ಸಾರ್ವಜನಿಕ ಆರೋಗ್ಯಕ್ಕೆ ಮಾಡುವ ವೆಚ್ಚದಲ್ಲಿ ಒಂದು ಸಣ್ಣ ಬದಲಾವಣೆ

ಭಾರತದಲ್ಲಿ ಆರೋಗ್ಯದ ಮೇಲೆ ಮಾಡುವ ವೆಚ್ಚವು ಅದರಂತೆಯೇ ಇರುವ ಇನ್ನಿತರ ಬಹುತೇಕ ದೇಶಗಳಿಗಿಂತಲೂ ಗಣನೀಯವಾಗಿ ಕಡಿಮೆ ಇದೆ. ಆದರೆ ಈಗ ಮಾಡುತ್ತಿರುವ ವೆಚ್ಚಕ್ಕಿಂತ ಕೊಂಚ ಹೆಚ್ಚು ವೆಚ್ಚ ಮಾಡಿ ಅದರ ಜೊತೆಗೆ ಪ್ರಾಥಮಿಕ ಆರೋಗ್ಯ ಸೇವೆಗೆ ಹೆಚ್ಚಿನ ಒತ್ತನ್ನು ನೀಡಿದರೆ ಅದು ಗಮನಾರ್ಹವಾದ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು.

ಸಾರ್ವಜನಿಕ ಆರೋಗ್ಯಕ್ಕೆ ಮಾಡುವ ವೆಚ್ಚದಲ್ಲಿ ಒಂದು ಸಣ್ಣ ಬದಲಾವಣೆ

ಅಜೀಂ ಪ್ರೇಮ್‌ಜಿ ಫೌಂಡೇಷನ್ ನಲ್ಲಿ ನಾವು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ ಆರಂಭದ ದಿನಗಳಲ್ಲಿ, ಭಾರತದಾದ್ಯಂತ ಸಾರ್ವಜನಿಕ ಆರೋಗ್ಯದ ವಿಷಯವಾಗಿ ಪ್ರಮುಖ ಮುಂದೊಡಗುಗಳನ್ನು ತೆಗೆದುಕೊಂಡವರೆಂಬ ವ್ಯಾಪಕ ಖ್ಯಾತಿಗೆ ಭಾಜನರಾಗಿದ್ದ ವಿಶ್ರಾಂತ ಆಡಳಿತಾಧಿಕಾರಿಯೊಬ್ಬರನ್ನು ನಾನು ಭೇಟಿ ಮಾಡಿದ್ದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಉತ್ತಮಪಡಿಸುವುದಕ್ಕೆ ಸಂಬಂಧಿಸಿದಂತೆ ನಮ್ಮ ಯೋಜನೆಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ಮೇಲೆ ಅವರು ಹೇಳಿದ್ದೆಂದರೆ, “ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ. ಸಾರ್ವಜನಿಕ ಆರೋಗ್ಯಕ್ಕೆ ಮಾಡುವ ವೆಚ್ಚ ಹಾಗೂ ನಿರ್ವಹಣೆಯಲ್ಲಿ ಒಂದು ಆಮೂಲಾಗ್ರವಾದ ಬದಲಾವಣೆಯನ್ನು ಮಾಡದಿದ್ದರೆ ಎಲ್ಲ ಸುಧಾರಣೆಗಳು ಪರಿಮಿತ ಪ್ರಮಾಣದ ಸುಧಾರಣೆಗಳಾಗುತ್ತವೆ. ಆರೋಗ್ಯ ಕ್ಷೇತ್ರದಿಂದ ಯಾವುದೇ ರೀತಿಯ ರಾಜಕೀಯ ಲಾಭ ಸಿಗುವುದಿಲ್ಲ. ಈ ಕ್ಷೇತ್ರದಲ್ಲಿ ಸುಧಾರಣೆಗಳನ್ನು ನನ್ನ ಜೀವಿತಕಾಲದಲ್ಲಿ ನಾನು ಕಾಣಲು ಸಾಧ್ಯವಿಲ್ಲ”. 

ಇದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬೇಕೆಂದರೆ 2021- 22ನೇ ಇಸವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸೇರಿಕೊಂಡು ಆರೋಗ್ಯದ ಮೇಲೆ ತಲಾವಾರು 3169 ರೂಪಾಯಿಗಳನ್ನು ಅಥವಾ ದೇಶದ ಜಿಡಿಪಿಯ(ನಿವ್ವಳ ರಾಷ್ಟ್ರೀಯ ಉತ್ಪನ್ನ) ಶೇಕಡ 1.84 ರಷ್ಟು ಹಣವನ್ನು ಖರ್ಚು ಮಾಡಿದ್ದವು ಎನ್ನುವುದನ್ನು ಗಮನಿಸಬೇಕು. ಒಬ್ಬ ವ್ಯಕ್ತಿಯ ಮೇಲೆ ಮಾಡುವ ಒಟ್ಟಾರೆ ಹಣದ ಪ್ರಮಾಣ ಹಾಗೂ ಜಿಡಿಪಿಯ ಶೇಕಡಾವಾರು ಲೆಕ್ಕ ಎರಡರ ದೃಷ್ಟಿಯಿಂದಲೂ ಭಾರತವು ತನಗೆ ಸಮಾನವಾಗಿರುವ ಇತರ ಬಹುತೇಕ ರಾಷ್ಟ್ರಗಳಿಗಿಂತಲೂ ಹಿಂದೆ ಬಿದ್ದಿದೆ. ಬ್ರೆಜಿಲ್, ಚೀನಾ ಮತ್ತು ಮಲೇಷ್ಯಾದಂತಹ ದೇಶಗಳು ತಮ್ಮ ಜಿಡಿಪಿಯ ಶೇಕಡ 3-6ರಷ್ಟು ಹಣವನ್ನು ಹಾಗೂ ಭಾರತಕ್ಕಿಂತ ತಲಾವಾರು 5-10 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡುತ್ತವೆ; ಒ ಇ ಸಿ ಡಿ (ಆರ್ಗನೈಜೇಷನ್ ಫಾರ್ ಎಕಾನಮಿಕ್ ಕೋ ಆಪರೇಷನ್ ಅಂಡ್ ಡೆವಲಪ್ಮೆಂಟ್ – ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ) ದೇಶಗಳು ತಮ್ಮ ಜಿಡಿಪಿಯ ಶೇಕಡ 6 – 10ರಷ್ಟು ಹಣವನ್ನು ಹಾಗೂ ಭಾರತಕ್ಕೆ ಹೋಲಿಸಿದರೆ ತಲಾವಾರು ನೂರು ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡುತ್ತವೆ. 

ಸರ್ಕಾರಗಳು ಆರೋಗ್ಯದ ಮೇಲೆ ಎಷ್ಟು ಖರ್ಚು ಮಾಡುತ್ತವೆ ಎನ್ನುವುದರ ಆಧಾರದ ಮೇಲೆ ಒಂದು ದೇಶದ ನಾಗರಿಕರ ಆರೋಗ್ಯವು ತೀರ್ಮಾನವಾಗುವುದರಿಂದ ಇದು ಬಹಳ ಮುಖ್ಯವಾಗುತ್ತದೆ. ಭಾರತದ ಆರೋಗ್ಯ ವ್ಯವಸ್ಥೆಯಾದ್ಯಂತ ಈ ಅಸಮರ್ಪಕ ವೆಚ್ಚದ ಪರಿಣಾಮವನ್ನು ಕಾಣಬಹುದಾಗಿದೆ. 

