ಆರೋಗ್ಯದ ಸಾಂಸ್ಕೃತಿಕ ವಿಕಾಸ: ವರ್ತನೆಯು ಸಂಸ್ಕೃತಿಯಾಗಿ ಬದಲಾದಾಗ ಮಾತ್ರ ಆ ಬದಲಾವಣೆಯು ಯಶಸ್ವಿಯಾಗುವುದೇಕೇ 

ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ವಿಜ್ಞಾನವನ್ನು ಸಂಸ್ಕೃತಿಯೊಂದಿಗೆ, ಅರ್ಥಮಾಡಿಕೊಳ್ಳುವಿಕೆಯೊಂದಿಗೆ ಹಾಗೂ ಅಸ್ಮಿತೆಯೊಂದಿಗೆ ಜೋಡಿಸಿದಾಗ ಮಾತ್ರ ವರ್ತನೆಯಲ್ಲಿನ ಬದಲಾವಣೆಗಳು ಸ್ಥಿರವಾಗಿ ಉಳಿಯಲು ಸಾಧ್ಯ.

ಆರೋಗ್ಯದ ಸಾಂಸ್ಕೃತಿಕ ವಿಕಾಸ: ವರ್ತನೆಯು ಸಂಸ್ಕೃತಿಯಾಗಿ ಬದಲಾದಾಗ ಮಾತ್ರ ಆ ಬದಲಾವಣೆಯು ಯಶಸ್ವಿಯಾಗುವುದೇಕೇ 

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಎಂದೂ ಸಹ ಒಳ್ಳೆಯ ವಿಚಾರಗಳ ಅಭಾವದಿಂದ ಸೊರಗಿಲ್ಲ. ಮೌಖಿಕ ಪುನರ್ಜಲೀಕರಣದ ಚಿಕಿತ್ಸೆಯಿಂದ ಹಿಡಿದು ಲಸಿಕೆ ಹಾಕುವವರೆಗೂ, ಸುರಕ್ಷಿತವಾದ ಮಗುವಿನ ಪ್ರಸವ ಪ್ರಕ್ರಿಯೆಗಳಿಂದ ಹಿಡಿದು ತಂಬಾಕು ಸೇವನೆಯ ನಿಯಂತ್ರಣದವರೆಗೂ ಯಾವುವು ಹೇಗೆ ಕೆಲಸ ಮಾಡುತ್ತವೆ ಎನ್ನುವುದು ನಮಗೆ ತಿಳಿದಿದೆ. ಆದರೂ ಸಹ ವಿವಿಧ ದೇಶಗಳು ಹಾಗೂ ಸಮುದಾಯಗಳಲ್ಲಿ ಒಂದೇ ರೀತಿಯ ಮಧ್ಯಪ್ರವೇಶಗಳು ಗಣನೀಯವಾಗಿ ವಿಭಿನ್ನವಾದ ಫಲಿತಾಂಶಗಳನ್ನು ಉಂಟುಮಾಡುತ್ತವೆ. ಕೆಲವು ಮಧ್ಯಪ್ರವೇಶಗಳು ಬೇರೂರಿ ನಿಂತು ಹಲವಾರು ತಲೆಮಾರುಗಳವರೆಗೂ ಉಳಿದುಬಿಡುತ್ತವೆ, ಇನ್ನೂ ಕೆಲವು ಮಧ್ಯಪ್ರವೇಶಗಳು ಸ್ವಲ್ಪಕಾಲ ಪ್ರಕಾಶಮಾನವಾಗಿ ಬೆಳಗಿ ನಂತರ ನಂದಿ ಹೋಗುತ್ತವೆ. ಇಲ್ಲಿ ಏಳುವ ಪ್ರಶ್ನೆ ಎಂದರೆ ನಮ್ಮ ಮುಂದೆ ಪರಿಣಾಮಕಾರಿಯಾದ ಆರೋಗ್ಯ ಸಂಬಂಧಿ ಕಾರ್ಯತಂತ್ರಗಳು ಇವೆಯೇ ಎಂಬುದಲ್ಲ, ಬದಲಿಗೆ ಈ ಕಾರ್ಯತಂತ್ರಗಳಲ್ಲಿ ಏಕೆ ಕೆಲವು ಮಾತ್ರ ನಮ್ಮ ದೈನಂದಿನ ಜೀವನದ ಭಾಗವಾಗುತ್ತವೆ ಎನ್ನುವುದು. 

