ಸಾರ್ವಜನಿಕ ಆರೋಗ್ಯ ಕಾರ್ಯಕರ್ತರೊಂದಿಗೆ ಒಂದು ಹೊಸ ಒಪ್ಪಂದದತ್ತ

ಭಾರತದಲ್ಲಿ ಆರೋಗ್ಯ ಸೇವೆಯು ಅನಿಶ್ಚಿತತೆಯಿಂದ ಕೂಡಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಅತಿಯಾದ ಮೇಲ್ವಿಚಾರಣೆ ಮತ್ತು ಕಟ್ಟುನಿಟ್ಟಿನ ಪರಿಣಾಮಗಳ ಭಯದಿಂದ ಬಳಲುತ್ತಿದೆ. ಫಲಿತಾಂಶಗಳಲ್ಲಿ ನಿರಂತರವಾದ ಸುಧಾರಣೆಗಾಗಿ ನಿರೀಕ್ಷೆಗಳೊಂದಿಗೆ ರಕ್ಷಣೆಯನ್ನು ಹಾಗೂ ಹೊಣೆಗಾರಿಕೆಯೊಂದಿಗೆ ಸ್ವಾಯತ್ತತೆಯನ್ನು ಸಮತೋಲನದಲ್ಲಿ ಇರಿಸುವ ಅಗತ್ಯವಿದೆ.

ಸಾರ್ವಜನಿಕ ಆರೋಗ್ಯ ಕಾರ್ಯಕರ್ತರೊಂದಿಗೆ ಒಂದು ಹೊಸ ಒಪ್ಪಂದದತ್ತ

ಸರ್ಕಾರಿ ಸ್ವಾಮ್ಯದ ಆರೋಗ್ಯ ವ್ಯವಸ್ಥೆಗಳ ಕಾರ್ಯಕ್ಷಮತೆಯ ಬಗ್ಗೆ ಆತಂಕ ಹೆಚ್ಚುತ್ತಿದೆ. ಫಲಿತಾಂಶಗಳಲ್ಲಿ ಏರುಪೇರುಗಳಿವೆ, ವ್ಯತ್ಯಾಸಗಳು ವ್ಯಾಪಕವಾಗಿವೆ ಮತ್ತು ಸುಧಾರಣಾ ಪ್ರಯತ್ನಗಳು ಅಭಿವೃದ್ಧಿಗಿಂತ ಹೆಚ್ಚಾಗಿ ದಾಖಲೆಗಳನ್ನು ಇರಿಸುವ ಕಚೇರಿ ಕೆಲಸಕ್ಕೇ ಹೆಚ್ಚು ಗಮನಕೊಡುತ್ತಿರುವಂತೆ ಕಾಣುತ್ತಿದೆ.

ವೈದ್ಯಕೀಯ ಚಿಕಿತ್ಸೆಯ ನಿರ್ಧಾರಗಳನ್ನು ಅನಿಶ್ಚಿತ ವಾತಾವರಣದಲ್ಲಿಯೇ ತೆಗೆದುಕೊಳ್ಳಲಾಗುತ್ತದೆ. ಫಲಿತಾಂಶಗಳು ಕೇವಲ ಪರಿಶ್ರಮದ ಮೇಲೆ ಅವಲಂಬಿತವಾಗಿರುವಂತೆಯೇ, ಪ್ರಕರಣಗಳ ವೈವಿಧ್ಯತೆ, ಸಮಯ, ಮೂಲಸೌಕರ್ಯ ಮತ್ತು ಆಕಸ್ಮಿಕಗಳ ಮೇಲೆಯೂ ಅಷ್ಟೇ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತವೆ.

