ಗ್ರಾಮ ಆರೋಗ್ಯ ಪೌಷ್ಟಿಕತೆ ಹಾಗೂ ನೈರ್ಮಲ್ಯ ದಿವಸ:  ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯವನ್ನು ತಲುಪಿಸುವುದು

ಚೆನ್ನಾಗಿ ಕೆಲಸ ಮಾಡುವ ವಿ ಎಚ್ ಎಸ್ ಎನ್ ,ಡಿ, ಶಿಕ್ಷಣ ಮತ್ತು ಕಾಯಿಲೆಗಳನ್ನು ತಡೆಗಟ್ಟುವ ಮೂಲಕ ಗ್ರಾಮೀಣ ಆರೋಗ್ಯವನ್ನು ಬದಲಾಯಿಸುತ್ತದೆ.

ಗ್ರಾಮ ಆರೋಗ್ಯ ಪೌಷ್ಟಿಕತೆ ಹಾಗೂ ನೈರ್ಮಲ್ಯ ದಿವಸ:  ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯವನ್ನು ತಲುಪಿಸುವುದು

ಛತ್ತೀಸಘಢದ ಧರಂಜಯಘಢದ ಬ್ಲಾಕ್ ಮಟ್ಟದ ಅಂಗನವಾಡಿ ಕೇಂದ್ರವನ್ನು ತಲುಪಲು ಸಂಗೀತ ಮಿಂಜ್ ದೃಢ ನಿಶ್ಚಯದಿಂದ, ಎರಡು ನದಿಗಳನ್ನು ದಾಟಿ ಮುನ್ನಡೆದರು. ಒಂದು ಕೈಯಲ್ಲಿ, ಅವರು ಲಸಿಕೆಗಳ ಸಣ್ಣ ಗಾಜಿನ ಶೀಷೆಗಳಿದ್ದ ಮಂಜುಗಡ್ಡೆಯ ಡಬ್ಬಿಯನ್ನು ಹಿಡಿದಿದ್ದರು. ಮತ್ತೊಂದರಲ್ಲಿ, ವೈದ್ಯಕೀಯ ಉಪಕರಣಗಳು, ಪೂರಕ ಔಷಧಿಗಳು ಹಾಗೂ ಔಷಧಿಗಳನ್ನು ಹಿಂದಿನ ದಿನವೇ ತುಂಬಿಸಿದ್ದ ಚೀಲವನ್ನು ಹಿಡಿದಿದ್ದರು. 

 ಆ ದಿನ ತಾವು ಮಾಡಬೇಕಾದ ಕೆಲಸಗಳು ಏನೆಂಬುದು ಅವರಿಗೆ ಸ್ಪಷ್ಟವಾಗಿತ್ತು: ಐದು ಮಕ್ಕಳಿಗೆ ರೋಗನಿರೋಧಕ ಚುಚ್ಚುಮದ್ದು ಕೊಡಬೇಕಾಗಿತ್ತು ಹಾಗೂ ಮೂವರು ಗರ್ಭಿಣಿ ಸ್ತ್ರೀಯರು ನಿಯಮಿತವಾಗಿ ನಡೆಯುವ ಪ್ರಸವಪೂರ್ವ ತಪಾಸಣೆಗೆ ಒಳಗಾಗಬೇಕಾಗಿತ್ತು ಎನ್ನುವುದು ಅವರಿಗೆ ತಿಳಿದಿತ್ತು. ಇದಿಷ್ಟೇ ಅಲ್ಲ.  ತೀವ್ರವಾಗಿ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದ ಮಗುವಿನ ತಾಯಿ ತಂದೆಯರ ಜೊತೆಗೆ ಆಪ್ತ ಸಮಾಲೋಚನೆ ಮಾಡಬೇಕಾಗಿತ್ತು, ನಿಯತವಾಗಿ ನೋಡಬೇಕಾದ ಮೂವರು ರೋಗಿಗಳನ್ನು ನೋಡಬೇಕಾಗಿತ್ತು ಹಾಗೂ ವಿಟಮಿನ್ ಎ ಪೂರಕ ಔಷಧಿಗಳನ್ನು ನೀಡಬೇಕಾಗಿತ್ತು.  