ಆರೋಗ್ಯ ಕ್ಷೇತ್ರದ ಪ್ರಮುಖ ವಿಷಯಗಳ ಮೇಲೆ ಮಾಡುವ ಹೂಡಿಕೆಯು ಇನ್ಯಾವುದೇ ಅಂಶದ ಮೇಲೆ ಮಾಡುವ ಹೂಡಿಕೆಗಿಂತಲೂ ಒಂದು ದೇಶದ ನಾಗರಿಕರ ಆರೋಗ್ಯವನ್ನು ನಿರ್ಣಯಿಸುತ್ತದೆ ಎನ್ನುವುದು ಈಗ ಒಂದು ಸಾಮಾನ್ಯ ತಿಳಿವಳಿಕೆಯಾಗಿದೆ. 

ಇತ್ತೀಚಿಗೆ ನಾನು ಪಶ್ಚಿಮದ ರಾಜ್ಯವೊಂದರಲ್ಲಿ, ಉತ್ತಮವಾಗಿ ನಿರ್ವಹಿಸಲ್ಪಡುತ್ತಿದ್ದ, ಕಿಕ್ಕಿರಿದು ತುಂಬಿದ್ದ ಒಂದು ಜಿಲ್ಲಾ ಆಸ್ಪತ್ರೆಯೊಳಗೆ ಓಡಾಡುತ್ತಿದ್ದೆ. ಯಾವುದೇ ಒಂದು ಸ್ಥಳದ ಕುರಿತು ತೀರ್ಮಾನ ಮಾಡಬೇಕಾದಾಗ ನಾನು ಮಾಡುವ ಒಂದು ಜಾಣತನದ ಕೆಲಸವೆಂದರೆ, ಅಲ್ಲಿರುವ ಶೌಚಾಲಯಗಳ ಶುಚಿತ್ವವನ್ನು ಪರೀಕ್ಷಿಸುವುದು. ನಾನು ನಮ್ಮ ಜೊತೆ ಬರುತ್ತಿದ್ದ ವ್ಯಕ್ತಿಯನ್ನು ಅಲ್ಲಿನ ಶೌಚಾಲಯಗಳು ಏಕೆ ಅಷ್ಟು ಕೆಟ್ಟ ಪರಿಸ್ಥಿತಿಯಲ್ಲಿವೆ ಎಂದು ಕೇಳಿದೆ. ಆಗ ಅವರು ಹೇಳಿದ್ದೆಂದರೆ, 300 ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ, 16 ಶೌಚಾಲಯಗಳ ಘಟಕಗಳಿದ್ದು, ಅವುಗಳನ್ನು ಸ್ವಚ್ಛಗೊಳಿಸಲು ಕೇವಲ ಒಬ್ಬ ಪುರುಷ ಶೌಚ ಸ್ವಚ್ಛತಾ ಸಿಬ್ಬಂದಿ ಹಾಗೂ ಒಬ್ಬ ಮಹಿಳಾ ಶೌಚ ಸ್ವಚ್ಛತಾ ಸಿಬ್ಬಂದಿ ಇದ್ದರು. ಅವರು ದಿನಕ್ಕೆ ಒಂದು ಬಾರಿ ಮಾತ್ರ ಪ್ರತಿಯೊಂದು ಶೌಚಾಲಯವನ್ನು ಸ್ವಚ್ಛಗೊಳಿಸಲು ಸಾಧ್ಯವಿತ್ತು. 

ಅಭಿವೃದ್ಧಿಶೀಲ ದೇಶಗಳಲ್ಲಿ ಅಲ್ಲಿನ ಸಾರ್ವಜನಿಕ ವೆಚ್ಚದ ಶೇಕಡ 70ರಷ್ಟು ಹಣವನ್ನು ಪ್ರಾಥಮಿಕ ಆರೋಗ್ಯದ ಮೇಲೆ ಖರ್ಚು ಮಾಡಬೇಕೆಂದು ಮಾರ್ಗದರ್ಶನ ನೀಡಲಾಗಿದೆ. ಭಾರತವು 50ರಷ್ಟು ಖರ್ಚು ಮಾಡುತ್ತಿದೆ. 