ಸರ್ಕಾರಗಳು ನಿರೀಕ್ಷಿತ ರೀತಿಯಲ್ಲೇ ಪ್ರತಿಕ್ರಿಯಿಸುತ್ತವೆ: ಬಿಗಿಯಾದ ಮೇಲ್ವಿಚಾರಣೆ ಮಾಡುವುದು, ಹೆಚ್ಚಿನ ಲೆಕ್ಕಪರಿಶೋಧನೆ ನಡೆಸುವುದು, ಇನ್ನೂ ಹೆಚ್ಚಿನ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ಆದರೂ ವಾಸ್ತವದಲ್ಲಿ, ಅನೇಕ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಈ ಕ್ರಮಗಳನ್ನು ಉತ್ತಮ ಸೇವೆ ನೀಡುವುದಕ್ಕಾಗಿ ಸಿಗುವ ಬೆಂಬಲವೆಂದು ಭಾವಿಸುವುದಿಲ್ಲ, ಬದಲಿಗೆ ತಾವು ಹೆಚ್ಚು ಜಾಗರೂಕತೆಯಿಂದಿರುವುದಕ್ಕೆ, ರಕ್ಷಣಾತ್ಮಕವಾಗಿರುವುದಕ್ಕೆ ಮತ್ತು ಅಪಾಯಕ್ಕೆ ಒಡ್ಡಿಕೊಳ್ಳದಂತೆ ಇರುವುದಕ್ಕೆ ನೀಡಿರುವ ಎಚ್ಚರಿಕೆಗಳು ಎಂದು ಭಾವಿಸುತ್ತಾರೆ. ಉತ್ತರದಾಯಿತ್ವದ ಕ್ರಮಗಳನ್ನು  ಮುಖ್ಯವಾಗಿ ನಿಯಂತ್ರಣ ಮತ್ತು ಶಿಕ್ಷೆಯ ಸುತ್ತಲೇ ಇರುವಂತೆ ವಿನ್ಯಾಸಗೊಳಿಸಿದಾಗ, ಅವು ಉದ್ದೇಶಿತ ಫಲಿತಾಂಶಕ್ಕೆ ತದ್ವಿರುದ್ಧವಾದ ಫಲಗಳನ್ನು ನೀಡುತ್ತವೆ: ಅಂದರೆ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಬದಲಿಗೆ, ಕೇವಲ ಆತ್ಮರಕ್ಷಣೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ.

ಸಾರ್ವಜನಿಕ ಸೇವೆಗಳಲ್ಲಿ ಉತ್ತರದಾಯಿತ್ವವನ್ನು ಸೃಷ್ಟಿಸುವ ಬಗ್ಗೆ ಬಹಳ ಕಾಲದಿಂದಲೂ ಎರಡು ಮಾರ್ಗಗಳ ಕುರಿತು ಚರ್ಚಿಸಲಾಗಿದೆ. ಒಂದು ಮಾರ್ಗವು ನಾಗರಿಕರ ಅಭಿಪ್ರಾಯ ಮತ್ತು ಸಮುದಾಯದ ಒತ್ತಡಕ್ಕೆ ಒತ್ತು ನೀಡುತ್ತದೆ; ಇನ್ನೊಂದು ಮಾರ್ಗವು ನಿಯಮಗಳು, ತಪಾಸಣೆಗಳು, ಗುರಿಗಳು ಮತ್ತು ಶಿಸ್ತು ಕ್ರಮಗಳ ಮೂಲಕ ಅಧಿಕಾರಶಾಹಿ ಮೇಲ್ವಿಚಾರಣೆಯನ್ನು ಅವಲಂಬಿಸುತ್ತದೆ. ಈ ಎರಡೂ ಮಾರ್ಗಗಳು ಮುಖ್ಯವಾದದ್ದಾಗಿವೆ.