ಹತ್ತಿರದ ಆಯುಷ್ಮಾನ್ ಆರೋಗ್ಯ ಮಂದಿರದ ಸಹಾಯಕ ಶುಶ್ರೂಷಕ ಸೂಲಗಿತ್ತಿಯಾದ (ಆಕ್ಸಿಲಿಯರಿ ನರ್ಸ್ ಮಿಡ್ ವೈಫ್ – ಎ ಎನ್ ಎಂ) ಅವರಿಗೆ, ದಿನದ ಕೆಲಸವನ್ನು ಸರಿಯಾಗಿ ಯೋಜನೆ ಮಾಡಿಕೊಳ್ಳುವುದು ಮುಖ್ಯ ಎಂದು ತಿಳಿದಿತ್ತು. ಬ್ಲಾಕ್ ಕೇಂದ್ರದಿಂದ ದೂರದಲ್ಲಿರುವ ಗ್ರಾಮದಲ್ಲಿನ ಸಮುದಾಯವೊಂದರ ಜನರಿಗೆ ಆಕೆ ಆರೋಗ್ಯ ಸೇವೆಯನ್ನು ನೀಡಬೇಕಾಗಿತ್ತು. ಮಳೆಯಿಂದಾಗಿ ಹಾಗೂ ಅದು ದೂರದಲ್ಲಿದ್ದ ಕಾರಣದಿಂದಾಗಿ ಆ ಪ್ರದೇಶಕ್ಕೆ ಆರೋಗ್ಯ ರಕ್ಷಣೆಯ ಸೇವೆಗಳನ್ನು ಒದಗಿಸುವುದು ಕಷ್ಟವಾಗುತ್ತಿತ್ತು. ಆಕೆ ಅಂದು ಭೇಟಿಯಾಗಲಿರುವ ಎಲ್ಲರಿಗೂ ಅಂಗನವಾಡಿ ಕೇಂದ್ರವೇ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಅತ್ಯಂತ ಹತ್ತಿರದ ಸ್ಥಳವಾಗಿತ್ತು.

 ತಿಂಗಳಿಗೆ ಒಂದು ಸಲ ನಡೆಸುವ ಗ್ರಾಮ, ಆರೋಗ್ಯ, ನೈರ್ಮಲ್ಯ ಹಾಗೂ ಪೌಷ್ಟಿಕತೆಯ ದಿವಸವನ್ನು (ವಿ ಎಚ್ ಎಸ್ ಎನ್ ಡಿ) ಸಂಘಟಿಸಲು ಆಕೆ, ಅಲ್ಲಿನ ಆಶಾ ಕಾರ್ಯಕರ್ತೆ (ಛತ್ತೀಸಘಡದಲ್ಲಿ  ಮಿತಾನಿನ್ ಎಂದು ಕರೆಯುತ್ತಾರೆ) ಹಾಗೂ ಅಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಮೂವರು ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಿದ್ದರು.  

ಕಾರ್ಯ ನೀತಿ 

ರಾಷ್ಟ್ರೀಯ ಆರೋಗ್ಯ ಕಾರ್ಯಯೋಜನೆಯು 2007ರಲ್ಲಿ ಒದಗಿಸಿದ ಪರಿಕಲ್ಪನೆಯ ಪ್ರಕಾರ ಗ್ರಾಮ ಆರೋಗ್ಯ ಹಾಗೂ ಪೌಷ್ಟಿಕತೆಯ ದಿವಸವನ್ನು (ವಿ ಎಚ್ ಎನ್ ಡಿ) ಪ್ರತಿ ತಿಂಗಳೂ ಒಂದು ದಿನ ಒಂದು ನಿಗದಿತ ಪ್ರದೇಶದಲ್ಲಿ ಗಂಟೆ ಹೊಡೆದಂತೆ ತಪ್ಪದೇ ನಡೆಸಬೇಕಾಗಿತ್ತು. 2019ರಲ್ಲಿ ಅದನ್ನು ಮತ್ತಷ್ಟು ವಿಸ್ತರಿಸಿ, ಅದಕ್ಕೆ ನೈರ್ಮಲ್ಯದ ಅಂಶವನ್ನು ಸೇರಿಸಲಾಗಿತ್ತು. 