ಆರೋಗ್ಯದ ಸಾಂಸ್ಕೃತಿಕ ವಿಕಾಸ (ಸಿ ಇ ಎಚ್ – ಕಲ್ಚರಲ್ ಇವಲ್ಯೂಷನ್ ಆಫ್ ಹೆಲ್ತ್) ಯೋಜನೆಯ ಮೂಲ ವಿನ್ಯಾಸವು ಒಂದು ಸರಳವಾದ ಅವಲೋಕನದೊಂದಿಗೆ ಪ್ರಾರಂಭವಾಗುತ್ತದೆ. ಆರೋಗ್ಯದ ಸುಧಾರಣೆಗಳು ಉಳಿಯುವಂತಾಗಬೇಕೆಂದರೆ ಆಗ ವರ್ತನೆಗಳು ಕೇವಲ ಅನುಸರಣೆಯ ಮಟ್ಟದಲ್ಲಿ ಉಳಿಯದೆ ಜನಗಳ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ಸೇರಿಕೊಳ್ಳಬೇಕು. ಭಾಷೆಗಳು ಮತ್ತು ರೂಢಿರಿವಾಜುಗಳಂತೆಯೇ, ಆರೋಗ್ಯಕ್ಕೆ ಸಂಬಂಧಿಸಿದ ಅಭ್ಯಾಸಗಳು ಸಹ ವಿಕಸನ ಹೊಂದುತ್ತವೆ. ಅವುಗಳನ್ನು ಜನ ಕಲಿತುಕೊಳ್ಳುತ್ತಾರೆ, ಇತರರೊಂದಿಗೆ ಹಂಚಿಕೊಳ್ಳುತ್ತಾರೆ ಸಾಂಕೇತಿಕವಾಗಿಸುತ್ತಾರೆ ಹಾಗೂ ಕ್ರಮೇಣ ಅವು ಮಾಮೂಲಿ ಸಂಗತಿಯಂತೆ ಆಗುತ್ತವೆ. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಪ್ರಯತ್ನಗಳು ಇಂತಹ ವಿಕಸನದ ಪ್ರಕ್ರಿಯೆಯನ್ನು ಬಳಸಿ ನಡೆಯದೆ ಅದರೊಂದಿಗೆ ಕೆಲಸ ಮಾಡಿದಾಗ ಅವು ಯಶಸ್ವಿಯಾಗುತ್ತವೆ. 

ಅತಿಸಾರಕ್ಕೆ ನೀಡುವ ಉಪ್ಪು ಸಕ್ಕರೆ ಮಿಶ್ರಣದ ದ್ರಾವಣವು ಅದು ವೈಜ್ಞಾನಿಕವಾಗಿ ಸೊಗಸಾಗಿದೆ ಎನ್ನುವ ಕಾರಣಕ್ಕಾಗಿ ಯಶಸ್ವಿಯಾದದ್ದಲ್ಲ, ಬದಲಿಗೆ ಅದರ ಬಳಕೆಯ ವಿಧಾನವನ್ನು ಕಲಿಸಲಾಯಿತು, ಅದನ್ನು ಹೆಸರಿಸಲಾಯಿತು, ಪ್ರಾತ್ಯಕ್ಷಿಕೆಯ ಮೂಲಕ ಅದನ್ನು ಮಾಡಿ ತೋರಿಸಲಾಯಿತು ಹಾಗೂ ಮನೆಗಳಲ್ಲಿ ಅನುಸರಿಸುವ ಅಭ್ಯಾಸಗಳೊಂದಿಗೆ ಹಾಗೂ ತಾಯಂದಿರ ತಿಳಿವಳಿಕೆಯೊಂದಿಗೆ ಹೊಂದುವಂತೆ ಮಾಡುವ ಮೂಲಕ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲಾಯಿತು. 