ಗಂಭೀರ ಪ್ರಕರಣಗಳಾಗಬಹುದು ಎಂಬಂತೆ ಅಂಚಿನಲ್ಲಿರುವ ಪ್ರಕರಣಗಳನ್ನು ಕೂಡಲೇ ಗಂಭೀರ ಎಂದೇ ತೀರ್ಮಾನಿಸಲಾಗುತ್ತದೆ ; ಅದೇ ರೀತಿಯಲ್ಲಿ ಯಾವ ರೀತಿಯ ಚಿಕಿತ್ಸಾ ಕ್ರಮಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ರೋಗಿಯ ಹಿತದೃಷ್ಟಿಗಿಂತಲೂ, ನಂತರದ ವಿಚಾರಣೆಯಲ್ಲಿ ಸಮರ್ಥಿಸಿಕೊಳ್ಳಲು ಯಾವುದು ಸುಲಭ ಎಂಬುದನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.; ಬೇರೆಯದೇ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿದ್ದಾಗಲೂ ಸಹ, ಯಾವುದೇ ರೀತಿಯ ಹೊಂದಾಣಿಕೆಯನ್ನು ನಿರಾಕರಿಸಲಾಗುತ್ತದೆ.

ಆರೋಗ್ಯ ಸೇವೆಯಂತಹ ಸಂಕೀರ್ಣ ಸೇವೆಗಳಲ್ಲಿ ಇಂತಹ ಧೋರಣೆಗಳಿಗೆ ಸ್ಪಷ್ಟ ಮಿತಿಗಳಿವೆ. ವೈದ್ಯಕೀಯ ನಿರ್ಧಾರಗಳನ್ನು ಅನಿಶ್ಚಿತತೆಯ ನಡುವೆಯೇ ತೆಗೆದುಕೊಳ್ಳಲಾಗುತ್ತದೆ. ಚಿಕಿತ್ಸೆಯ ಫಲಿತಾಂಶಗಳು ಕೇವಲ ವೈದ್ಯರ ಶ್ರಮದ ಮೇಲೆ ಮಾತ್ರವಲ್ಲದೆ, ಪ್ರಕರಣಗಳ ವೈವಿಧ್ಯತೆ, ಸಮಯ, ಮೂಲಸೌಕರ್ಯ ಮತ್ತು ಆಕಸ್ಮಿಕಗಳ ಮೇಲೂ ಅವಲಂಬಿತವಾಗಿಬಿಡುತ್ತವೆ. ಆದರೂ, ಅನೇಕ ಉತ್ತರದಾಯಿತ್ವದ  ವ್ಯವಸ್ಥೆಗಳು ತಪ್ಪಾಗಿ ಪರಿಭಾವಿಸಿಕೊಳ್ಳುವುದೇನೆಂದರೆ, ಫಲಿತಾಂಶಗಳು ಸಂಪೂರ್ಣವಾಗಿ ನಿಯಂತ್ರಣದಲ್ಲಿರುತ್ತವೆ ಮತ್ತು ಯಾವುದೇ ವ್ಯತಿರಿಕ್ತ ಫಲಿತಾಂಶವು ವೈಫಲ್ಯದ ಸಂಕೇತವಾಗಿರುತ್ತದೆ ಎಂದು. ಇಂತಹ ವಾತಾವರಣದಲ್ಲಿ, ವೈದ್ಯರು ವಿವೇಚನಾ ಅಧಿಕಾರವನ್ನು ಬಳಸುವುದು ಅಪಾಯಕಾರಿಯಾಗುತ್ತದೆ. ವೃತ್ತಿಪರ ನಿರ್ಧಾರಗಳನ್ನು, ರೋಗಿಗೆ ಯಾವುದು ಉತ್ತಮ ಎಂಬುದಕ್ಕಿಂತ ಭವಿಷ್ಯದಲ್ಲಿ ಸಮರ್ಥಿಸಿಕೊಳ್ಳಲು ಯಾವುದು ಸುಲಭವೋ ಅದರ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ.

