ಬೀನಾದೇವಿಯು (ಹೆಸರನ್ನು ಬದಲಾಯಿಸಲಾಗಿದೆ) ತನ್ನ ಸಂಪಾದನೆಯ ಬಹಳಷ್ಟು ಹಣವನ್ನು ಕುಟುಂಬದವರ ಆರೋಗ್ಯದ ಅವಶ್ಯಕತೆಗಾಗಿ ಖರ್ಚು ಮಾಡುತ್ತಾರೆ. ಅನೇಕ ಸಲ, ಅವರ ಸಂಸಾರದಲ್ಲಿ ಹೊಟ್ಟೆ ತುಂಬಾ ಊಟ ಮಾಡಲು ಅನ್ನವನ್ನೋ ಅಥವಾ ಗಂಜಿಯನ್ನೋ ಹೊಂದಿಸಿಕೊಳ್ಳಲು ಬೇಕಾಗುವಷ್ಟು ಹಣ ಸಹ ಇರುವುದಿಲ್ಲ. ಅವರು ಸಂಪಾದನೆ ಮಾಡುವ ಬಹಳಷ್ಟು ಆದಾಯವು ಆರೋಗ್ಯದ ಖರ್ಚುವೆಚ್ಚಗಳಿಗೆ ಬೇಕಾಗುತ್ತದೆ. ಬೀನಾದೇವಿಯವರ ಮಗ ಪದೇಪದೇ ಕೆಮ್ಮು, ನೆಗಡಿ ಅಥವಾ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾರೆ. ಅವರ ಮಾವನಿಗೆ ಮಧುಮೇಹಕ್ಕೆ ಪ್ರತಿದಿನವೂ ಔಷಧಿ ಬೇಕಾಗುತ್ತದೆ.
ಪ್ರತಿ ತಿಂಗಳ ಮನೆಯ ಆಯವ್ಯಯದಲ್ಲಿ ವೈದ್ಯಕೀಯ ಕಾರಣಕ್ಕಾಗಿ ಮಾಡಬೇಕಾದ ಖರ್ಚು ಬಹಳ ದೊಡ್ಡ ಭಾಗವಾಗುತ್ತದೆ. ಹಣಕಾಸಿನ ಸಹಾಯಕ್ಕಾಗಿ ಅವರು ಯಾರನ್ನೂ ಕೇಳದ ಪರಿಸ್ಥಿತಿ ತಲುಪಿದ್ದಾರೆ ಏಕೆಂದರೆ ಅವರು ಈಗಾಗಲೇ ತಮಗೆ ತಿಳಿದಿರುವ ಎಲ್ಲರಿಂದಲೂ ಸಾಲ ತೆಗೆದುಕೊಂಡಿದ್ದಾರೆ. ಬೀನಾದೇವಿ ಸುಸ್ತಾಗಿ ಹೋಗಿದ್ದಾರೆ ಹಾಗೂ ತಮ್ಮ ಕುಟುಂಬದ ಭವಿಷ್ಯದ ಕುರಿತು ಚಿಂತೆಗೀಡಾಗಿದ್ದಾರೆ.
ಜನ ಔಷಧಿ ಕೇಂದ್ರ
ಬೀನಾದೇವಿ ಹಾಗೂ ಅವರ ಕುಟುಂಬದಂಥವರಿಗೆ ಸಹಾಯ ಮಾಡಲು, ಸರಕಾರ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳಲ್ಲಿ ‘ಜನ ಔಷಧಿ ಕೇಂದ್ರ’ವೂ ಒಂದು – ಅದು ಜೆನೆರಿಕ್ ಔಷಧಿಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಅಂಗಡಿ.
ಈ ಯೋಜನೆಯನ್ನು 2008ರಲ್ಲಿ ಪ್ರಾರಂಭಿಸಲಾಯಿತು ಹಾಗೂ ಅದನ್ನು ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನ (ಪಿ ಎಂ ಬಿ ಜೆ ಪಿ) ಎಂದು ಹೆಸರಿಸಲಾಯಿತು. ದೇಶದಾದ್ಯಂತ 16,400 ಕ್ಕೂ ಹೆಚ್ಚು ಜನ ಔಷಧಿ ಕೇಂದ್ರಗಳಿವೆ.

