ಔಷಧಾಲಯಗಳು ಉತ್ತಮ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀಡುವಲ್ಲಿ ನೆರವಾಗಬಹುದೇ?

ಖಾಯಿಲೆ ಉಂಟಾದಾಗ ಬಹುತೇಕ ಜನರು ಸಂಪರ್ಕಿಸುವ ಮೊದಲ ಸ್ಥಳವೆಂದರೆ ಅದು ತಮ್ಮ ನೆರೆಹೊರೆಯಲ್ಲಿರುವ ಔಷಧಾಲಯ. ಸಮುದಾಯದಲ್ಲಿರುವ ಈ ನಂಬಿಕೆ ಮತ್ತು ಸುಲಭ ಲಭ್ಯತೆಯನ್ನು ಬಳಸಿಕೊಂಡು, ಔಷಧಿಕಾರರನ್ನು ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆಯೊಳಗೆ ಅಧಿಕೃತವಾಗಿ ಒಂದಾಗಿಸಿಕೊಳ್ಳಬಹುದೇ?

ಔಷಧಾಲಯಗಳು ಉತ್ತಮ ಪ್ರಾಥಮಿಕ ಆರೋಗ್ಯ ಸೇವೆಯನ್ನು ನೀಡುವಲ್ಲಿ ನೆರವಾಗಬಹುದೇ?

ಜನರು ಅನಾರೋಗ್ಯಕ್ಕೆ ಒಳಗಾದಾಗ, ಅವರು ಯಾವಾಗಲೂ ಮೊದಲು ಚಿಕಿತ್ಸಾಲಯ ಅಥವಾ ಆಸ್ಪತ್ರೆಗೆ ಹೋಗುವುದಿಲ್ಲ. ಅನೇಕ ಬಾರಿ ಅವರು ತಮ್ಮ ನೆರೆಹೊರೆಯ ಔಷಧಾಲಯಕ್ಕೆ ಹೋಗುತ್ತಾರೆ.

ಇದು ಭಾರತದಾದ್ಯಂತ ಕಂಡುಬರುವ ಸಂಗತಿಯಾಗಿದೆ. ಮಗುವಿಗೆ ಜ್ವರ ಬಂದಾಗ ಒಬ್ಬ ಪೋಷಕರು ಔಷಧಾಲಯಕ್ಕೆ ಹೋಗಬಹುದು. ವಯಸ್ಸಾದ ವ್ಯಕ್ತಿಯೊಬ್ಬರು ತಲೆಸುತ್ತು ಅಥವಾ ದೌರ್ಬಲ್ಯಕ್ಕೆ ಔಷಧಿಯ ಬಗ್ಗೆ ಕೇಳಲು ಅಲ್ಲಿಗೆ ಹೋಗಬಹುದು. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಯೊಬ್ಬರು ಔಷಧಿಗಳನ್ನು ಖರೀದಿಸಲು ಅಲ್ಲಿಗೆ ಹೋಗಬಹುದು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಪ್ರಶ್ನೆಗಳನ್ನು ಕೇಳಬಹುದು. ಅನೇಕ ಕುಟುಂಬಗಳಿಗೆ ಔಷಧಿಕಾರರು ಹತ್ತಿರದಲ್ಲೇ ಇರುವವರು, ಪರಿಚಿತರು, ಕೈಗೆಟುಕುವವರಾಗಿದ್ದು ಔಷಧಾಲಯಗಳು ಹೆಚ್ಚು ಸಮಯ ತೆರೆದಿರುವ ಕಾರಣ ಹೆಚ್ಚು ಕಾಲ ಸಿಗುವ ಆರೋಗ್ಯ ಸೇವಾ ವ್ಯಕ್ತಿಯಾಗಿದ್ದಾರೆ.