ಈ ಪರಿಸ್ಥಿತಿಯು ಭಾರತದ ಸಾರ್ವಜನಿಕ ಪ್ರಸೂತಿ ಸೇವೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ತಾಯಂದಿರ ಆರೋಗ್ಯದ ಮೇಲಾಗುವ ಪರಿಣಾಮಗಳು ಮತ್ತು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳ ಕುರಿತು ತೀವ್ರ ನಿಗಾ ಇರಿಸಿರುವುದರಿಂದಾಗಿ, ಅನೇಕ ವೈದ್ಯರು ರಕ್ಷಣಾತ್ಮಕ ವೈದ್ಯಕೀಯ ಚಿಕಿತ್ಸಾ ಅಭ್ಯಾಸಗಳನ್ನು ಅನುಸರಿಸುತ್ತಾರೆ. ಹೀಗಾಗಿ ಅಂಚಿನಲ್ಲಿರುವ ಪ್ರಕರಣಗಳನ್ನು ಕೂಡಲೇ ಗಂಭೀರ ಎಂದು ವರ್ಗೀಕರಿಸಲಾಗುತ್ತದೆ; ಚಿಕಿತ್ಸಾ ಕ್ರಮಗಳನ್ನು ಆಯ್ಕೆ ಮಾಡುವಾಗ ರೋಗಿಯ ಹಿತದೃಷ್ಟಿಗಿಂತಲೂ, ನಂತರದ ವಿಚಾರಣೆಯಲ್ಲಿ ಸಮರ್ಥಿಸಿಕೊಳ್ಳಲು ಯಾವುದು ಸುಲಭ ಎಂಬುದನ್ನು ವೈದ್ಯಕೀಯ ಸಿಬ್ಬಂದಿ ಪರಿಗಣಿಸಲಾರಂಭಿಸುತ್ತಾರೆ; ಬೇರೆಯದೇ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿದ್ದಾಗಲೂ ಸಹ, ಅಪಾಯವನ್ನು ಮೈಮೇಲೆ ಎಳೆದುಕೊಳ್ಳದಂತೆ ಯಾವುದೇ ರೀತಿಯ ಹೊಂದಾಣಿಕೆಯನ್ನು ತಳ್ಳಿಹಾಕಲಾಗುತ್ತದೆ.

ಈ ನಡವಳಿಕೆಯು ದುರಾಸೆ ಅಥವಾ ಉಪೇಕ್ಷೆಯಿಂದ ಉಂಟಾಗಿರುವುದಲ್ಲ. ಬದಲಿಗೆ ಇದು ವಿಚಾರಣೆಗಳು, ವರ್ಗಾವಣೆಗಳು, ಅಮಾನತುಗಳು ಮತ್ತು ಏನಾದರೂ ತಪ್ಪಾದಾಗ ತಾವು  ಸಿಲುಕಿಕೊಳ್ಳಬಹುದು ಎಂಬ ಭಯದಿಂದ ಉಂಟಾದುದಾಗಿದೆ. ಸಾಕಷ್ಟು ಸೌಲಭ್ಯಗಳಿರುವ ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದಲ್ಲಿ, ಈ ಭಯದಿಂದಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಸೇರಿಯನ್  ಹೆರಿಗೆಯ ಪ್ರಮಾಣವು ನಿರಂತರವಾಗಿ ಹೆಚ್ಚಾಗುವಂತಾಗಿದೆ.