ಸಿ ಇ ಎಚ್ ವಿವಿಧ ಹಂತಗಳಲ್ಲಿ ಬೆಳೆದು ಬಂದ ಈ ಪಯಣವನ್ನು ವಿವರಿಸುತ್ತದೆ. ಜನಗಳ ಜೀವಂತ ಅನುಭವಗಳನ್ನು ಚಾಲ್ತಿಯಲ್ಲಿರುವ ನಂಬಿಕೆಗಳು ಅಥವಾ ಅಭ್ಯಾಸಗಳಿಂದ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗದಿದ್ದಾಗ ಉಂಟಾಗುವ ಸಾಂಸ್ಕೃತಿಕ ಭಿನ್ನಾಭಿಪ್ರಾಯದೊಂದಿಗೆ ಈ ಪಯಣವು ಆರಂಭವಾಗುತ್ತದೆ. ಬಾಂಗ್ಲಾದೇಶದಲ್ಲಿ ಅತಿಸಾರದಿಂದಾಗಿ ಮಕ್ಕಳ ಸಾವು ವ್ಯಾಪಕವಾಗಿ ನಡೆದಾಗ ಇಂತಹ ಒಂದು ಬಿರುಕು ಉಂಟಾಯಿತು. ಅದರಿಂದಾಗಿ ಹೊಸ ವಿವರಣೆಗಳಿಗೆ ಮತ್ತು ಪ್ರತಿಕ್ರಿಯೆಗಳಿಗೆ ಅವಕಾಶ ಉಂಟಾಯಿತು. ಈ ಭಿನ್ನಾಭಿಪ್ರಾಯವನ್ನು ಆಂತರಿಕವಾಗಿ ಜೀರ್ಣಿಸಿಕೊಂಡಿರದಿದ್ದರೆ, ಅದು ಜನಗಳು ತಾವಾಗಿಯೇ ಕಂಡುಕೊಂಡಿದ್ದರು ಎನ್ನುವ ಕಾರಣದಿಂದಾಗಲೀ ಅಥವಾ ಅವರು ಹೊಸದೇನನ್ನೋ ಕಲಿತುಕೊಂಡರು ಎನ್ನುವ ಕಾರಣಕ್ಕಾಗಲೀ ಉಂಟಾಗಿದ್ದರೆ ಆಗ ಅದು ಉಳಿಯುವಂತಹ ಬದಲಾವಣೆ ಉಂಟಾಗಲು ಸಾಧ್ಯವಿಲ್ಲ. ಈ ಹಂತವನ್ನು ಪೂರ್ಣಗೊಳಿಸಬೇಕಾದದ್ದು ಅವಶ್ಯಕ, ಆದರೆ ವರ್ತನೆ ಬದಲಾವಣೆಯ ಕುರಿತು ಮಾಡುವ ಪ್ರಚಾರ ಕಾರ್ಯಕ್ರಮಗಳು ಈ ಹಂತವನ್ನು ಸಂಪೂರ್ಣವಾಗಿ ಕೈಬಿಡುತ್ತವೆ.

ಬದಲಾವಣೆಗಳು ಉಳಿಯಬೇಕೆಂದರೆ, ವರ್ತನೆಗಳು ರೀತಿರಿವಾಜುಗಳನ್ನು ಒಳಗೊಳ್ಳುವುದನ್ನು ಸಾಧಿಸಬೇಕು: ಅವು “ನಮ್ಮಂತಹ ಜನರು” ಮಾಡುವಂಥದ್ದಾಗಬೇಕು, ಇಲ್ಲದಿದ್ದರೆ ಆ ಪಲ್ಲಟವು ಅಧಿಕೃತವಾಗಿ ಒಪ್ಪಿತವಾಗುವುದಕ್ಕಿಂತ ಸಾಮಾಜಿಕ ಘರ್ಷಣೆಯನ್ನು ಉಂಟುಮಾಡುತ್ತವೆ.