ಆಕೆ ಅಂದು ಭೇಟಿಯಾಗಲಿರುವ ಎಲ್ಲರಿಗೂ ಅಂಗನವಾಡಿ ಕೇಂದ್ರವೇ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಅತ್ಯಂತ ಹತ್ತಿರದ ಸ್ಥಳವಾಗಿತ್ತು. 

 ಯಾವುದೇ ಯೋಜನಾ ವಿನ್ಯಾಸದಲ್ಲಿ, ಲಭ್ಯತೆ ಎಂಬುದು ಬಹಳ ಮುಖ್ಯವಾದದು. ಆದ್ದರಿಂದ ಆರೋಗ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ದೇಶದ ಅತ್ಯಂತ ದೂರದ ಪ್ರದೇಶಗಳನ್ನೂ ಒಳಗೊಂಡಂತೆ ಎಲ್ಲೆಡೆ, ಎಲ್ಲರಿಗೂ ಅವರು ತಮ್ಮ ಸಮೀಪದಲ್ಲೇ ತಲುಪಲಾಗುವಂತಹ ಕೇಂದ್ರಗಳನ್ನು ಒದಗಿಸಲಾಗಿದೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ನೀಡಲಾಗುವ ಎಲ್ಲಾ ಸೇವೆಗಳಂತೆ, ಈ ಸೇವೆಗಳನ್ನು ವೆಚ್ಚರಹಿತವಾಗಿ ಒದಗಿಸಲಾಗುವುದು. 

ಇದು ಸುಲಭವಾಗಿ ಮಾಡಿ ಮುಗಿಸುವಂತಹ ಕೆಲಸವಲ್ಲ 

 ಆ ದಿನದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆಲಸಗಳನ್ನು ಮಾಡಬೇಕೆಂದರೆ ಜಾಗರೂಕತೆಯಿಂದ ಯೋಜನೆ ಮಾಡಿಕೊಳ್ಳುವುದು ಅವಶ್ಯಕ. ಎ ಎನ್ ಎಂ ಗಳು ರೋಗನಿರೋಧಕ ಚುಚ್ಚುಮದ್ದುಗಳನ್ನು ಕೊಡಬೇಕಾಗಿರುವ ವ್ಯಕ್ತಿಗಳ ಪಟ್ಟಿಯನ್ನು ಮಾಡಿಕೊಂಡು, ಹತ್ತಿರದ ಲಸಿಕಾ ಸಂಗ್ರಹಣಾ ಕೇಂದ್ರಕ್ಕೆ ಮುಂಚಿತವಾಗಿ ಬೇಡಿಕೆ ಮಂಡಿಸಬೇಕು. ನಂತರ ವಿ ಎಚ್ ಎಸ್ ಎನ್ ಡಿ ದಿನದಂದು, ಲಸಿಕಾ ಸಂಗ್ರಹಣಾ ಕೇಂದ್ರದಿಂದ ರೋಗ ನಿರೋಧಕ ಲಸಿಕೆಯ ಸಣ್ಣ ಗಾಜಿನ ಶೀಷೆಗಳನ್ನು ಪಡೆದುಕೊಂಡು, ವೈದ್ಯಕೀಯ ಉಪಕರಣಗಳು ಹಾಗೂ ಪೂರಕ ಔಷಧಿಗಳನ್ನು ಇರಿಸಿರುವ ತನ್ನ ಚೀಲವನ್ನು ಹೊತ್ತುಕೊಂಡು, ವಿ ಎಚ್ ಎಸ್ ಎನ್ ಡಿ ನಡೆಯುವ ಸ್ಥಳಕ್ಕೆ ಹೋಗಬೇಕು. 

 ಜೊತೆಜೊತೆಗೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮುಂಚಿತವಾಗಿ ಮಾಡಬೇಕಾದ ಕೆಲಸಗಳು ಹಾಗೂ ಅಲ್ಲಿಗೆ ಅಂದು ಬರಬೇಕಾದ ವ್ಯಕ್ತಿಗಳಿಗೆ ಈ ವಿಷಯವನ್ನು ತಿಳಿಸುವ ಕೆಲಸಗಳ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಪ್ರತಿ ತಿಂಗಳೂ, ಯಾವ ಸ್ಥಳಗಳಿಗೆ ಅವರು ಜವಾಬ್ದಾರರೋ ಅಂತಹ ನಾಲ್ಕರಿಂದ ಎಂಟು ವಿ ಎಚ್ ಎಸ್ ಎನ್ ಡಿ ಸ್ಥಳಗಳಲ್ಲಿ ಮಾಡಬೇಕು. 

 ಈ ವ್ಯವಸ್ಥೆಯು ವಿಭಿನ್ನ ಮಟ್ಟದ ಯಶಸ್ಸಿನೊಂದಿಗೆ ದೇಶದ ಬಹುತೇಕ ಭಾಗಗಳಲ್ಲಿ ಕೆಲಸ ಮಾಡುತ್ತದೆ. ಇದರ ಯಶಸ್ಸಿಗೆ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಒಳ್ಳೆಯ ಜನಗಳು ಕಾರಣ. ಯೋಜನೆಯ ಪ್ರಮುಖ ಭಾಗಗಳು ಕಾರ್ಯಕರ್ತವಾಗುವಂತೆ ಮಾಡುವಲ್ಲಿ ಇರುವ ಸಂಕೀರ್ಣತೆಗಳನ್ನು ಹಾಗೂ ದುರ್ಗಮ ಭೂಪ್ರದೇಶಗಳಲ್ಲಿ ತಾವು ಎದುರಿಸುವ ಸವಾಲುಗಳನ್ನು ಅವರು ದೃಢ ನಿಶ್ಚಯದಿಂದ ಎದುರಿಸುತ್ತಾರೆ. 

ಒದಗಿಸಬೇಕಾದ ಮುಖ್ಯ ಸೇವೆಗಳು 

ವಿ ಎಚ್ ಎಸ್ ಎನ್ ಡಿ ಗಳನ್ನು ನಡೆಸುವಾಗ ಒಟ್ಟು ಹದಿನೇಳು ಸೇವೆಗಳನ್ನು ಒದಗಿಸಬೇಕಾಗುತ್ತದೆ. ಅವು ಆರೋಗ್ಯ, ಪೌಷ್ಟಿಕತೆ, ಆರಂಭಿಕ ಬಾಲ್ಯ ಶಿಕ್ಷಣ ಹಾಗೂ ನೈರ್ಮಲ್ಯ ಮುಂತಾದವುಗಳನ್ನು ಒಳಗೊಳ್ಳುತ್ತದೆ. 

 ಆರೋಗ್ಯಕ್ಕೆ ಸಂಬಂಧಿಸಿದಂತೆ, ಮಾರ್ಗದರ್ಶಿ ಸೂತ್ರಗಳ ಪ್ರಕಾರ 9 ಸೇವೆಗಳನ್ನು ಒದಗಿಸಲಾಗುತ್ತದೆ. ಅವುಗಳಲ್ಲಿ ಕೆಳಗಿನ ಏಳು ವಿಷಯಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೇವೆಗಳು ಹಾಗೂ ಸಂಬಂಧಪಟ್ಟ ಆಪ್ತ ಸಲಹೆಗಳು ಹೀಗಿವೆ: 