ದಕ್ಷತೆಯ ಮೇಲೆ ನಿಗಾ ವಹಿಸಲಾಗುತ್ತದೆ, ಆದರೆ ಇಲ್ಲಿ ವೈಯಕ್ತಿಕ ದೋಷಾರೋಪಣೆಗಿಂತ ಹೆಚ್ಚಾಗಿ ನಿರಂತರತೆ, ಕಲಿಕೆ ಮತ್ತು ವ್ಯವಸ್ಥಿತ ಮಟ್ಟದ ಫಲಿತಾಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಮುಖ್ಯವಾದ ವಿಷಯವೆಂದರೆ, ಇದು ಕೇವಲ ಭಾರತಕ್ಕೆ ಸಂಬಂಧಿಸಿದ ವಿಷಯವಲ್ಲ. ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳ ಪುರಾವೆಗಳು ಏನನ್ನು ಸೂಚಿಸುತ್ತವೆ ಎಂದರೆ—ಯಾವಾಗ ಮುಂಚೂಣಿ ಆರೋಗ್ಯ ಸೇವಾ ಪೂರೈಕೆದಾರರು ಸರ್ಕಾರದೊಂದಿಗೆ ಒಂದು ಸ್ಪಷ್ಟ ಹಾಗೂ ವಿಶ್ವಾಸಾರ್ಹ ಒಪ್ಪಂದದಡಿ ಕಾರ್ಯನಿರ್ವಹಿಸುತ್ತಾರೋ, ಆಗ ಆರೋಗ್ಯ ವ್ಯವಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ, ಈ ಒಪ್ಪಂದವು ನಿರೀಕ್ಷೆಗಳು ಮತ್ತು ರಕ್ಷಣೆಗಳ ನಡುವೆ ಹಾಗೂ ಹೊಣೆಗಾರಿಕೆ ಮತ್ತು ಸ್ವಾಯತ್ತತೆಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕು. ಥೈಲ್ಯಾಂಡ್‌ನ ಸಾರ್ವರ್ತ್ರಿಕವಾಗಿ ಅನ್ವಯವಾಗುವ ಯೋಜನೆ – ಯೂನಿವರ್ಸಲ್ ಕವರೇಜ್ ಸ್ಕೀಮ್ – ಇದಕ್ಕೆ ಒಂದು ಉತ್ತಮ ಉದಾಹರಣೆ. ಅಲ್ಲಿ ಖರೀದಿ ಮಾಡುವುದನ್ನು ಮತ್ತು ಸೇವಾ ಸೌಲಭ್ಯವನ್ನು ನೀಡುವುದನ್ನು ಪ್ರತ್ಯೇಕಿಸಿದರೂ ಸಹ, ಎರಡೂ ಸಾರ್ವಜನಿಕವಾಗಿಯೇ ಉಳಿದವು. ಸೇವಾ ಪೂರೈಕೆದಾರರಿಗೆ ಸ್ಪಷ್ಟ ನಿರೀಕ್ಷೆಗಳನ್ನು ನೀಡಲಾಯಿತು, ಕ್ಯಾಪಿಟೇಶನ್’ ಮತ್ತು ಜಾಗತಿಕ ಬಜೆಟ್ ಗಳ ಮೂಲಕ ಸ್ಥಿರವಾದ ಆರ್ಥಿಕ ನೆರವನ್ನು ಒದಗಿಸಲಾಯಿತು ಮತ್ತು ಗಮನಾರ್ಹವಾದ ನಿರ್ವಹಣಾ ಸ್ವಾಯತ್ತತೆಯನ್ನು ನೀಡಲಾಯಿತು. ಅಲ್ಲಿ ಉತ್ತರದಾಯಿತ್ವವು ಕೇವಲ ಹೆಸರಿಗಷ್ಟೇ ಇರಲಿಲ್ಲ, ಅದು ವಾಸ್ತವವಾಗಿತ್ತು; ಆದರೆ ಅದನ್ನು ನಿರಂತರ ಶಿಕ್ಷಾರ್ಹ ಮೇಲ್ವಿಚಾರಣೆಯ ಮೂಲಕ ಮಾಡಲಿಲ್ಲ, ಬದಲಿಗೆ ದತ್ತಾಂಶ ಸಂಗ್ರಹಣೆ, ಸಂವಾದ ಮತ್ತು ನಿಯತವಾದ ವಿಮರ್ಶೆಗಳ ಮೂಲಕ ಜಾರಿಗೆ ತರಲಾಯಿತು. ಇದರ ಫಲವಾಗಿ, ಸಂಪನ್ಮೂಲಗಳ ಕೊರತೆಯ ನಡುವೆಯೂ ಸೇವೆಗಳ ಲಭ್ಯತೆ, ದಕ್ಷತೆ ಮತ್ತು ಗುಣಮಟ್ಟದಲ್ಲಿ ನಿರಂತರವಾದ ಸುಧಾರಣೆ ಕಂಡುಬಂದಿತು.

