ಅಸುಂತಾ ದೀದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಲು ಸಹಕರಿಸುವ ಸಿಸ್ಟರ್‌

ನಿರಂತರ ಸಮಸ್ಯೆಗಳನ್ನೆದುರಿಸಿಯೂ ಸಹ ಅಸುಂಟಾ ದೀದಿಯವರು, ಅವರು ಹೊಂದಿದ್ದ ಅವಿಚಲ ಶ್ರದ್ಧೆಯಿಂದಾಗಿ ಒಂದು ಗ್ರಾಮವು ಸಾರ್ವಜನಿಕ ಆರೋಗ್ಯ ಸೇವೆಯ ಕುರಿತು ಅದು ಹೊಂದಿದ್ದ ವಿಶ್ವಾಸವನ್ನು ಪುನರ್ ಸ್ಥಾಪಿಸಿಕೊಂಡಿದ್ದು.

ಅಸುಂತಾ ದೀದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ನಂಬಿಕೆ ಉಳಿಸಲು ಸಹಕರಿಸುವ ಸಿಸ್ಟರ್‌

ತಲುಪಲು ಕಷ್ಟಸಾಧ್ಯವಾದ, ಅನುಕೂಲಗಳಿಲ್ಲದ ಭಾರತದ ಕೆಲವು ಸ್ಥಳಗಳಲ್ಲಿ, ಆರೋಗ್ಯ ಕಾರ್ಯಕರ್ತರ ನಿಷ್ಠೆ ಮತ್ತು ಅವಿರತ ಪರಿಶ್ರಮವೇ ದೇಶದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮುನ್ನಡೆಸುತ್ತದೆ. ಈ ಕಥೆಯು ಅವರ ಅನುಕರಣೀಯ ಸೇವೆಗೆ ಸಾಕ್ಷಿಯಾಗಿದೆ.

ಆಯುಷ್ಮಾನ್ ಆರೋಗ್ಯ ಮಂದಿರದ ಮುಂದೆ ನಿಂತಿರುವ CHO ನೆಹಾಲ್ ಖಲ್ಕೋ (ಎಡ) ಮತ್ತು RHO ಅಸುಂತಾ ಟೊಪ್ಪೊ (ಬಲ). ಇವರ ಕಾರ್ಯನಿಷ್ಠೆ ಮತ್ತು ದುಡಿಮೆಯಿಂದಾಗಿ ಈ ಉಪ-ಆರೋಗ್ಯ ಕೇಂದ್ರವು ಸ್ಥಳೀಯರಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಇಂದಿಗೂ ನಮ್ಮ ದೇಶದ ಬಹಳಷ್ಟು ಭಾಗಗಳು ಪ್ರಗತಿ ಮತ್ತು ಅಭಿವೃದ್ಧಿಗಾಗಿ ಕಾಯುತ್ತಿವೆ. ಇವುಗಳಲ್ಲಿ ಕೆಲವು ಪ್ರದೇಶಗಳು ತಲುಪಲು ಕಷ್ಟಸಾಧ್ಯವಾದ ಪ್ರದೇಶಗಳಾಗಿದ್ದು, ಬಡತನದಿಂದ ಬಳಲುತ್ತಿವೆ. ಇದರಿಂದಾಗಿ ಅಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳಂತಹ ಮೂಲ ಸೌಲಭ್ಯಗಳ ಕೊರತೆಯೂ ಕಂಡುಬರುತ್ತದೆ. ಇಂತಹ ಪ್ರದೇಶಗಳ ಜನರು ಖಾಸಗಿ ಆರೋಗ್ಯ ಸೌಲಭ್ಯಗಳಲ್ಲಿ ಚಿಕಿತ್ಸೆ ಪಡೆಯಲು ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಈ ಸಂದರ್ಭಗಳಲ್ಲಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ಅವರ ಏಕೈಕ ಆಯ್ಕೆಯೂ ಮತ್ತು ಅವರ ಪಾಲಿನ ಆಶಾದೀಪವೂ ಆಗಿರುತ್ತದೆ. ಜೊತೆಗೆ, ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುವ ಮತ್ತು ಇದರಿಂದ ಸಿಗುವ ಸಂತೃಪ್ತಿ ಮತ್ತು ಸಂತೋಷವೇ ತಮಗೆ ಪ್ರೇರಣೆ ಎಂದು ತಿಳಿದಿರುವ ಆರೋಗ್ಯ ಕಾರ್ಯಕರ್ತರೇ ಇಂತಹ ಜನರಿಗೆ ಭರವಸೆ ಎನ್ನಬಹುದು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ತಮ್ಮ ಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸುವ ಇಂತಹ ಆರೋಗ್ಯ ಕಾರ್ಯಕರ್ತರನ್ನು ಜನರು ಗೌರವದಿಂದ ನೋಡುತ್ತಾರೆ. ತಮ್ಮ ಎಲ್ಲಾ ಸವಾಲುಗಳನ್ನು ಎದುರಿಸಿ ಅತ್ಯುತ್ತಮ ಕೆಲಸ ಮಾಡಿರುವ ಮತ್ತು ಅನೇಕ ಜೀವಗಳನ್ನು ಉಳಿಸಿರುವ ಕೆಲವು ಮಹಿಳಾ ಆರೋಗ್ಯ ಕಾರ್ಯಕರ್ತರೊಂದಿಗೆ ನಡೆಸಿರುವ ಸಂವಾದವನ್ನು ನಾವು ಇಲ್ಲಿ ದಾಖಲಿಸಿದ್ದೇವೆ. ಅವರ ಕೆಲಸದಿಂದ ಬರುವ ಸಂತೋಷ ಮತ್ತು ತೃಪ್ತಿಯೇ ಈ ಮಹಿಳೆಯರನ್ನು ಮುಂದೆ ಸಾಗುವಂತೆ ಪ್ರೇರೇಪಿಸುತ್ತದೆ.