ಇದರರ್ಥ ಔಷಧಿಕಾರರು ವೈದ್ಯರು ಎಂದಲ್ಲ. ಅವರು ವೈದ್ಯರಲ್ಲ. ಹಾಗೆಯೇ ಔಷಧಾಲಯಗಳಿಗೆ ಪ್ರತಿಯೊಂದು ಅನಾರೋಗ್ಯಕ್ಕೂ ಚಿಕಿತ್ಸೆ ನೀಡಲು ಅವಕಾಶ ನೀಡಬೇಕು ಎಂದೂ ಇದರ ಅರ್ಥವಲ್ಲ. ಅದು ಸುರಕ್ಷಿತವಲ್ಲ. ತಪ್ಪು ಔಷಧಿಗಳ ಬಳಕೆ, ಪ್ರತಿಜೀವಕಗಳ ಅತಿಯಾದ ಬಳಕೆ ಮತ್ತು ವೈದ್ಯರನ್ನು ಸಂಪರ್ಕಿಸುವುದರಲ್ಲಿ ಆಗುವ ವಿಳಂಬ ಇವೆಲ್ಲವೂ ಹಾನಿಯನ್ನುಂಟುಮಾಡಬಹುದು.

ಅವರು ಸಮುದಾಯಕ್ಕೆ ಹತ್ತಿರವಾಗಿದ್ದಾರೆ ಮತ್ತು ಜನರು ಅವರ ಮೇಲೆ ನಂಬಿಕೆ ಇಡುತ್ತಾರೆ. ಆದರೆ ನಾವು ಕೆಲವು ಸ್ಪಷ್ಟವಾದ ಕೊರತೆಗಳನ್ನೂ ಕಂಡುಕೊಂಡಿದ್ದೇವೆ. ಔಷಧಾಲಯಗಳು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಹೆಚ್ಚು ಸುರಕ್ಷಿತವಾದ ಪಾತ್ರವನ್ನು ವಹಿಸಬೇಕಾದರೆ, ಅವುಗಳಿಗೆ ಉತ್ತಮ ತರಬೇತಿ, ಸ್ಪಷ್ಟವಾದ ನಿಯಮಗಳು, ಸರಳ ಉಪಕರಣಗಳು ಮತ್ತು ವೈದ್ಯರು ಹಾಗೂ ರೆಫರಲ್ ಸೇವೆಗಳೊಂದಿಗೆ ಬಲವಾದ ಸಂಪರ್ಕಗಳ ಅಗತ್ಯವಿದೆ.

ಆದರೆ ಈಗಾಗಲೇ ನಡೆಯುತ್ತಿರುವ ಸಂಗತಿಯ ಬಗ್ಗೆ ನಾವು ಪ್ರಾಮಾಣಿಕತೆ ಹೊಂದಿರಬೇಕು. ಜನರ ಜೀವನದಲ್ಲಿ ಔಷಧಾಲಯಗಳು ಈಗಾಗಲೇ ಪ್ರಾಥಮಿಕ ಆರೋಗ್ಯ ಸೇವೆಯ ಒಂದು ಭಾಗವಾಗಿವೆ. ಈ ಚಟುವಟಿಕೆಯನ್ನು ಅನೌಪಚಾರಿಕವಾಗಿ ಕೆಲಸ ಮಾಡಲು ಮತ್ತು ಮೇಲ್ವಿಚಾರಣೆಯಿಲ್ಲದೆ ಮುಂದುವರಿಯಲು ಬಿಡಬೇಕೇ, ಅಥವಾ ಅದನ್ನು ಹೆಚ್ಚು ಸುರಕ್ಷಿತವಾಗಿ, ಉತ್ತಮ ತರಬೇತಿಯೊಂದಿಗೆ ಮತ್ತು ಆರೋಗ್ಯ ವ್ಯವಸ್ಥೆಯೊಂದಿಗೆ ಉತ್ತಮ ಸಂಪರ್ಕ ಹೊಂದುವಂತೆ ಮಾಡಬೇಕೇ ಎಂಬುದೇ ಪ್ರಶ್ನೆ.