A clear glass filled with water next to a silver teaspoon.

ಆದರೆ ಭಿನ್ನಾಭಿಪ್ರಾಯವು ಉಂಟಾಗುವುದು ಮಾತ್ರ ಸಾಕಾಗುವುದಿಲ್ಲ, ಅದರ ಮುಂದುವರಿಕೆಯಾಗಿ ಸಾಂಸ್ಕೃತಿಕ ನಾವೀನ್ಯತೆಯು ಉಂಟಾಗಬೇಕು. ಕೇವಲ ಒಂದು ಜೈವಿಕ ವೈದ್ಯಕೀಯ (ಬಯೋಮೆಡಿಕಲ್) ದ್ರಾವಣವನ್ನು ಪರಿಚಯಿಸಿದರೆ ಸಾಲದು, ಅದನ್ನು ತಿಳಿವಳಿಕೆಯ ಪ್ರಕಾರಗಳಿಗೆ, ರೂಪಕಗಳಿಗೆ ಹಾಗೂ ದೈನಂದಿನ ಚಟುವಟಿಕೆಗಳಿಗೆ ಹೊಂದುವಂತೆ ಮರುರೂಪಿಸಬೇಕು. ಅತಿಸಾರಕ್ಕೆ ನೀಡುವ ಉಪ್ಪು ಸಕ್ಕರೆ ಮಿಶ್ರಣದ ದ್ರಾವಣವು ಅದು ವೈಜ್ಞಾನಿಕವಾಗಿ ಸೊಗಸಾಗಿದೆ ಎನ್ನುವ ಕಾರಣಕ್ಕಾಗಿ ಯಶಸ್ವಿಯಾದದ್ದಲ್ಲ, ಬದಲಿಗೆ ಅದರ ಬಳಕೆಯ ವಿಧಾನವನ್ನು ಕಲಿಸಲಾಯಿತು, ಅದನ್ನು ಹೆಸರಿಸಲಾಯಿತು, ಪ್ರಾತ್ಯಕ್ಷಿಕೆಯ ಮೂಲಕ ಅದನ್ನು ಮಾಡಿ ತೋರಿಸಲಾಯಿತು ಹಾಗೂ ಮನೆಗಳಲ್ಲಿ ಅನುಸರಿಸುವ ಅಭ್ಯಾಸಗಳೊಂದಿಗೆ ಹಾಗೂ ತಾಯಂದಿರ ತಿಳಿವಳಿಕೆಯೊಂದಿಗೆ ಹೊಂದುವಂತೆ ಮಾಡುವ ಮೂಲಕ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲಾಯಿತು. 

ಹಾಗೊಮ್ಮೆ ಭಿನ್ನಾಭಿಪ್ರಾಯಗಳು ಉಂಟಾಗಿ ಹಾಗೂ ಅದಕ್ಕೆ ಸ್ಪಂದಿಸುವಂತಹ ಸಾಂಸ್ಕೃತಿಕ ನಾವೀನ್ಯತೆಯು ಉಂಟಾದಾಗ ಸಾಮಾಜಿಕ ಪ್ರಸರಣದ ಮೂಲಕ ವರ್ತನೆಗಳ ಬದಲಾವಣೆಯು ಹರಡಬೇಕು. ಜನಗಳು ಪ್ರಾಥಮಿಕವಾಗಿ ಕಲಿಯುವುದು ಭಿತ್ತಿಪತ್ರಗಳು ಅಥವಾ ಔಪಚಾರಿಕ ಕಾರ್ಯವಿಧಾನಗಳ ಮೂಲಕ ಅಲ್ಲ, ಬದಲಿಗೆ ನೆರೆಹೊರೆಯವರು, ಹಿರಿಯರು, ಸಮಾನಸ್ಕಂಧರು ಹಾಗೂ ವಿಶ್ವಾಸಾರ್ಹ ಮಧ್ಯವರ್ತಿಗಳಿಂದ ಕಲಿಯುತ್ತಾರೆ. 