ಮತ್ತೊಂದು ದಕ್ಷಿಣದ ರಾಜ್ಯದಲ್ಲಿ 120 ಹಾಸಿಗೆಗಳಿರುವ ಒಂದು ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಅತಿ ವಿಶೇಷ ವೈದ್ಯಕೀಯ ಸಂಸ್ಥೆ) ಅತಿಯಾದ ಕೆಲಸದಿಂದ ದಣಿದ 60 ದಾದಿಯರ ತಂಡವು ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದು, ಭಾರತದ ಸಾರ್ವಜನಿಕ ಆರೋಗ್ಯದ ಮಾನದಂಡದಿಂದ ನೋಡಿದಾಗ ಅವರ ಸಂಖ್ಯೆಯು ಅವಶ್ಯಕತೆಯ ಮೂರನೇ ಒಂದು ಭಾಗದಷ್ಟಿತ್ತು. 

ಈ ಅಸಮರ್ಪಕವಾದ ಹಣಕಾಸಿನ ವಿತರಣೆಯ ಒಟ್ಟಾರೆ ಪರಿಣಾಮವು ಮುಂಚೂಣಿ ಕ್ಷೇತ್ರಗಳಲ್ಲಿ ಕಂಡುಬರುತ್ತಿತ್ತು. ಆರೋಗ್ಯ ಕ್ಷೇತ್ರದ ಪ್ರಮುಖ ವಿಷಯಗಳ ಮೇಲೆ ಮಾಡುವ ಹೂಡಿಕೆಯು ಇನ್ಯಾವುದೇ ಅಂಶದ ಮೇಲೆ ಮಾಡುವ ಹೂಡಿಕೆಗಿಂತಲೂ ಒಂದು ದೇಶದ ನಾಗರಿಕರ ಆರೋಗ್ಯವನ್ನು ನಿರ್ಣಯಿಸುತ್ತದೆ ಎನ್ನುವುದು ಈಗ ಒಂದು ಸಾಮಾನ್ಯ ತಿಳಿವಳಿಕೆಯಾಗಿದೆ. ಅಭಿವೃದ್ಧಿಶೀಲ ದೇಶಗಳು ತಮ್ಮ ಸಾರ್ವಜನಿಕ ವೆಚ್ಚದ ಶೇಕಡ 70ರಷ್ಟು ಹಣವನ್ನು ಪ್ರಾಥಮಿಕ ಆರೋಗ್ಯದ ಮೇಲೆ ಖರ್ಚು ಮಾಡಬೇಕೆಂದು ಮಾರ್ಗದರ್ಶನ ನೀಡಲಾಗಿದೆ. ಭಾರತವು 50ರಷ್ಟು ಖರ್ಚು ಮಾಡುತ್ತಿದೆ. 

ಬಜೆಟ್ ನಲ್ಲಿ ಸಾರ್ವಜನಿಕ ಆರೋಗ್ಯದ ವೆಚ್ಚವನ್ನು ಜಿಡಿಪಿಯ ಶೇಕಡ 1.9 ರಿಂದ ಶೇಕಡ 2.5 ರಷ್ಟು ಕನಿಷ್ಠ ಹೆಚ್ಚಳ ಮಾಡಲು ಸಾಧ್ಯವಿದೆ, ಇದು 2017ನೇ ಇಸವಿಯ ಆರೋಗ್ಯ ನೀತಿಯು ನೀಡಿರುವ ಮಾರ್ಗದರ್ಶನವಾಗಿದೆ. 