ಭಾರತ ಮತ್ತು ಬಾಂಗ್ಲಾದೇಶದಲ್ಲಿನ ಔಷಧಾಲಯಗಳೊಂದಿಗೆ ಸಂಪರ್ಕ ಹೊಂದಿರುವ ಆರೋಗ್ಯ ಕಾರ್ಯಕ್ರಮಗಳನ್ನು ಪರಿಶೀಲಿಸಿದ ಒಂದು ಅಧ್ಯಯನವು (https://doi.org/10.3389/fpubh.2023.1221439), ಔಷಧಾಲಯಗಳು ಸಾಮಾನ್ಯವಾಗಿ ಜನರು ಮೊದಲು ಸಂಪರ್ಕಿಸುವ ಆರೋಗ್ಯ ಸೇವಾ ಕೇಂದ್ರಗಳಾಗಿ ಉತ್ತಮ ಸ್ಥಾನದಲ್ಲಿವೆ ಎಂದು ಕಂಡುಹಿಡಿದಿದೆ. ಅವರು ಸಮುದಾಯಕ್ಕೆ ಹತ್ತಿರವಾಗಿದ್ದಾರೆ ಮತ್ತು ಜನರು ಅವರ ಮೇಲೆ ನಂಬಿಕೆ ಇಡುತ್ತಾರೆ. ಆದರೆ ನಾವು ಕೆಲವು ಸ್ಪಷ್ಟವಾದ ಕೊರತೆಗಳನ್ನೂ ಕಂಡುಕೊಂಡಿದ್ದೇವೆ. ಔಷಧಾಲಯಗಳು ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಹೆಚ್ಚು ಸುರಕ್ಷಿತವಾದ ಪಾತ್ರವನ್ನು ವಹಿಸಬೇಕಾದರೆ, ಅವುಗಳಿಗೆ ಉತ್ತಮ ತರಬೇತಿ, ಸ್ಪಷ್ಟವಾದ ನಿಯಮಗಳು, ಸರಳ ಉಪಕರಣಗಳು ಮತ್ತು ವೈದ್ಯರು ಹಾಗೂ ರೆಫರಲ್ ಸೇವೆಗಳೊಂದಿಗೆ ಬಲವಾದ ಸಂಪರ್ಕಗಳ ಅಗತ್ಯವಿದೆ.

ಇದು ವಿಚಿತ್ರವಾದ ಅಥವಾ ಹೊಸದಾದ ಆಲೋಚನೆಯಲ್ಲ. ಅನೇಕ ದೇಶಗಳು ಈಗಾಗಲೇ ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಔಷಧಿಕಾರರನ್ನು ಬಳಸಿಕೊಳ್ಳುತ್ತಿವೆ. ಫ್ರಾನ್ಸ್‌ನಲ್ಲಿ ಔಷಧಿಕಾರರಿಗೆ ಕೆಲವು ಪ್ರೋಟೋಕಾಲ್ ಆಧಾರಿತ ಸೇವೆಗಳನ್ನು( ಪೂರ್ವನಿರ್ಧರಿತ ನಿಯಮಗಳು ಅಥವಾ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸುವ ಸೇವೆಗಳು) ಒದಗಿಸುವುದನ್ನು ಒಳಗೊಂಡಂತೆ ಒಂದು ವ್ಯಾಪಕವಾದ ಪಾತ್ರವನ್ನು ನೀಡಲಾಗಿದೆ. ಬ್ರೆಜಿಲ್, ನೈಜೀರಿಯಾ, ದಕ್ಷಿಣ ಆಫ್ರಿಕಾ, ಇಂಡೋನೇಷ್ಯಾ, ಬ್ರಿಟನ್, ಅರ್ಜೆಂಟೀನಾ ಮತ್ತು ಇರಾನ್ ದೇಶಗಳಲ್ಲಿಯೂ ಔಷಧಾಲಯಗಳು ರಕ್ತದೊತ್ತಡದ ಪರೀಕ್ಷೆ, ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಔಷಧಿಗಳ ಪರಿಶೀಲನೆ ಮತ್ತು ರೋಗದ ಮೇಲ್ವಿಚಾರಣೆಯಂತಹ ಆಯ್ದ ಸೇವೆಗಳನ್ನು ಒದಗಿಸಲು ಅವಕಾಶವಿದೆ. ಈ ದೇಶಗಳು ಔಷಧಿಕಾರರನ್ನು ವೈದ್ಯರಿಗೆ ಪರ್ಯಾಯವಾಗಿಸಿಲ್ಲ. ಔಷಧಿಕಾರರು ಸುರಕ್ಷಿತವಾಗಿ ಏನು ಮಾಡಬಹುದು ಎಂಬುದನ್ನು ವ್ಯಾಖ್ಯಾನಿಸಲು ಅವು ಪ್ರಯತ್ನಿಸಿವೆ.