ಆದ್ದರಿಂದಲೇ ಯಶಸ್ವಿ ಮಧ್ಯಪ್ರವೇಶಗಳು ನಡೆದ ಕಡೆಯಲ್ಲೆಲ್ಲಾ ಸಮುದಾಯ ಆರೋಗ್ಯ ಕಾರ್ಯಕರ್ತರು, ಸ್ತ್ರೀ ಸಂಘಗಳು ಹಾಗೂ ಸಮಾನಸ್ಕಂಧ ಆಪ್ತ ಸಮಾಲೋಚಕರು ಮತ್ತೆ ಮತ್ತೆ ಕಂಡುಬರುತ್ತಾರೆ, ಅದು ಉತ್ತರ ಕರೇಲಿಯಾದ ಹೃದ್ರೋಗ ಚಿಕಿತ್ಸೆಗೆ ಸಂಬಂಧಿಸಿದ ಕ್ರಾಂತಿಯಿಂದ ಹಿಡಿದು ಜಿಂಬಾಬ್ವೆಯ ಫ್ರೆಂಡ್ ಷಿಪ್ ಬೆಂಚ್ ನವರೆಗೂ (ಸಮುದಾಯ ಆಧಾರಿತ ಮನಃಶಾಸ್ತ್ರೀಯ ಮಧ್ಯಪ್ರವೇಶಗಳು) ಇದನ್ನು ಕಾಣಬಹುದು. ಇಷ್ಟಾದರೂ ಸಹ ಸಾಮಾಜಿಕ ಕಲಿಕೆಯು ಉಳಿಬಾಳಿಕೆಯನ್ನು ಖಚಿತಪಡಿಸುವುದಿಲ್ಲ, ಬದಲಾವಣೆಗಳು ಉಳಿಯಬೇಕೆಂದರೆ ವರ್ತನೆಗಳು  ರೂಢಿರಿವಾಜುಗಳನ್ನು ಒಳಗೊಳ್ಳುವುದನ್ನು ಸಾಧಿಸಬೇಕು: ಬದಲಾವಣೆಗಳು ಉಳಿಯಬೇಕೆಂದರೆ, ವರ್ತನೆಗಳು ರೀತಿರಿವಾಜುಗಳನ್ನು ಒಳಗೊಳ್ಳುವುದನ್ನು ಸಾಧಿಸಬೇಕು: ಅವು “ನಮ್ಮಂತಹ ಜನರು” ಮಾಡುವಂಥದ್ದಾಗಬೇಕು, ಇಲ್ಲದಿದ್ದರೆ ಆ ಪಲ್ಲಟವು ಅಧಿಕೃತವಾಗಿ ಒಪ್ಪಿತವಾಗುವುದಕ್ಕಿಂತ ಸಾಮಾಜಿಕ ಘರ್ಷಣೆಯನ್ನು ಉಂಟುಮಾಡುತ್ತವೆ.

ಉತ್ತಮವಾಗಿ ವಿನ್ಯಾಸಗೊಂಡ ಅನೇಕ ಕಾರ್ಯಕ್ರಮಗಳು ಏಕೆ ಸೋಲುತ್ತವೆ ಎನ್ನುವುದನ್ನು ವಿವರಿಸಲು ಸಿ ಇ ಎಚ್ ಸಹಾಯಮಾಡುತ್ತದೆ. ವರ್ತನೆಯನ್ನು ಬಹಳ ಕಾಲ ಉಳಿಸುವ ಆಳವಾದ ಸಾಂಸ್ಕೃತಿಕ ಪ್ರಕ್ರಿಯೆಗಳಿಗೆ ಗಮನಕೊಡದೆ, ಬಹಳ ಬೇಗನೆ ನಿಲ್ಲಿಸಿ ಬಿಡುತ್ತಾರೆ, ಅಂದರೆ ಕೇವಲ ಮಾಹಿತಿಯನ್ನು ಒದಗಿಸುವುದು, ಸೇವೆಗಳನ್ನು ನೀಡುವುದು ಅಥವಾ ಅಲ್ಪಕಾಲೀನ ಗ್ರಹಿಕೆಗಳಂತಹ ಪ್ರಯತ್ನಗಳಿಗೆ ಸೀಮಿತಗೊಳಿಸುತ್ತಾರೆ.