ಇದರ ಪರಿಣಾಮವಾಗಿ ಪೌಷ್ಟಿಕತಾ ಕಾರ್ಯಕ್ರಮ, ಲಸಿಕೆ ಹಾಕುವುದು, ತಾಯಂದಿರು ಮತ್ತು ಮಕ್ಕಳ ಮರಣ ಪ್ರಮಾಣದಲ್ಲಿ ಇಳಿಕೆ, ಸಾಂಕ್ರಾಮಿಕವಲ್ಲದ ಕಾಯಿಲೆಗಳ ತಪಾಸಣೆ ಮುಂತಾದ ಪ್ರಮುಖ ಕಾರ್ಯಕ್ರಮಗಳಿಗೆ ಜವಾಬ್ದಾರರಾಗಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರುಗಳಿಗೆ, ಕೌಶಲ್ಯರಹಿತ ಕಾರ್ಮಿಕರಿಗೆ ನಿಗದಿಯಾಗಿರುವಷ್ಟು ಕನಿಷ್ಠ ವೇತನವನ್ನು ಸಹ ನೀಡುತ್ತಿಲ್ಲ. ಇದೇ ಹಣಕಾಸಿನ ಕೊರತೆಯಿಂದಾಗಿಯೇ ಸಾರ್ವಜನಿಕ ವಿಮಾ ಕಾರ್ಯಕ್ರಮಗಳು ಹೊರರೋಗಿ ವಿಭಾಗದ ಸೇವೆಯ ಖರ್ಚನ್ನು ನೀಡುವುದಿಲ್ಲ. ಹೊರರೋಗಿ ವಿಭಾಗದ ಸೇವೆಗಳು, ಅದರಲ್ಲೂ ಔಷಧಿಗಳ ಮೇಲೆ ಮಾಡಬೇಕಾದ ಖರ್ಚುಗಳು ಬಡ ಕುಟುಂಬಗಳ ಸರ್ವನಾಶಕ್ಕೆ ಕಾರಣವಾಗುವ ಖರ್ಚುಗಳ ಒಂದು ಗಣನೀಯ ಭಾಗವಾಗುತ್ತದೆ ಎನ್ನುವುದು ಬಹಳ ಮುಖ್ಯವಾದ ಸಂಗತಿ. 

ಪ್ರೋತ್ಸಾಹಕ ಹಾಗೂ ಪ್ರತಿಬಂಧಕ ಆರೋಗ್ಯ ಕಾರ್ಯಕ್ರಮಗಳನ್ನು ಮೂಲತಃ ಮುಂಚೂಣಿ ಕಾರ್ಯಕರ್ತರು ನಡೆಸುವುದರಿಂದ ಈ ಹೆಚ್ಚಿನ ಹೂಡಿಕೆಯ ಮೂಲಕ ಎರಡನೆಯ ಹಂತದ ಹಾಗೂ ಮೂರನೆಯ ಹಂತದ ಸೇವಾಸೌಲಭ್ಯಗಳ ಮೇಲಿನ ರೋಗಿಗಳ ಒತ್ತಡವನ್ನು ಸಹ ಕಡಿಮೆ ಮಾಡಬಹುದು. 

ಭಾರತವು ಎಷ್ಟೊಂದು ಆರ್ಥಿಕ ಅಡಚಣೆಗಳ ಮಧ್ಯೆ ಸಿಲುಕಿರುವುದರಿಂದ, ತನಗೆ ಸರಿಸಮಾನವಾದಂತಹ ದೇಶಗಳು ಆರೋಗ್ಯಕ್ಕಾಗಿ ಖರ್ಚು ಮಾಡುವಷ್ಟು ಹಣವನ್ನೇ ತಾನೂ ಸಹ ಮಾಡಬೇಕೆಂದು ನಾನು ಸೂಚಿಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಅದನ್ನು ಆಗ್ರಹಿಸುವುದು ತರವಲ್ಲ ಎಂದು ನನಗೆ ತಿಳಿದಿದೆ. ಬಜೆಟ್ ನಲ್ಲಿ ಸಾರ್ವಜನಿಕ ಆರೋಗ್ಯದ ವೆಚ್ಚವನ್ನು ಜಿಡಿಪಿಯ ಶೇಕಡ 1.9 ರಿಂದ ಶೇಕಡ 2.5 ರಷ್ಟು ಕನಿಷ್ಠ ಹೆಚ್ಚಳ ಮಾಡಲು ಸಾಧ್ಯವಿದೆ, ಇದು 2017ನೇ ಇಸವಿಯ ಆರೋಗ್ಯ ನೀತಿಯು ನೀಡಿರುವ ಮಾರ್ಗದರ್ಶನವಾಗಿದೆ. 