ಭಾರತಕ್ಕೂ ಇದೇ ರೀತಿಯ ಪ್ರಾಯೋಗಿಕ ವಿಧಾನದ ಅಗತ್ಯವಿದೆ.

ಈ ವೇದಿಕೆಯು ಈಗಾಗಲೇ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ, ಮುಖ್ಯವಾಗಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಜಾರ್ಖಂಡ್‌ನಂತಹ ಕಡಿಮೆ ಆದಾಯವನ್ನು ಹೊಂದಿರುವ ರಾಜ್ಯಗಳಲ್ಲಿ, 1,500ಕ್ಕೂ ಹೆಚ್ಚು ಔಷಧಾಲಯಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.

ಒಂದು ಔಷಧಾಲಯವು ಕೆಲವು ಸರಳವಾದ ಆದರೆ ಮುಖ್ಯವಾದ ಕೆಲಸಗಳಲ್ಲಿ ಸಹಾಯ ಮಾಡಬಹುದು. ಅದು ರಕ್ತದೊತ್ತಡವನ್ನು ಪರೀಕ್ಷಿಸಬಹುದು. ರೋಗಿಗಳು ತಮ್ಮ ಔಷಧಿಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದನ್ನು ಅರ್ಥಮಾಡಿಸಲು ಅದು ಸಹಾಯ ಮಾಡಬಹುದು. ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರು ತಮ್ಮ ಚಿಕಿತ್ಸೆಯನ್ನು ಮುಂದುವರಿಸುವಂತೆ ಅದು ನೆನಪಿಸಬಹುದು. ಅಪಾಯದ ಸೂಚನೆಗಳನ್ನು ಗುರುತಿಸಿ ರೋಗಿಗಳನ್ನು ವೈದ್ಯರ ಬಳಿಗೆ ಕಳುಹಿಸಲು ಅದು ಸಹಾಯ ಮಾಡಬಹುದು. ಹತ್ತಿರದಲ್ಲಿ ವೈದ್ಯರು ಲಭ್ಯವಿಲ್ಲದಿದ್ದಾಗ ಟೆಲಿಕನ್ಸಲ್ಟೇಶನ್‌ಗಳಿಗೆ (ಇಂಟರ್ನೆಟ್, ವೀಡಿಯೊ ಕರೆ ಅಥವಾ ಫೋನ್ ಮೂಲಕ ವೈದ್ಯರೊಂದಿಗೆ ದೂರದಲ್ಲಿದ್ದುಕೊಂಡೇ ಮಾತನಾಡಿ ಸಲಹೆ ಪಡೆಯುವುದು) ಅದು ಸಹಾಯ ಮಾಡಬಹುದು.