ಕೊನೆಯದು ಹಾಗೂ ಅತ್ಯಂತ ಹೆಚ್ಚು ನಿರ್ಲಕ್ಷಕ್ಕೆ ಒಳಗಾಗುವುದು ರೀತಿರಿವಾಜುಗಳನ್ನು ಒಳಗೊಳ್ಳುವ ಹಂತ. ಆರೋಗ್ಯಕ್ಕೆ ಸಂಬಂಧಿಸಿದ ಯಶಸ್ವಿಯಾದ ಅಭ್ಯಾಸಗಳು ಮೌಲ್ಯಗಳ ವಿಷಯದಲ್ಲಿ ತಟಸ್ಥವಾಗಿರುವುದಿಲ್ಲ. ಅವು ನೈತಿಕ ಬಲವನ್ನು, ಭಾವನಾತ್ಮಕ ಅನುರಣನವನ್ನು ಹಾಗೂ ಸಾಂಕೇತಿಕ ಅರ್ಥವನ್ನು ಪಡೆದುಕೊಳ್ಳುತ್ತವೆ. ಕಾಂಗರೂ ಮದರ್ ಕೇರ್ (ಕಡಿಮೆ ತೂಕ ಅಥವಾ ಅವಧಿಗೂ ಮುನ್ನ ಹುಟ್ಟಿದ ನವಜಾತ ಶಿಶುಗಳನ್ನು ತಾಯಿಯ ಅಥವಾ ತಂದೆಯ ಎದೆಯ ಮೇಲೆ ಚರ್ಮದ ನೇರ ಸಂಪರ್ಕದಲ್ಲಿ ಇಟ್ಟುಕೊಂಡು ಆರೈಕೆ ಮಾಡುವ ವಿಧಾನ) ಚಟುವಟಿಕೆಯು ನೇರ ಚರ್ಮದ ಸಂಪರ್ಕವನ್ನು- ಸ್ಕಿನ್ ಟು ಸ್ಕಿನ್, ಒಂದು ಚಿಕಿತ್ಸಾ ತಂತ್ರದಿಂದ ದೀರ್ಘಕಾಲ ಉಳಿಯುವ ತಾಯ್ತನದ ಒಳ್ಳೆಯ ಅಭಿವ್ಯಕ್ತಿಯಾಗಿ ಮಾರ್ಪಡಿಸುತ್ತದೆ. ಗ್ರೀನ್ ಬೆಲ್ಟ್ ಮೂವ್ ಮೆಂಟ್ (ಕೀನ್ಯಾದಲ್ಲಿ ಪರಿಸರದ ಅವನತಿಯನ್ನು ತಡೆಯಲು ಗಿಡ ನೆಡುವುದು ಮುಂತಾದವು ಗಿಡ ನೆಡುವುದನ್ನು ಘನತೆ, ಪ್ರತಿರೋಧ ಹಾಗೂ ರಾಷ್ಟ್ರೀಯ ಅಸ್ಮಿತೆಯ ಜೊತೆಗೆ ಬೆಸೆಯಿತು. ಆರೋಗ್ಯಕ್ಕೆ ಸಂಬಂಧಿಸಿದ ವರ್ತನೆಗಳನ್ನು ಈ ರೀತಿಯಾಗಿ ಸಾಂಕೇತಿಕಗೊಳಿಸಿದಾಗ ಅವುಗಳು ಸಮಾನ ಸ್ಕಂದರ ಮಧ್ಯೆ ಸಮತಲವಾಗಿ ಮಾತ್ರವಲ್ಲದೆ ತಲೆಮಾರುಗಳ ಮಧ್ಯೆ ಲಂಬವಾಗಿ ಪ್ರಸಾರವಾಗುತ್ತದೆ.

A medical professional sitting on the ground, shaking hands with an elderly woman, while another woman and a young girl observe them. The background features a rustic wall, typical of rural settings.