ನವದೆಹಲಿಯ, ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿ ಎಂ ಎಸ್) ಎಂಬ ಸಂಸ್ಥೆಯು, ಅಸ್ಸಾಂ ಹಾಗೂ ರಾಜಸ್ಥಾನ ರಾಜ್ಯಗಳ ನಗರ ಪ್ರದೇಶಗಳಲ್ಲಿ ಜನ ಔಷಧಿ ಕೇಂದ್ರಗಳ ಪರಿಣಾಮಕಾರಿತ್ವದ ಕುರಿತು ಇತ್ತೀಚಿಗೆ ಒಂದು ಅಧ್ಯಯನವನ್ನು ಮಾಡಿತು.
ಜನ ಔಷಧಿ ಕೇಂದ್ರಗಳಲ್ಲಿ ತಮಗೆ ಬೇಕಾದ ಔಷಧಿಗಳನ್ನು ಕೊಂಡುಕೊಳ್ಳುವ ಮೂಲಕ ಕುಟುಂಬಗಳಿಗೆ ಹಣವನ್ನು ಉಳಿಸಲು ಸಾಧ್ಯವಾಗುತ್ತಿದೆಯೇ ಎಂದು ಅಧ್ಯಯನದಲ್ಲಿ ಪರೀಕ್ಷಿಸಲಾಯಿತು. ದೀರ್ಘಕಾಲೀನ ಆರೋಗ್ಯದ ಸಮಸ್ಯೆಯಿರುವ ಒಬ್ಬರಾದರೂ ಸದಸ್ಯರನ್ನು ಹೊಂದಿದ್ದ ಕುಟುಂಬಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಅಧ್ಯಯನದ ಭಾಗವಾಗಿ, ಸಿ ಎಂ ಎಸ್ ತಂಡವು ಜನ ಔಷಧಿ ಕೇಂದ್ರಗಳಿಂದ ಅವರಿಗೆ ಬೇಕಾದ ಔಷಧಿಗಳನ್ನು ಕೊಂಡುಕೊಳ್ಳದೇ ಇದ್ದ ಕುಟುಂಬಗಳನ್ನು ಸಹ ಭೇಟಿ ಮಾಡಿತು. ಈ ಅಧ್ಯಯನದಿಂದ ಕಂಡು ಬಂದ ಅಂಶಗಳನ್ನು ಈ ಲೇಖನವು ಪ್ರಸ್ತಾಪಿಸುತ್ತದೆ.
ದೇಶದಾದ್ಯಂತ 16,400 ಕ್ಕೂ ಹೆಚ್ಚು ಜನ ಔಷಧಿ ಕೇಂದ್ರಗಳಿವೆ.
ಉಳಿತಾಯದ ಸಾಮಾಜಿಕ – ಆರ್ಥಿಕ ಪರಿಣಾಮ
ತಮ್ಮ ಕುಟುಂಬದ ಸದಸ್ಯರ ವೈದ್ಯಕೀಯ ಖರ್ಚುಗಳಿಗಾಗಿ ಕೆಲವು ಕುಟುಂಬಗಳು ಪ್ರತಿ ತಿಂಗಳು 900 ರೂಪಾಯಿಗಳನ್ನು (ಸರಾಸರಿ ಮೌಲ್ಯ) ಖರ್ಚು ಮಾಡುತ್ತದೆ. ಅದರಲ್ಲಿ ಅರ್ಧಕ್ಕೂ ಹೆಚ್ಚು ಭಾಗ (ಶೇಕಡಾ 56) ಔಷಧಿಗಳಿಗಾಗಿ ಖರ್ಚಾಗುತ್ತಿತ್ತು.
ಜನ ಔಷಧಿ ಕೇಂದ್ರಗಳಿಂದ ನಿಯತವಾಗಿ ಔಷಧಿಗಳನ್ನು ಕೊಂಡುಕೊಳ್ಳುವ ಪ್ರತಿ ಕುಟುಂಬವೂ ಔಷಧಿಗಳ ಕಡಿಮೆ ಬೆಲೆಗಳಿಂದಾಗಿ ತಿಂಗಳಿಗೆ ಸರಾಸರಿ 550 ರೂಪಾಯಿಗಳನ್ನು ಉಳಿಸುತ್ತಿತ್ತು. ನಾಲ್ಕು ಕುಟುಂಬಗಳಲ್ಲಿ ಒಂದು ಕುಟುಂಬವು ಪ್ರತಿ ತಿಂಗಳೂ ಔಷಧಿಯ ಖರ್ಚಿನಲ್ಲಿ 1000 ರೂಪಾಯಿಗಳನ್ನು ಉಳಿಸುತ್ತಿತ್ತು.
