ಪ್ರತಿ ವರ್ಷ 15 ಲಕ್ಷಕ್ಕೂ ಹೆಚ್ಚು ಭಾರತೀಯರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ ಮತ್ತು 9 ಲಕ್ಷಕ್ಕೂ ಹೆಚ್ಚು ಭಾರತೀಯರು ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಾರೆ. ಈ ಸಂಖ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಆದರೆ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ? ಕ್ಯಾನ್ಸರ್ ಅನ್ನು ತಡೆಗಟ್ಟಬಹುದೇ? ಅದರ ಕುರಿತು ಎಚ್ಚರಿಕೆ ನೀಡುವಂತಹ ಲಕ್ಷಣಗಳು ಯಾವುವು? ಮತ್ತು ಇಂದು ಕ್ಯಾನ್ಸರ್ ಚಿಕಿತ್ಸೆಯ ಸ್ವರೂಪ ಹೇಗಿದೆ?
‘ದಿ ಹೆಲ್ತ್ ವರ್ಕರ್’ ಪತ್ರಿಕೆಯ ಈ ಸಂಚಿಕೆಯಲ್ಲಿ, ರಾಮ್ ಜಿ ವಲ್ಲತ್ ಅವರು ಡಾ. ಬಿ.ಎಸ್. ಶ್ರೀನಾಥ್ ಅವರೊಂದಿಗೆ ಕ್ಯಾನ್ಸರ್ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಯ ಕುರಿತು ಸಂವಾದ ನಡೆಸುತ್ತಾರೆ. ಕ್ಯಾನ್ಸರ್‌ನ ಲಕ್ಷಣಗಳು ಮತ್ತು ಅಪಾಯದ ಅಂಶಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ಕ್ಯಾನ್ಸರ್ ಚಿಕಿತ್ಸೆಯಲ್ಲಿನ ಪ್ರಗತಿಯವರೆಗೆ, ಈ ಸಂವಾದವು ಭಾರತದಲ್ಲಿ ಕ್ಯಾನ್ಸರ್ ಮತ್ತು ಆರೋಗ್ಯಸೇವೆಗೆ ಸಂಬಂಧಿಸಿದ ಕೆಲವು ಪ್ರಮುಖ ಪ್ರಶ್ನೆಗಳನ್ನು ಅನ್ವೇಷಿಸುತ್ತದೆ.
ಈ ಸಂಚಿಕೆಯಲ್ಲಿ ನಾವು ಚರ್ಚಿಸುವ ವಿಷಯಗಳು:
- ಕ್ಯಾನ್ಸರ್ ಅನ್ನು ತಡೆಗಟ್ಟುವುದು ಹೇಗೆ
- ಕ್ಯಾನ್ಸರ್ ಹೇಗೆ ಉಂಟಾಗುತ್ತದೆ
- ಕ್ಯಾನ್ಸರ್‌ನ ಲಕ್ಷಣಗಳು ಮತ್ತು ಆರಂಭಿಕ ಪತ್ತೆಹಚ್ಚುವಿಕೆ
- ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಅಪಾಯದ ಅಂಶಗಳು
- ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ
- ಕ್ಯಾನ್ಸರ್ ಲಸಿಕೆ ಮತ್ತು ಇತ್ತೀಚಿನ ಬೆಳವಣಿಗೆಗಳು
- ಕ್ಯಾನ್ಸರ್ ಕುರಿತು ಅರಿವು ಮತ್ತು ಆರೋಗ್ಯ ಶಿಕ್ಷಣ
- ಕ್ಯಾನ್ಸರ್ ಚಿಕಿತ್ಸಾಶಾಸ್ತ್ರ ಮತ್ತು ಕ್ಯಾನ್ಸರ್ ಸಂಶೋಧನೆಯಲ್ಲಿನ ಪ್ರಗತಿಗಳು
- ಕ್ಯಾನ್ಸರ್‌ನಿಂದ ಬದುಕುಳಿಯುವವರ ಪ್ರಮಾಣ ಮತ್ತು ಚಿಕಿತ್ಸೆಯ ಫಲಿತಾಂಶಗಳು
Subscribe to stay connected
We will send you a monthly newsletter listing all the articles that were published in the month.
ಕ್ಯಾನ್ಸರ್ ಅನ್ನು ತಡೆಗಟ್ಟುವುದು ಹೇಗೆ, ಕ್ಯಾನ್ಸರ್ ಹೇಗೆ ಉಂಟಾಗುತ್ತದೆ, ಕ್ಯಾನ್ಸರ್‌ನ ಲಕ್ಷಣಗಳು, ಕ್ಯಾನ್ಸರ್ ಚಿಕಿತ್ಸೆ, ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ ಅಥವಾ ಕ್ಯಾನ್ಸರ್ ತಡೆಗಟ್ಟುವಿಕೆಯ ಕುರಿತ ಪಾಡ್‌ಕಾಸ್ಟ್‌ಗಾಗಿ (ಇಂಟರ್ನೆಟ್ ಮೂಲಕ ಡಿಜಿಟಲ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಂಡು ಅಥವಾ ಆನ್‌ಲೈನ್‌ನಲ್ಲಿ ಕೇಳಬಹುದಾದ ರೇಡಿಯೋ ಶೈಲಿಯ ಧ್ವನಿ (ಆಡಿಯೋ) ಕಾರ್ಯಕ್ರಮ) ನೀವು ಹುಡುಕಾಡುತ್ತಿದ್ದರೆ, ಈ ಸಂವಾದವನ್ನು ನಿಮ್ಮಂಥವರಿಗಾಗಿ ಮಾಡಲಾಗಿದೆ.