ಉತ್ತಮವಾಗಿ ವಿನ್ಯಾಸಗೊಂಡ ಅನೇಕ ಕಾರ್ಯಕ್ರಮಗಳು ಏಕೆ ಸೋಲುತ್ತವೆ ಎನ್ನುವುದನ್ನು ವಿವರಿಸಲು ಸಿ ಇ ಎಚ್ ಸಹಾಯಮಾಡುತ್ತದೆ. ವರ್ತನೆಯನ್ನು ಬಹಳ ಕಾಲ ಉಳಿಸುವ ಆಳವಾದ ಸಾಂಸ್ಕೃತಿಕ ಪ್ರಕ್ರಿಯೆಗಳಿಗೆ ಗಮನಕೊಡದೆ, ಬಹಳ ಬೇಗನೆ ನಿಲ್ಲಿಸಿ ಬಿಡುತ್ತಾರೆ, ಅಂದರೆ ಕೇವಲ ಮಾಹಿತಿಯನ್ನು ಒದಗಿಸುವುದು, ಸೇವೆಗಳನ್ನು ನೀಡುವುದು ಅಥವಾ ಅಲ್ಪಕಾಲೀನ ಗ್ರಹಿಕೆಗಳಂತಹ ಪ್ರಯತ್ನಗಳಿಗೆ ಸೀಮಿತಗೊಳಿಸುತ್ತಾರೆ. ಇದಕ್ಕೆ ವಿರುದ್ಧವಾಗಿ ಕಡಿಮೆ ಸಂಪನ್ಮೂಲಗಳು ಲಭ್ಯವಿರುವ ಸನ್ನಿವೇಶಗಳಲ್ಲೂ ಸಹ ಕೆಲವು ಮಧ್ಯಪ್ರವೇಶಗಳು ಹೇಗೆ ಯಶಸ್ವಿಯಾಗುತ್ತವೆ ಎನ್ನುವುದನ್ನು ಅದು ಸ್ಪಷ್ಟಪಡಿಸುತ್ತದೆ. ಅವು ವಿಜ್ಞಾನವನ್ನು ಅದರ ಅರ್ಥದೊಂದಿಗೆ, ಅಭ್ಯಾಸವನ್ನು ಅಸ್ಮಿತೆಯೊಂದಿಗೆ ಹಾಗೂ ನೀತಿನಿರೂಪಣೆಗಳನ್ನು ಸಾಮಾಜಿಕ ಜಗತ್ತಿನ ಅನುಭವಗಳೊಂದಿಗೆ ಹೊಂದಿಸಲಾಗಿರುತ್ತದೆ. ಕಾಯಿಲೆಗಳು, ಜನಸಂಖ್ಯಾ ಸ್ವರೂಪ ಹಾಗೂ ನಗರೀಕರಣಗಳಲ್ಲಿ ಸಂಭವಿಸುತ್ತಿರುವ ಸಂಕೀರ್ಣವಾದ ಪಲ್ಲಟಗಳನ್ನು ಎದುರಿಸುತ್ತಿರುವ ಭಾರತದಂತಹ ದೇಶಗಳಿಗೆ  ಸಿ ಇ ಎಚ್, ನಮ್ರತೆ ಹಾಗೂ ಭರವಸೆಗಳನ್ನು ನೀಡುತ್ತದೆ. ನಮ್ರತೆ ಏಕೆಂದರೆ, ಸಂಸ್ಕೃತಿಯನ್ನು ಏಕಾಏಕಿ ರೂಪಿಸುವುದಕ್ಕಾಗುವುದಿಲ್ಲ. ಭರವಸೆ ಏಕೆಂದರೆ, ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಸಂಸ್ಕೃತಿಯೊಂದಿಗೆ ಗಂಭೀರವಾಗಿ ತೊಡಗಿಸಿಕೊಂಡಾಗ ಬದಲಾವಣೆಯು ಕೇವಲ ಹೆಚ್ಚಾಗುವುದಷ್ಟೇ ಅಲ್ಲದೆ, ಉಳಿಯುವಂಥದ್ದಾಗುತ್ತದೆ.