ದೀರ್ಘಕಾಲೀನ ಕಾಯಿಲೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ, ಅಥವಾ ಹೊಟ್ಟೆಗೆ ಸಂಬಂಧಿಸಿದ ಖಾಯಿಲೆಗಳ ಔಷಧಿಗಳಿಗೆ ಜನ ಔಷಧಿ ಕೇಂದ್ರಗಳಲ್ಲಿ ತಗಲುವ ಖರ್ಚಿಗೆ ಹೋಲಿಸಿದರೆ ಖಾಸಗಿ ಔಷಧಿ ಅಂಗಡಿಗಳ ಔಷಧಿಗಳ ಖರ್ಚು 4 ಪಟ್ಟಿಗಿಂತಲೂ ಹೆಚ್ಚಾಗುತ್ತಿತ್ತು.
ಅದರಲ್ಲಿ ಅರ್ಧಕ್ಕೂ ಹೆಚ್ಚು ಭಾಗ (ಶೇಕಡಾ 56) ಔಷಧಿಗಳಿಗಾಗಿ ಖರ್ಚಾಗುತ್ತಿತ್ತು.
ಕುಟುಂಬಗಳು ಉಳಿತಾಯ ಮಾಡಿದ ಹಣವನ್ನು ಕುಟುಂಬದ ಸದಸ್ಯರಿಗೆ ಪೌಷ್ಟಿಕ ಆಹಾರ, ಉತ್ತಮ ಆರೋಗ್ಯದ ಸೌಲಭ್ಯಗಳು, ಮಕ್ಕಳಿಗೆ ಶಿಕ್ಷಣ ಹಾಗೂ ಭವಿಷ್ಯದ ಅವಶ್ಯಕತೆಗಳಿಗಾಗಿ ಉಳಿತಾಯ ಮುಂತಾದವುಗಳಿಗೆ ವಿನಿಯೋಗಿಸುತ್ತಿದ್ದವು.
ಗ್ರಹಿಕೆ ಹಾಗೂ ಅನುಭವಗಳು
ಶೇಕಡ 50ರಷ್ಟು ಕುಟುಂಬಗಳಿಗೆ ಜನ ಔಷಧಿ ಕೇಂದ್ರಗಳ ಕುರಿತು ಹಾಗೂ ಅವುಗಳು ತಮ್ಮ ಮನೆಗಳಿಂದ ಒಂದರಿಂದ ಮೂರು ಕಿಲೋಮೀಟರ್ ವ್ಯಾಪ್ತಿಯೊಳಗೆ ಇವೆ ಎಂಬುದು ತಿಳಿದಿತ್ತು. ಶೇಕಡಾ 45ರಷ್ಟು ಕೇಂದ್ರಗಳು ಅವರ ಮನೆಗಳಿಂದ ಒಂದು ಕಿಮಿ.ಗಿಂತಲೂ ಕಡಿಮೆ ದೂರದಲ್ಲಿದ್ದವು.
ಜನ ಔಷಧಿ ಕೇಂದ್ರಗಳಿಂದ ನಿಯತವಾಗಿ ಔಷಧಿಗಳನ್ನು ಕೊಂಡುಕೊಳ್ಳುವ ಪ್ರತಿ ಕುಟುಂಬವೂ ಔಷಧಿಗಳ ಕಡಿಮೆ ಬೆಲೆಗಳಿಂದಾಗಿ ತಿಂಗಳಿಗೆ ಸರಾಸರಿ 550 ರೂಪಾಯಿಗಳನ್ನು ಉಳಿಸುತ್ತಿತ್ತು
ಜನ ಔಷಧಿ ಕೇಂದ್ರಗಳಲ್ಲಿ ನಿಯತವಾಗಿ ಔಷಧಿಗಳನ್ನು ಕೊಂಡುಕೊಳ್ಳುವ ಬಹುತೇಕ ಜನರು ಅವಶ್ಯಕ ಪ್ರಮಾಣದಲ್ಲಿ ಔಷಧಿಗಳು ದೊರೆಯದಿರುವುದು ಕಳವಳದ ವಿಷಯ ಎಂದು ಅಭಿಪ್ರಾಯಪಟ್ಟರು. ಆಸಕ್ತಿದಾಯಕವಾದ ವಿಷಯವೆಂದರೆ, ಬಹುತೇಕ ಕುಟುಂಬಗಳು ಜನ ಔಷಧಿ ಕೇಂದ್ರಗಳು ಹಾಗೂ ಅವುಗಳ ಇತರ ವೈಶಿಷ್ಟ್ಯಗಳ ಬಗ್ಗೆ ಅಪಾರವಾದ ತೃಪ್ತಿಯನ್ನೂ ಸಹ ಹೊಂದಿದ್ದವು.