ಆರೋಗ್ಯ ಸೇವೆಯಲ್ಲಿ ಅಪಾಯವು ಸಹಜವಾದುದು ಮತ್ತು ಕೇವಲ ಕಣ್ಗಾವಲಿನಿಂದ ಅದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಅಂಗೀಕರಿಸುವುದರೊಂದಿಗೆ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರೊಂದಿಗಿನ ಹೊಸ ಒಪ್ಪಂದವು ಆರಂಭವಾಗುತ್ತದೆ.

ಬ್ರೆಜಿಲ್‌ನ ಏಕೀಕೃತ ಆರೋಗ್ಯ ವ್ಯವಸ್ಥೆಯು  ಇದೇ ರೀತಿಯ ಮಾದರಿಯನ್ನು ಪ್ರದರ್ಶಿಸುತ್ತದೆ. ಅಲ್ಲಿನ ನಗರಸಭೆಯ ಪೂರೈಕೆದಾರರು ದೀರ್ಘಾವಧಿಯ ಹಣಕಾಸು ಮತ್ತು ಯೋಜನೆಗಳ ಚೌಕಟ್ಟಿನೊಳಗೆ ಗಣನೀಯ ಸ್ವಾಯತ್ತತೆಯೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಕಾರ್ಯಕ್ಷಮತೆಯ ಮೇಲೆ ಮೇಲ್ವಿಚಾರಣೆ ಇಡಲಾಗುತ್ತದೆ, ಆದರೆ ಇಲ್ಲಿ ವೈಯಕ್ತಿಕ ದೋಷಾರೋಪಣೆಗಿಂತ ಹೆಚ್ಚಾಗಿ ನಿರಂತರತೆ, ಕಲಿಕೆ ಮತ್ತು ವ್ಯವಸ್ಥಿತ ಫಲಿತಾಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಇಲ್ಲಿನ ಸಂದರ್ಭದಲ್ಲಿ, ಶ್ರೀಮಂತ ರಾಷ್ಟ್ರಗಳ ಮಾದರಿಗಳನ್ನು ಆಮದು ಮಾಡಿಕೊಳ್ಳುವುದರಿಂದ ಅಥವಾ ಅಧಿಕಾರಶಾಹಿ ನಿಯಂತ್ರಣವನ್ನು ಬಿಗಿಗೊಳಿಸುವುದರಿಂದ ಸುಧಾರಣೆ ಬರಲಿಲ್ಲ. ವಿಶ್ವಾಸಾರ್ಹ ವೃತ್ತಿಪರ ನಿರ್ಧಾರಗಳನ್ನು ಶಿಕ್ಷಿಸುವ ಬದಲು ಗುರುತಿಸಲಾಗುತ್ತದೆ ಎಂಬ ಭರವಸೆಯನ್ನು ಮುಂಚೂಣಿಯಲ್ಲಿರುವ ಸೇವೆ ಒದಗಿಸುವವರಿಗೆ ನೀಡುವಂತಹ ಸಾಂಸ್ಥಿಕ ವ್ಯವಸ್ಥೆಗಳಿಂದ ಇದು ಸಾಧ್ಯವಾಯಿತು. ಇಂದಿನ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಇದರ ಕೊರತೆಯು ಕಂಡುಬರುತ್ತದೆ. ಸ್ಪಷ್ಟವಾದ ಒಪ್ಪಂದದ ಬದಲಿಗೆ, ನಾವು ಹಲವಾರು ಸ್ತರಗಳ ನಿಯಂತ್ರಣವನ್ನು ಕೂಡಿಹಾಕಿಕೊಂಡಿದ್ದೇವೆ. ನಿರೀಕ್ಷೆಗಳು ಹೆಚ್ಚಿವೆ, ಆದರೆ ರಕ್ಷಣೆ ಕಡಿಮೆ ಇದೆ. ಜವಾಬ್ದಾರಿಯನ್ನು ವೈಯಕ್ತೀಕರಿಸಲಾಗಿದೆ, ಆದರೆ ಅಪಾಯವನ್ನು ಕೆಳಗಿನ ಹಂತದಲ್ಲಿರುವವರಿಗೆ ವರ್ಗಾಯಿಸಲಾಗುತ್ತದೆ.