ಈಗ ಹೆಚ್ಚುವರಿಯಾಗಿ ನೀಡಬಹುದಾದ ಹಣವನ್ನು ಪ್ರಾಥಮಿಕ ಆರೋಗ್ಯ ಸೇವೆಯತ್ತ ಹರಿಸಿದರೆ ಆಗ ಮುಂಚೂಣಿ ಕಾರ್ಯಕ್ಷೇತ್ರಕ್ಕೆ ಲಭ್ಯವಾಗುವಂತಹ ಹಣಕಾಸು ಹೆಚ್ಚು ಕಡಿಮೆ ದುಪ್ಪಟ್ಟಾಗಬಹುದು.

ಈ ಹೆಚ್ಚಳದೊಂದಿಗೆ ಆಶಾಗಳು ಮತ್ತು ದಾದಿಯರ ಕೆಲಸದ ಪರಿಸ್ಥಿತಿಗಳನ್ನು ಉತ್ತಮಪಡಿಸುವುದು ಹಾಗೂ ಅವರು ಮತ್ತಷ್ಟು ಸಮರ್ಥವಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳುವುದು, ಕಟ್ಟಕಡೆಯಲ್ಲಿರುವ ವ್ಯಕ್ತಿಗಳಿಗೆ ಆರೋಗ್ಯ ಸೌಲಭ್ಯಗಳು ಉತ್ತಮವಾಗುವಂತೆ ನೋಡಿಕೊಳ್ಳುವುದು, ಹೊರ ರೋಗಿ ವಿಭಾಗದ ಸೇವೆಯ ಖರ್ಚುಗಳಿಗೆ ಸಾರ್ವಜನಿಕ ವಿಮೆಯು ವಿಸ್ತರಣೆಗೊಳ್ಳುವಂತೆ ಮಾಡುವುದು ಮುಂತಾದ ಅತ್ಯಂತ ಪ್ರಮುಖವಾದ ಅನೇಕ ಕಾರ್ಯಕ್ರಮಗಳಿಗೆ ಹಣ ಹೊಂದಿಸಬಹುದು.

marginal budgetary

ಪ್ರೋತ್ಸಾಹಕ ಹಾಗೂ ಪ್ರತಿಬಂಧಕ ಆರೋಗ್ಯ ಕಾರ್ಯಕ್ರಮಗಳನ್ನು ಮೂಲತಃ ಮುಂಚೂಣಿ ಕಾರ್ಯಕರ್ತರು ನಡೆಸುವುದರಿಂದ ಈ ಹೆಚ್ಚಿನ ಹೂಡಿಕೆಯು ಎರಡನೆಯ ಹಂತದ ಹಾಗೂ ಮೂರನೆಯ ಹಂತದ ಸೇವಾಸೌಲಭ್ಯಗಳ ಮೇಲಿನ ರೋಗಿಗಳ ಒತ್ತಡವನ್ನು ಸಹ ಕಡಿಮೆ ಮಾಡಬಹುದು.

ಈ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ದಿಕ್ಕಿನಲ್ಲಿ ನಾವು ರಾಜಕೀಯ ಹಾಗೂ ಆಡಳಿತಾತ್ಮಕ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿದಲ್ಲಿ ಅದು ಭಾರತದ ಆರೋಗ್ಯದ ಫಲಿತಾಂಶಗಳ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ.