂತೆ ನೋಡಿಕೊಳ್ಳುತ್ತಾರೆ.
ಬಬಿತಾ ತನ್ನ ಎರಡನೆಯ ಮಗುವಿಗೆ ಗರ್ಭಿಣಿಯಾಗಿದ್ದಾಗ ಪ್ರಸವಕ್ಕೆ ಎಂದು ಪಶ್ಚಿಮ ಬಂಗಾಳದಲ್ಲಿ ಇರುವ ತನ್ನ ಹುಟ್ಟೂರಿಗೆ ತೆರಳಿದ್ದರು. ಆ ಸಮಯದಲ್ಲಿ ಅವರಿಗೆ ಬೆಂಗಳೂರಿನಲ್ಲಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವ ಬಗ್ಗೆ ಖಾತ್ರಿ ಇರಲಿಲ್ಲ ಮತ್ತು ಅದರಿಂದಾಗಿ ಪರಿಚಿತವಾಗಿರುವ ತನ್ನ ಹಳ್ಳಿಯ ಮೇಲೆ ಮತ್ತು ಕುಟುಂಬದ ಬೆಂಬಲದ ಮೇಲೆ ಆಕೆ ಅವಲಂಬಿಸಿದ್ದರು.
ಆದರೆ ಆಕೆ ಮೂರನೇ ಬಾರಿ ಗರ್ಭಿಣಿಯಾದಾಗ ಪರಿಸ್ಥಿತಿಯು ಭಿನ್ನವಾಗಿತ್ತು. ಕವಿತಾ ಕುಮಾರಿ ಎಂಬ ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು ಆಕೆ ಇದ್ದ ವಸತಿ ಪ್ರದೇಶಕ್ಕೆ ನಿಯತವಾಗಿ ಭೇಟಿ ನೀಡುತ್ತಿದ್ದರು. ಕವಿತಾ ಈಕೆಗೆ ಗರ್ಭಾವಸ್ಥೆಯನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮತ್ತು ತಾಯಿ ಕಾರ್ಡ್ (ತಾಯಿ ಮತ್ತು ಮಗುವಿನ ಸಂರಕ್ಷಣೆ – ಎಂಸಿಪಿ ಕಾರ್ಡ್) ಬಗ್ಗೆ ವಿವರಿಸಿದರು ಮತ್ತು ಬೆಂಗಳೂರಿನಲ್ಲಿ ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಪ್ರಸವ ಸಂಬಂಧಿ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿಕೊಟ್ಟರು.
Subscribe to stay connected
We will send you a monthly newsletter listing all the articles that were published in the month.
ಗರ್ಭಾವಸ್ಥೆಯು ಮುಂದುವರೆದ ಅವಧಿಯಲ್ಲಿ ಕವಿತಾ ಅವರು ಬಬಿತಾ ಮತ್ತು ಆಕೆಯ ಕುಟುಂಬಕ್ಕೆ ಮಗು ಹುಟ್ಟುವುದಕ್ಕೆ ಸಂಬಂಧಿಸಿದಂತೆ ಮಾಡಿಕೊಳ್ಳಬೇಕಾದ ಸಿದ್ಧತೆಯ ಬಗ್ಗೆ ತಿಳಿಸಿದರು. ಸಾರಿಗೆ ಮತ್ತು ಕೆಲವು ಅವಶ್ಯಕ ಬಾಬ್ತುಗಳಿಗಾಗಿ ಒಂದಿಷ್ಟು ಉಳಿತಾಯವನ್ನು ಮಾಡಿಟ್ಟುಕೊಳ್ಳಬೇಕೆಂದು ಆಕೆ ಸಲಹೆ ನೀಡಿದರು. ಮತ್ತು ಆಸ್ಪತ್ರೆಗೆ ಸೂಕ್ತ ಸಮಯದಲ್ಲಿ ಪ್ರಯಾಣ ಮಾಡಲು ವ್ಯವಸ್ಥೆ ಮಾಡಿಕೊಳ್ಳುವುದರ ಬಗ್ಗೆ ವಿವರಿಸಿದರು. ಹಾಗೂ ಪ್ರಸವದ ನಂತರ ಮಾಡಿಕೊಳ್ಳಬಹುದಾದ ಕುಟುಂಬ ಯೋಜನೆಯ ಆಯ್ಕೆಗಳ ಬಗ್ಗೆ ವಿವರಿಸಿದರು. ಜೊತೆಗೆ ಕವಿತಾ ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ ಎಚ್ ಸಿ) ದೊಂದಿಗೆ ಬಬಿತಾ ಅವರ ಸಂಪರ್ಕವನ್ನು ಏರ್ಪಡಿಸಿದರು. ಅಲ್ಲಿ ಆಕೆಯ ಎಲ್ಲಾ ಪ್ರಸವಪೂರ್ವ ಕಾಳಜಿ ಪರೀಕ್ಷೆಗಳಿಗೆ ಆಕೆ ಹಾಜರಿದ್ದರು ಮತ್ತು ಆಕೆಯ ತಾಯಿ ಕಾರ್ಡ್ ಅನ್ನು ಅಪ್ಡೇಟ್ ಮಾಡಿದರು.
ಕವಿತಾ ಈಕೆಗೆ ಗರ್ಭಾವಸ್ಥೆಯನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಮತ್ತು ತಾಯಿ ಕಾರ್ಡ್ (ತಾಯಿ ಮತ್ತು ಮಗುವಿನ ಸಂರಕ್ಷಣೆ – ಎಂಸಿಪಿ ಕಾರ್ಡ್) ಬಗ್ಗೆ ವಿವರಿಸಿದರು ಮತ್ತು ಬೆಂಗಳೂರಿನಲ್ಲಿ ಯಾವುದೇ ವೆಚ್ಚವಿಲ್ಲದೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಪ್ರಸವ ಸಂಬಂಧಿ ಸೇವೆಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿಕೊಟ್ಟರು.

ಬಬಿತಾರವರ ಯಾತ್ರೆ ನಗರ ವಸತಿ ಪ್ರದೇಶಗಳಲ್ಲಿ ಒಬ್ಬ ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು ಲಭ್ಯವಿದ್ದರೆ, ಅದು ಗರ್ಭಿಣಿ ಸ್ತ್ರೀಯರು ತಾಯ್ತನದ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆದುಕೊಳ್ಳುವಲ್ಲಿ ಹೇಗೆ ನೆರವಾಗುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಒಬ್ಬ ಸಮುದಾಯ ಕಾರ್ಯಕರ್ತರ ಬೆಂಬಲದಿಂದಾಗಿ ಬಬಿತಾ ಬೆಂಗಳೂರಿನಲ್ಲಿ ಉಳಿದುಕೊಂಡು ಉಚಿತ ಸೇವೆಗಳನ್ನು ಪಡೆದುಕೊಳ್ಳುವುದು ಮತ್ತು ಮಗುವಿಗೆ ಸುರಕ್ಷಿತವಾಗಿ ಪ್ರಸವ ನೀಡುವುದು ಖಚಿತಪಡಿಸಲ್ಪಟ್ಟಿತು.
ಗರ್ಭಾವಸ್ಥೆಯ ಕೊನೆಯ ತಿಂಗಳಿನಲ್ಲಿ ಕವಿತಾರವರು ತಮ್ಮ ಭೇಟಿಯನ್ನು ಪದೇಪದೇ ಮಾಡುತ್ತಾ ಬಬಿತಾ ಪ್ರಸವಕ್ಕೆ ಸರಿಯಾಗಿ ಸಿದ್ದರಾಗುವುದನ್ನು ಖಚಿತಪಡಿಸಿದರು. ಈ ರೀತಿಯ ನಿರಂತರವಾದ ಬೆಂಬಲದೊಂದಿಗೆ ಬಬಿತಾ ಎಲ್ಲಾ ಪ್ರಸವಪೂರ್ವ ಕಾಳಜಿ ಭೇಟಿಗಳನ್ನು ಮುಗಿಸಿದರು ಮತ್ತು ತನ್ನ ಆರೋಗ್ಯದ ಬಗ್ಗೆ ಆತ್ಮವಿಶ್ವಾಸದಿಂದ ಇದ್ದರು. ಪ್ರಸವದ ಸಮಯ ಬಂದಾಗ ಬಬಿತಾ ತನ್ನ ಮಗುವಿಗೆ ಸುರಕ್ಷಿತವಾಗಿ ವಾಣಿ ವಿಲಾಸ್ ಆಸ್ಪತ್ರೆ ಎಂಬ ಸರ್ಕಾರಿ ಆಸ್ಪತ್ರೆಯಲ್ಲಿ ಜನ್ಮ ನೀಡಿದರು. ಪ್ರಸವದ ನಂತರ ಸಹ ಕವಿತಾ ಅವರು ಆಗ ತಾನೇ ಜನಿಸಿದ ಮಗುವಿಗೆ ಕಾಳಜಿ ನೀಡುವ ಬಗ್ಗೆ, ವ್ಯಾಕ್ಸಿನ್ ಚುಚ್ಚುಮದ್ದಿನ ವೇಳಾಪಟ್ಟಿಯ ಬಗ್ಗೆ ಮತ್ತು ಕುಟುಂಬ ಯೋಜನಾ ವಿಧಾನಗಳ ಬಗ್ಗೆ ಆಕೆಗೆ ಸಲಹೆ ನೀಡುತ್ತಾ ಬೆಂಬಲವನ್ನು ಮುಂದುವರೆಸಿದರು.
ಬಬಿತಾರವರ ಯಾತ್ರೆ ನಗರ ವಸತಿ ಪ್ರದೇಶಗಳಲ್ಲಿ ಒಬ್ಬ ಸಾಮುದಾಯಿಕ ಆರೋಗ್ಯ ಕಾರ್ಯಕರ್ತರು ಲಭ್ಯವಿದ್ದರೆ, ಅದು ಗರ್ಭಿಣಿ ಸ್ತ್ರೀಯರು ತಾಯ್ತನದ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆದುಕೊಳ್ಳುವಲ್ಲಿ ಹೇಗೆ ನೆರವಾಗುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ. ಒಬ್ಬ ಸಮುದಾಯ ಕಾರ್ಯಕರ್ತರ ಬೆಂಬಲದಿಂದಾಗಿ ಬಬಿತಾ ಬೆಂಗಳೂರಿನಲ್ಲಿ ಉಳಿದುಕೊಂಡು ಉಚಿತ ಸೇವೆಗಳನ್ನು ಪಡೆದುಕೊಳ್ಳುವುದು ಮತ್ತು ಮಗುವಿಗೆ ಸುರಕ್ಷಿತವಾಗಿ ಪ್ರಸವ ನೀಡುವುದು ಖಚಿತಪಡಿಸಲ್ಪಟ್ಟಿತು.