  •  ರೋಗನಿರೋಧಕ ಚುಚ್ಚುಮದ್ದು  
  • ಪ್ರಸವಪೂರ್ವ ಆರೈಕೆ  
  • ಪ್ರಸವಾನಂತರ ಆರೈಕೆ 
  •  ಕುಟುಂಬ ಯೋಜನೆ 
  •  ಹದಿಹರೆಯದವರ ಆರೋಗ್ಯ 
  •  ಸಾಂಕ್ರಾಮಿಕ ರೋಗಗಳು (ಕ್ಷಯರೋಗ) 
  •  ಜನನೇಂದ್ರಿಯನಾಳದ ಸೋಂಕುಗಳು 

 ಈ ಕೆಳಗಿನವುಗಳಿಗೆ ಗುಂಪು ಆಪ್ತ ಸಮಾಲೋಚನಾ ಸೇವೆಗಳು 

  •  ಸಾಂಕ್ರಾಮಿಕವಲ್ಲದ ಕಾಯಿಲೆಗಳು 
  •  ಲಿಂಗತ್ವಕ್ಕೆ ಸಂಬಂಧಿಸಿದ ವಿಷಯಗಳು – ಕೌಟುಂಬಿಕ ದೌರ್ಜನ್ಯ ಹಾಗೂ ಪ್ರಸವ-ಪೂರ್ವ ಲಿಂಗ ಆಯ್ಕೆ     

ಪೌಷ್ಟಿಕತೆಗೆ ಸಂಬಂಧಿಸಿದಂತೆ, ಆರು ಆರೋಗ್ಯ ಸೇವೆಗಳಿವೆ. ಈ ಕೆಳಗಿನವುಗಳಿಗೆ ಆರೋಗ್ಯ ಸೇವೆಯ ವಿತರಣೆ ಹಾಗೂ ಆಪ್ತ ಸಮಾಲೋಚನೆ ನಡೆಸಲಾಗುತ್ತದೆ: 

  •  ಬೆಳವಣಿಗೆಯ ಮೇಲೆ ಲಕ್ಷ್ಯವಿಡುವುದು 
  •  ರಕ್ತ ಹೀನತೆಯನ್ನು ತಡೆಗಟ್ಟುವುದು ಹಾಗೂ ನಿರ್ವಹಿಸುವುದು 
  •  ವಿಟಮಿನ್ ಎ ಪೂರಕ ಔಷಧಗಳನ್ನು ನೀಡುವುದು 
  •  ಪೌಷ್ಟಿಕತಾ ಪೂರಕ ಔಷಧಗಳನ್ನು ನೀಡುವುದು 

   ಈ ಕೆಳಗಿನವುಗಳಿಗೆ ಆಪ್ತ ಸಮಾಲೋಚನೆ ನೀಡಲಾಗುವುದು: 