ಡಿಜಿಟಲ್ ಆರೋಗ್ಯ ಸೇವೆಯು ಸಹಾಯ ಮಾಡಬಹುದಾದ ಕೆಲವು ಸಂದರ್ಭಗಳು ಹೀಗಿವೆ (https://ssir.org/articles/entry/speciality-health-care-pharmacies-india). ಉದಾಹರಣೆಗೆ, ಸ್ಥಳೀಯ ಔಷಧಾಲಯಗಳು ಮತ್ತು ಇತರ ಆರೋಗ್ಯ ಸೇವಾ ಪಾಲುದಾರರನ್ನು ವೈದ್ಯರು ಮತ್ತು ತಜ್ಞರೊಂದಿಗೆ ಸಂಪರ್ಕಿಸುವ ಒಂದು ವೇದಿಕೆ ಇದು. ರೋಗಿಗಳು ತಾವಾಗಿಯೇ ತಜ್ಞ ವೈದ್ಯರನ್ನು ಹುಡುಕಬೇಕಾಗಿಲ್ಲ. ಅವರು ಪರಿಚಿತ ಸ್ಥಳೀಯ ಆರೋಗ್ಯ ಸೇವಾ ಪೂರೈಕೆದಾರರ ಬಳಿಗೆ ಹೋಗಬಹುದು; ಆ ಪೂರೈಕೆದಾರರು ವೇದಿಕೆಯ ಮೂಲಕ ವೈದ್ಯರೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಸಹಾಯ ಮಾಡಬಹುದು. ಈ ವೇದಿಕೆಯು ಈಗಾಗಲೇ 200ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ, ಮುಖ್ಯವಾಗಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಜಾರ್ಖಂಡ್‌ನಂತಹ ಕಡಿಮೆ ಆದಾಯವನ್ನು ಹೊಂದಿರುವ ರಾಜ್ಯಗಳಲ್ಲಿ, 1,500ಕ್ಕೂ ಹೆಚ್ಚು ಔಷಧಾಲಯಗಳೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.

ಭಾರತವು ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳನ್ನು ಬಲಪಡಿಸುವುದನ್ನು ಮುಂದುವರಿಸಬೇಕು. ಆದರೆ ಜನರು ಈಗಾಗಲೇ ಬಳಸುತ್ತಿರುವ ಆರೋಗ್ಯ ಸೇವೆಯ ಮಾರ್ಗಗಳೊಂದಿಗೂ ಅದು ಕೆಲಸ ಮಾಡಬೇಕು. ನೆರೆಹೊರೆಯ ಔಷಧಾಲಯವು ಅಂತಹ ಒಂದು ಮಾರ್ಗವಾಗಿದೆ.

ಆದರೆ ಔಷಧಾಲಯಗಳು ಏಕಾಂಗಿಯಾಗಿ ಕಾರ್ಯನಿರ್ವಹಿಸಬಾರದು. ಅವು ಒಂದು ವಿಶಾಲವಾದ “ಆರೈಕೆಯ ವಲಯ” ಅಥವಾ “ಸರ್ಕಲ್ ಆಫ್ ಕೇರ್”ನ (https://doi.org/10.1007/978-3-031-96286-8_112) ಭಾಗವಾಗಿರಬೇಕು. ಈ ಪರಿಕಲ್ಪನೆಯಲ್ಲಿ, ವಿವಿಧ ವ್ಯಕ್ತಿಗಳು ರೋಗಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾರೆ. ಸಮುದಾಯ ಆರೋಗ್ಯ ಕಾರ್ಯಕರ್ತರು ಆರೋಗ್ಯ ಸೇವೆಯ ಕುರಿತು ಮಾರ್ಗದರ್ಶನ ನೀಡಲು ಮತ್ತು ಸಮನ್ವಯಗೊಳಿಸಲು ಸಹಾಯ ಮಾಡುತ್ತಾರೆ. ಔಷಧಿಕಾರರು ಔಷಧಿಗಳ ಲಭ್ಯತೆ, ಮೂಲಭೂತ ಆರೋಗ್ಯ ತಪಾಸಣೆ ಮತ್ತು ಮುಂದುವರಿದ ಆರೋಗ್ಯ ಸೇವೆಗೆ ಸಹಾಯ ಮಾಡುತ್ತಾರೆ. ವೈದ್ಯರು ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಒದಗಿಸುತ್ತಾರೆ. ಕುಟುಂಬದ ಸದಸ್ಯರು ಮನೆಯಲ್ಲಿ ದೈನಂದಿನ ಆರೈಕೆಗೆ ಸಹಾಯ ಮಾಡುತ್ತಾರೆ. ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ಪಾತ್ರವಿದೆ, ಆದರೆ ಎಲ್ಲವನ್ನೂ ಒಬ್ಬರೇ ಮಾಡುವುದಿಲ್ಲ.