ಜನ ಔಷಧಿ ಕೇಂದ್ರಗಳು ಹತ್ತಿರದಲ್ಲಿದ್ದರೂ ಸಹ ಕೇಂದ್ರದಿಂದ ಔಷಧಿಗಳನ್ನು ಕೊಂಡುಕೊಳ್ಳದಿರುವ ಶೇಕಡ 56ಕ್ಕಿಂತಲೂ ಹೆಚ್ಚಿನ ಜನರು, ಅವರ ವೈದ್ಯರು ಜೆನೆರಿಕ್ ಔಷಧಿಗಳನ್ನು ಬರೆದುಕೊಡದಿರುವುದು ಅದಕ್ಕೆ ಮುಖ್ಯ ಕಾರಣ ಎಂದು ಹೇಳುತ್ತಾರೆ. ಇದಕ್ಕೆ ಸಮಾನವಾದ ಸಂಖ್ಯೆಯ ಜನರು (ಶೇಕಡಾ 52) ಜೆನೆರಿಕ್ ಔಷಧಿಗಳ ಕುರಿತು ನಂಬಿಕೆ ಇಲ್ಲ ಎಂದು ಹೇಳಿದರು. ಔಷಧಿಗಳ ಲಭ್ಯತೆಯೂ ಸಹ ಕಾಳಜಿಯ ವಿಷಯ ಎಂದು ವರದಿಯಾಗಿದೆ.
ಮಧ್ಯಮ – ಆದಾಯವನ್ನು ಹೊಂದಿರುವ ಹಾಗೂ ಶ್ರೀಮಂತ ಕುಟುಂಬಗಳೂ ಸಹ ಜನ ಔಷಧಿ ಕೇಂದ್ರಗಳಿಂದ ಔಷಧಿಗಳನ್ನು ಖರೀದಿಸುತ್ತಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಂಡಕ್ಕೆ ತಿಳಿಸಿದರು. ಅವರು ಏಕೆ ಕೊಂಡುಕೊಳ್ಳುತ್ತಾರೆ ಎಂದರೆ ಔಷಧಿಗಳ ಸಂಯೋಜನೆಯು ಮುಖ್ಯ ಎನ್ನುವುದು ಹಾಗೂ ವಿವಿಧ ಖಾಸಗಿ ಕಂಪನಿಗಳ – ಬ್ರಾಂಡೆಡ್ – ಔಷಧಿಗಳಿಗೂ ಜೆನೆರಿಕ್ ಔಷಧಿಗಳಿಗೂ ಮಧ್ಯೆ ವ್ಯತ್ಯಾಸವಿಲ್ಲದಿರಬಹುದು ಎಂದು ಅವರಿಗೆ ತಿಳಿದಿದೆ.
Subscribe to stay connected
We will send you a monthly newsletter listing all the articles that were published in the month.
ಸವಾಲುಗಳು
ಅಧ್ಯಯನವು ಹಲವಾರು ಸವಾಲುಗಳನ್ನೂ ಸಹ ಗುರುತಿಸಿತು. ಅವುಗಳೆಂದರೆ, ಔಷಧಿಗಳ ತಡವಾದ ಪೂರೈಕೆ, ಔಷಧ ಸರಬರಾಜಿನಲ್ಲಿ ಕೋರಿಕೆ ಮತ್ತು ಪೂರೈಕೆಗೆ ಸಂಬಂಧಿಸಿದ ಸವಾಲುಗಳು ಹಾಗೂ ಜೆನೆರಿಕ್ ಔಷಧಿಗಳನ್ನು ಬರೆದುಕೊಡಲು ವೈದ್ಯ ಸಮುದಾಯದಲ್ಲಿ ಕಂಡುಬರುವ ಹಿಂಜರಿಕೆ ಮುಂತಾದವು.
ಸುಧಾರಣೆಗೆ ಅವಕಾಶಗಳು
ಸುಧಾರಣೆಗೆ ಇರುವಂತಹ ಹಲವಾರು ಅವಕಾಶಗಳನ್ನು ಅಧ್ಯಯನವು ಗುರುತಿಸಿತು.