  •  ಸೂಕ್ತವಾದ ಪೌಷ್ಟಿಕತೆಗೆ ಒತ್ತಾಸೆ ನೀಡುವಂತೆ ಅರಿವು ಮೂಡಿಸುವುದು 
  •  ಲವಣಗಳ ಸಾರವರ್ಧನೆ  

ಎಲ್ಲಾ ವೈದ್ಯಕೀಯ ಸೇವೆಗಳನ್ನು ಎ ಎನ್ ಎಂ ಗಳು ಹಾಗೂ ಲಭ್ಯವಿದ್ದರೆ, ಸಮುದಾಯ ಆರೋಗ್ಯ ಅಧಿಕಾರಿಗಳು (ಕಮ್ಯುನಿಟಿ ಹೆಲ್ತ್ ಆಫೀಸರ್ – ಸಿ ಎಚ್ ಓ) ಒದಗಿಸಬೇಕು. ಈ ಆರೋಗ್ಯ ಸೇವೆಗಳನ್ನು ಯಾರು ಪಡೆದುಕೊಳ್ಳಬೇಕಾಗಿರುತ್ತದೋ ಅವರಿಗೆ ಈ ವಿಷಯವನ್ನು ತಿಳಿಸುವುದರಲ್ಲಿ ಹಾಗೂ ಅವರನ್ನು ಒಟ್ಟುಗೂಡಿಸುವುದರಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಸಂತಾನೋತ್ಪಾದನೆ, ತಾಯಂದಿರು ಹಾಗೂ ಮಕ್ಕಳ ಆರೋಗ್ಯದಂತಹ ವಿಷಯಗಳ ಕುರಿತು ವಿಶೇಷವಾಗಿ ಆಪ್ತ ಸಮಾಲೋಚನೆಯ ಸೇವೆಗಳನ್ನೂ ಸಹ ಅವರು ನೀಡುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರು ಬೆಳವಣಿಗೆಯ ಮೇಲೆ ಲಕ್ಷ್ಯವಿಡುವುದು, ಪೌಷ್ಟಿಕತೆಯ ಕುರಿತು ಆಪ್ತ ಸಮಾಲೋಚನೆ ಮಾಡುವುದು ಹಾಗೂ ಪೂರಕ ಆಹಾರಗಳನ್ನು ಹಂಚುವುದರ ಜೊತೆಗೆ ಸಮುದಾಯದ ಜನರನ್ನು ಈ ಕಾರ್ಯಕ್ರಮಕ್ಕೆ ಅಣಿನೆರೆಸುವುದಕ್ಕೆ ಆಶಾಗಳಿಗೆ ನೆರವು ನೀಡುತ್ತಾರೆ. 

The system works in most parts of the country — albeit at varying levels of excellence. For this, the credit lies with the good people in the public system.

With resilience, they navigate both the complexities of operationalizing the moving pieces, and the challenges they face in difficult geographies.

ಒಂದು ಒಳ್ಳೆಯ ವಿ ಎಚ್ ಎಸ್ ಎನ್ ಡಿ 

The Health Worker Infographic-image

 ಆಶಾ ಬಾರಾರವರೂ ಸಹ ಧರಂಜಯಘಢ ಬ್ಲಾಕ್ ನಲ್ಲಿ ಆಗಿ ಎ ಎನ್ ಎಂ ಆಗಿ ಸಹ ಕೆಲಸ ಮಾಡುತ್ತಾರೆ, ಅವರು ಆರೋಗ್ಯ ಇಲಾಖೆ ವತಿಯಿಂದ ನೀಡಲಾಗುತ್ತಿರುವ ಆರೋಗ್ಯ ಸೇವೆಗಳು ಕಾಲಕ್ರಮೇಣ ರೋಗ ಪ್ರತಿಬಂಧಕ ಲಸಿಕೆ ನೀಡುವುದಕ್ಕೆ ಹಾಗೂ ಪ್ರಸವಪೂರ್ವ ಆರೈಕೆಗೆ ಸೀಮಿತಗೊಂಡಿರುವುದನ್ನು ಗಮನಿಸಿದ್ದರು. ಇದನ್ನು ಸರಿಪಡಿಸಲು ಅವರು ಉತ್ಸುಕರಾಗಿದ್ದರು. ಅವರು ಒಂದಾದ ಮೇಲೆ ಒಂದರಂತೆ ಪ್ರತಿ ಸ್ಥಳದಲ್ಲಿಯೂ ವ್ಯವಸ್ಥಿತವಾಗಿ ಬದಲಾವಣೆಗಳನ್ನು ತರುವ ಕೆಲಸವನ್ನು ಪ್ರಾರಂಭಿಸಿದರು. ಮೊದಲಿಗೆ, ಒಂದನೇ ವಿ ಎಚ್ ಎಸ್ ಎನ್ ಡಿ ಸ್ಥಳವನ್ನು ಆರಿಸಿಕೊಂಡ ಬಳಿಕ, ಮಿತಾನಿನ್ ಹಾಗೂ ಅಂಗನವಾಡಿ ಕಾರ್ಯಕರ್ತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. 