ದೀರ್ಘಕಾಲೀನ ಕಾಯಿಲೆಗಳ ಸಂದರ್ಭದಲ್ಲಿ ಇದು ವಿಶೇಷವಾಗಿ ಮಹತ್ವದ್ದಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ, ಖಿನ್ನತೆ ಹೊಂದಿರುವ ವ್ಯಕ್ತಿಗೆ ಅಥವಾ ನಿಯಮಿತ ಆರೈಕೆಯ ಅಗತ್ಯವಿರುವ ವಯಸ್ಸಾದ ವ್ಯಕ್ತಿಗೆ ಒಬ್ಬ ವೈದ್ಯರನ್ನು ಒಮ್ಮೆ ಭೇಟಿ ಮಾಡುವುದರಿಂದ ಮಾತ್ರ ಸಮರ್ಪಕ ಸಹಾಯ ದೊರೆಯುವುದಿಲ್ಲ. ಅವರಿಗೆ ಮನೆಯ ಸಮೀಪದಲ್ಲೇ ನಿರಂತರವಾಗಿ ಮತ್ತು ಪುನಃಪುನಃ ದೊರೆಯುವ ಬೆಂಬಲದ ಅಗತ್ಯವಿದೆ.

ಭಾರತವು ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳನ್ನು ಬಲಪಡಿಸುವುದನ್ನು ಮುಂದುವರಿಸಬೇಕು. ಆದರೆ ಜನರು ಈಗಾಗಲೇ ಬಳಸುತ್ತಿರುವ ಆರೋಗ್ಯ ಸೇವೆಯ ಮಾರ್ಗಗಳೊಂದಿಗೂ ಅದು ಕೆಲಸ ಮಾಡಬೇಕು. ನೆರೆಹೊರೆಯ ಔಷಧಾಲಯವು ಅಂತಹ ಒಂದು ಮಾರ್ಗವಾಗಿದೆ.

ಪ್ರತಿಯೊಂದು ಔಷಧಾಲಯವನ್ನೂ ಒಂದು ಚಿಕಿತ್ಸಾಲಯವನ್ನಾಗಿ ಪರಿವರ್ತಿಸುವುದು ಉದ್ದೇಶವಲ್ಲ. ಔಷಧಾಲಯಗಳನ್ನು ಪ್ರಾಥಮಿಕ ಆರೋಗ್ಯ ಸೇವಾ ತಂಡದ ಹೆಚ್ಚು ಸುರಕ್ಷಿತ ಸದಸ್ಯರನ್ನಾಗಿ ಮಾಡುವುದು ಉದ್ದೇಶ. ತರಬೇತಿ, ನಿರ್ದಿಷ್ಟ ಪ್ರೋಟೋಕಾಲ್‌ಗಳು (ನಿಯಮಾವಳಿಗಳು), ಡಿಜಿಟಲ್ ಸಂಪರ್ಕಗಳು ಮತ್ತು ಮೇಲ್ವಿಚಾರಣೆಯೊಂದಿಗೆ, ಅವು ಭಾರತದ ಪ್ರಾಥಮಿಕ ಆರೋಗ್ಯ ಸೇವೆಯ ವಲಯದ ಒಂದು ಪ್ರಮುಖ ಭಾಗವಾಗಬಹುದು.