ಆರೋಗ್ಯ ರಕ್ಷಣೆಯಲ್ಲಿ ಅಪಾಯವು ಅಂತರ್ಗತವಾಗಿದೆ ಮತ್ತು ಕೇವಲ ಕಣ್ಗಾವಲಿನಿಂದ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುವ ಮೂಲಕ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರೊಂದಿಗಿನ ಹೊಸ ಒಪ್ಪಂದವು ಪ್ರಾರಂಭವಾಗಬೇಕು. ಇದು ಉತ್ತರದಾಯಿತ್ವವನ್ನು ಕೇವಲ ಒಂದು ಪ್ರತಿಕೂಲ ಘಟನೆಯ ಸಂದರ್ಭದಲ್ಲಿ ನಿಗದಿ ಮಾಡುವ ಬದಲು, ಸತತವಾದ ಅಭ್ಯಾಸ ಮತ್ತು ಕಲಿಕೆಯ ಮಾದರಿಗಳಿಗೆ ಅನ್ವಯಿಸಬೇಕು; ನಿರೀಕ್ಷೆಗಳ ಕುರಿತು ಸ್ಥಿರತೆಯನ್ನು ಒದಗಿಸಬೇಕು. ರಕ್ಷಣೆ ಇಲ್ಲದ ಸ್ವಾಯತ್ತತೆಯು ಭಯವನ್ನು ಹುಟ್ಟಿಸುತ್ತದೆ, ಹಾಗೆಯೇ ಉತ್ತರದಾಯಿತ್ವ ಇಲ್ಲದ ರಕ್ಷಣೆಯು ಉಪೇಕ್ಷೆಯನ್ನು ಉಂಟುಮಾಡುತ್ತದೆ ಎಂಬುದನ್ನು ಗುರುತಿಸಬೇಕು.

ಪ್ರಭುತ್ವದೊಂದಿಗೆ ಕೆಲಸ ಮಾಡುವ ಲಾಭೋದ್ದೇಶರಹಿತ ಸಂಸ್ಥೆಗಳಿಗೆ ಇದು ಬಹಳ ಮುಖ್ಯವಾದ ವಿಷಯ. ಅನೇಕ ಉತ್ತಮ ವಿನ್ಯಾಸದ ಉಪಕ್ರಮಗಳು ವಿಫಲವಾಗುವುದು ಅವುಗಳ ವಿಚಾರಗಳು ತಪ್ಪು ಎಂಬ ಕಾರಣಕ್ಕಲ್ಲ, ಬದಲಾಗಿ ಅವು ಭಯ ಹುಟ್ಟಿಸುವ ಮೂಲಕ ನಿಯಂತ್ರಿಸಲು ಬಯಸುವ ವ್ಯವಸ್ಥೆಗಳೊಂದಿಗೆ ಘರ್ಷಣೆ ನಡೆಸುತ್ತವೆ ಎಂಬ ಕಾರಣಕ್ಕೆ. ಒಂದು ಹೊಸ ಒಪ್ಪಂದವಿಲ್ಲದೆ ಈ ಹತಾಶೆಗಳು ಮುಂದುವರಿಯುತ್ತಲೇ ಇರುತ್ತವೆ. ಅಂತಹ ಒಂದು ಒಪ್ಪಂದವಿದ್ದರೆ, ಅದೇ ಮಧ್ಯಪ್ರವೇಶಗಳು ವಿಭಿನ್ನ ರೀತಿಯ ನಡವಳಿಕೆಗಳನ್ನು ಹೊರತರಬಲ್ಲವು. ಹೊಸ ಒಪ್ಪಂದದ ಅಂತಿಮ ಉದ್ದೇಶವೂ ಇದೇ ಆಗಿದೆ.