 ಅಂಗನವಾಡಿ ಕೇಂದ್ರದೊಳಗೆ ಆರೋಗ್ಯ ಸೇವೆಗಳನ್ನು ಯಾವ ನಿರ್ದಿಷ್ಟ ಜಾಗಗಳಲ್ಲಿ ವಿತರಿಸುವುದು ಎಂದು ಹಿಂದಿನ ದಿನವೇ ಗುರುತು ಮಾಡಲಾಯಿತು. ಮಕ್ಕಳ ಬೆಳವಣಿಗೆಯನ್ನು ಮಾಪನ ಮಾಡಲು ಹಾಗೂ ಗರ್ಭಿಣಿ ಸ್ತ್ರೀಯರ ಆರೋಗ್ಯದ ಪ್ರಮುಖ ಅಂಶಗಳನ್ನು ಮಾಪನ ಮಾಡಲು ಪರಿಶೀಲನಾ ಸ್ಥಳಗಳನ್ನು ಸಿದ್ಧಗೊಳಿಸಲಾಯಿತು. ಗರ್ಭಿಣಿ ಸ್ತ್ರೀಯರ ಹೊಟ್ಟೆಯ ಪರೀಕ್ಷೆಗಾಗಿ ಪರದೆಗಳನ್ನು ಖಾಸಗಿ ಸ್ಥಳಗಳನ್ನು ಸೃಷ್ಟಿಸಲಾಯಿತು. ಆಯ್ದ ನಿರ್ದಿಷ್ಟ ಗುಂಪುಗಳಿಗೆ ಆರೋಗ್ಯದ ಬಗ್ಗೆ ಆಪ್ತ ಸಮಾಲೋಚನೆ ನಡೆಸಲೂ ಸಹ ಸ್ಥಳಗಳನ್ನು ಸಜ್ಜುಗೊಳಿಸಲು ನಿರ್ಧರಿಸಲಾಯಿತು. ಕುಡಿಯುವ ನೀರಿಗಾಗಿ ಸ್ಥಳವನ್ನು ನಿಗದಿ ಪಡಿಸಲಾಯಿತು. ಅಲ್ಲಿನ ಸಮುದಾಯದ ಜನರಿಗೆ ಮುಂಚಿತವಾಗಿ ವಿಷಯವನ್ನು ತಿಳಿಸಲಾಯಿತು. 

 ಮಾರನೆಯ ದಿನ, ಆ ಅಂಗನವಾಡಿ ಕೇಂದ್ರವು ತೀವ್ರ ಚಟುವಟಿಕೆಯ ಸ್ಥಳವಾಗಿ ಮಾರ್ಪಟ್ಟಿತು. ಆ ದಿನ ನಡೆದ ಕೆಲವು ಕೆಲಸ ಕಾರ್ಯಗಳು ಹೀಗಿದ್ದವು: 

 ಹದಿಹರೆಯದ ಹುಡುಗಿಯರನ್ನು ಒಂದು ಕಡೆ ಕೂಡಿಸಿ, ಅವರಿಗೆ ಕಬ್ಬಿಣದ ಅಂಶ ಹಾಗೂ ಫೋಲಿಕ್ ಆಮ್ಲದ (ವಿಟಮಿನ್ ಬಿ 9) ಪೂರಕ ಔಷಧಿಗಳ ಅವಶ್ಯಕತೆಯ ಕುರಿತು ತಿಳಿಸಲಾಗುತ್ತಿತ್ತು.

 ಮಕ್ಕಳ ಬೆಳವಣಿಗೆಯ ಮಾಪನ ಮಾಡುತ್ತಿದ್ದ ಸ್ಥಳದ ಹತ್ತಿರವೇ, ಪೌಷ್ಟಿಕತಾ ಕೇಂದ್ರವನ್ನು ಸಿದ್ಧಪಡಿಸಲಾಗಿತ್ತು, ಅಲ್ಲಿ ಅಂಗನವಾಡಿ ಕಾರ್ಯಕರ್ತರು ಮಕ್ಕಳ ಆರೋಗ್ಯವನ್ನು ಕಾಪಾಡಲು ಸ್ಥಳೀಯವಾಗಿ ಬೆಳೆಯುವ ಆಹಾರವು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ತಾಯಂದಿರಿಗೆ ವಿವರಿಸುತ್ತಿದ್ದರು. 