ಜನ ಔಷಧಿ ಕೇಂದ್ರಗಳನ್ನು ನಡೆಸುವವರ ದೃಷ್ಟಿಯಿಂದ ನೋಡಿದರೆ ಅವು, ಔಷಧಿಗಳ ಪೂರೈಕೆಯನ್ನು ಉತ್ತಮಪಡಿಸುವುದು, ಔಷಧಿಗಳನ್ನು, ಅವುಗಳನ್ನು ಬಳಸುವ ಅವಧಿ ಮುಗಿಯುವುದಕ್ಕೆ ಸಾಕಷ್ಟು ಮೊದಲೇ ಒದಗಿಸುವುದು ಹಾಗೂ ಕಡಿಮೆ ಮೌಲ್ಯದ ಬೇಡಿಕೆಗಳನ್ನೂ ಸಹ ಪೂರೈಸುವುದು, ಮುಂತಾದವು.
ಹೆಚ್ಚು ಜನರು ಕಡಿಮೆ ಬೆಲೆಯ ಔಷಧಿಗಳನ್ನು ಪಡೆದುಕೊಳ್ಳಲು ನೆರವಾಗಬೇಕೆಂದರೆ, ಆಗ ಜನ ಔಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಕಡಿಮೆ ಬೆಲೆಗಳ ಹಾಗೂ ಒಳ್ಳೆಯ ಗುಣಮಟ್ಟದ ಔಷಧಿಗಳ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಜೆನೆರಿಕ್ ಔಷಧಿಗಳನ್ನು ಬರೆಯುವಂತೆ ವೈದ್ಯರುಗಳನ್ನು ಉತ್ತೇಜಿಸಬೇಕು.
ಪ್ರಯೋಜನಗಳು
ಜನ ಔಷಧಿ ಕೇಂದ್ರಗಳಲ್ಲಿ ಅವರಿಗೆ ಬೇಕಾದ ಔಷಧಿಗಳನ್ನು ಕೊಂಡುಕೊಳ್ಳುವ ಮೂಲಕ ಜನಗಳು ಗಣನೀಯ ಪ್ರಮಾಣದಲ್ಲಿ ಹಣವನ್ನು ಉಳಿಸಬಹುದು. ‘ನಂಬಿಕೆಯ ಅಂಶ’ವು ವಾಸ್ತವವಾದುದು, ತಾವು ಕೊಂಡುಕೊಳ್ಳುವ ಔಷಧಿಗಳು ಉತ್ತಮ ಗುಣಮಟ್ಟದವು ಎಂಬುದನ್ನು ಜನ ಕಂಡುಕೊಳ್ಳುತ್ತಾರೆ.
ತೀರ್ಮಾನ
ಪೂರೈಕೆ ಮಾಡುವುದರಲ್ಲಿ ಎದುರಾಗುವ ಸವಾಲುಗಳು, ಫಲಾನುಭವಿಗಳ ಅವಶ್ಯಕತೆಗಳಿಗೆ ಸ್ಪಂದಿಸುವಲ್ಲಿ ಔಷಧ ವ್ಯಾಪಾರಿಗಳು ಎದುರಿಸುವ ಸಮಸ್ಯೆಗಳು ಹಾಗೂ ಜೆನೆರಿಕ್ ಔಷಧಿಗಳನ್ನು ಬರೆಯುವುದರಲ್ಲಿ ವೈದ್ಯರ ಪ್ರತಿರೋಧ ಮುಂತಾದ ಕೆಲವು ಪ್ರಸಕ್ತ ಸವಾಲುಗಳು ವಾಸ್ತವವಾದವು.
ಅದೇನೇ ಇದ್ದರೂ, ಜನ ಔಷಧಿ ಕೇಂದ್ರಗಳು ದೊಡ್ಡ ಜನವಿಭಾಗಕ್ಕೆ ಗಮನಾರ್ಹವಾಗಿ ಉಳಿತಾಯ ಮಾಡಲು ಅವಕಾಶ ನೀಡುತ್ತವೆ.
ದೇಶದಾದ್ಯಂತ ಹೆಚ್ಚು ಜನ ಔಷಧಿ ಕೇಂದ್ರಗಳನ್ನು ಆರಂಭಿಸುವುದರಿಂದ ಬೀನಾದೇವಿಯಂತಹ ಅನೇಕರು ಆರೋಗ್ಯದ ಮೇಲೆ ತಾವು ಮಾಡಬೇಕಾದ ಖರ್ಚನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ.