 ಅಲ್ಲಿನ ಎ ಎನ್ ಎಮ್ ಗರ್ಭಿಣಿ ಸ್ತ್ರೀಯರ ತೂಕವನ್ನು ಅಳತೆ ಮಾಡುತ್ತಿದ್ದರು ಹಾಗೂ ಅವರ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ದಾಖಲಿಸಿಕೊಳ್ಳುತ್ತಿದ್ದರು.  ಅವರಿಗೆ ಸಾಕಷ್ಟು ಪೂರಕ ಔಷಧಿಗಳನ್ನು ನೀಡಲಾಯಿತು ಹಾಗೂ ಅವರು ಆರಾಮವಾಗಿರಬೇಕು, ಚೆನ್ನಾಗಿ ತಿನ್ನಬೇಕು ಮತ್ತು ಕಾಲಕಾಲಕ್ಕೆ ಪೂರಕ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಯಿತು. 

 ಗರ್ಭಾವಸ್ಥೆಯ ಕೊನೆಯ ಹಂತದಲ್ಲಿರುವವರಿಗೆ ಮಿತಾನಿನ್, ಅವರ ಹೆರಿಗೆಯ ನಿರ್ವಹಣೆಯ ಕುರಿತು ಸರಿಯಾಗಿ ಆಲೋಚಿಸಿ ಖಚಿತಪಡಿಸಿಕೊಳ್ಳಬೇಕೆಂದು ಸಲಹೆ ನೀಡುತ್ತಿದ್ದರು. 

 ತಮ್ಮ ಉಪಕ್ರಮವು, ಪ್ರತಿಯೊಂದಕ್ಕೂ ಗಮನಕೊಟ್ಟು ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಒಂದು ತಂಡವಾಗಿ ಕೆಲಸ ಮಾಡುವುದು – ಇವುಗಳ ಮೂಲಕ ಅವರು ವಿ ಎಚ್ ಎಸ್ ಎನ್ ಡಿ ಯನ್ನು ಒಂದು ಜೀವಂತಿಕೆ ತುಂಬಿ ತುಳುಕುತ್ತಿದ್ದ  ಕಾರ್ಯಕ್ರಮವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದರು, ಅಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚೆ ಮಾಡಬಹುದಾಗಿತ್ತು ಹಾಗೂ ಆರೋಗ್ಯ ಸೇವೆಗಳನ್ನು ಮನೆಗೆ ಹತ್ತಿರದಲ್ಲಿ ಪಡೆದುಕೊಳ್ಳಬಹುದಾಗಿತ್ತು. 

ಆಶಾ ಬಾರಾ ಹಾಗೂ ಸಂಗೀತ ಮಿಂಚ್ ನಂತಹ ಎನ್ ಎನ್ ಎಂ ಗಳು ದೇಶದಾದ್ಯಂತ ಸುಮಾರು 1.6 ಲಕ್ಷ ಆಯುಷ್ಮಾನ್ ಆರೋಗ್ಯ ಮಂದಿರಗಳಿಂದ ಸಮುದಾಯಗಳ ಜನರಿಗೆ ಆರೋಗ್ಯ ಸೇವೆಗಳನ್ನು, ಪ್ರತಿವಾರವೂ ಒಂದು ಅಥವಾ ಎರಡು ವಿ ಎಚ್ ಎಸ್ ಎನ್ ಡಿ ಗಳ ಮೂಲಕ, ಅವರವರ ಮನೆಗಳ ಹತ್ತಿರವೇ ಒದಗಿಸುತ್ತಿದ್ದಾರೆ.