AsuntDidi-body-image2
ಅಸುಂತಾ ಟೊಪ್ಪೊ ಅವರು ಉಳಿಸಿದ ಮಗು, ಸಂಜೀವನಿಯನ್ನು ಭೇಟಿ ಮಾಡಲು ಹೋದಾಗ, ಅವನ ತಾಯಿ ವಿಮ್ಲಾ ರಾಥಿಯಾ ಹತ್ತಿರದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದುದನ್ನು ನಾವು ನೋಡಿದೆವು.

ಅಸುಂತಾ ಟೊಪ್ಪೊ ಅವರು ಉಳಿಸಿದ ಮಗು, ಸಂಜೀವನಿಯನ್ನು ಭೇಟಿ ಮಾಡಲು ಹೋದಾಗ, ಅವನ ತಾಯಿ ವಿಮ್ಲಾ ರಾಥಿಯಾ ಹತ್ತಿರದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದುದನ್ನು ನಾವು ನೋಡಿದೆವು.

ಅಂತಹ ಒಬ್ಬ ಜೀವರಕ್ಷಕಿ ಅಸುಂತಾ ಟೊಪ್ಪೊ. ಅವರು ಆಯುಷ್ಮಾನ್ ಆರೋಗ್ಯ ಮಂದಿರದ ಗ್ರಾಮೀಣ ಆರೋಗ್ಯ ಸಂಯೋಜಕಿಯಾಗಿ (RHO – Rural Health Coordinator) ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸರ್ಕಾರಿ ಉಪ-ಆರೋಗ್ಯ ಕೇಂದ್ರವು ಛತ್ತೀಸ್‌ಗಢ ರಾಜ್ಯದ ರಾಯ್ಗಢ ಜಿಲ್ಲೆಯ ಧರ್ಮಜೈಗಢ ಬ್ಲಾಕಿನ ಮಿರಿಗುಡಾ ಗ್ರಾಮದಲ್ಲಿದೆ.

ನಾವು ಉಪ-ಆರೋಗ್ಯ ಕೇಂದ್ರವನ್ನು ತಲುಪಿದಾಗ, ಮಿತಾನಿನ್ ದೀದಿಯರು (ಆಶಾ ಕಾರ್ಯಕರ್ತೆಯರು) ಸಭೆ ನಡೆಸುತ್ತಿದ್ದರು. ಸಮುದಾಯ ಆರೋಗ್ಯ ಅಧಿಕಾರಿ (CHO – Community Health Officer) ನೇಹಾ ಖಲ್ಖೋ ಮತ್ತು ಅಸುಂತಾ ಟೊಪ್ಪೊ ಅವರು ಸಭೆಯಲ್ಲಿ ಹಾಜರಿದ್ದರು.

ಸಭೆ ಮುಗಿದ ನಂತರ, CHO ಖಲ್ಖೋ ಮತ್ತು RHO ಟೊಪ್ಪೊ ಅವರು ಈ ಪ್ರದೇಶದ ಜನರ ಬಗ್ಗೆ ಮತ್ತು ಚಿಕಿತ್ಸೆಗಾಗಿ ಬರುವ ರೋಗಿಗಳ ಬಗ್ಗೆ ವಿವರವಾಗಿ ಹೇಳಿದರು. ಅವರ ಮಾತಿನಲ್ಲಿಯೇ ಹೇಳುವುದಾದರೆ, “ಇದು ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಆದಿವಾಸಿಗಳು ವಾಸಿಸುತ್ತಾರೆ. ಸಾರಿಗೆಯು ಇಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ. ಮಿರಿಗುಡಾ, ನಾಕ್ನಾ, ಭಂವಾರ್ಖೋಲ್ ಮತ್ತು ಸಿಮಿಪಾಲಿ ಖುರ್ಜ್ ಗ್ರಾಮಗಳ ಜನರು ಈ ಉಪ-ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ. ಈ ನಾಲ್ಕು ಗ್ರಾಮಗಳ ಒಟ್ಟು ಜನಸಂಖ್ಯೆ ಸುಮಾರು 4,000. ಇವರಲ್ಲಿ ಹೆಚ್ಚಿನವರು ರಾಥಿಯಾ (ಕನ್ವಾರ್) ಬುಡಕಟ್ಟಿಗೆ ಸೇರಿದವರು. ಸುಮಾರು 20 ಮನೆಗಳಲ್ಲಿ ಒರಾವನ್ ಆದಿವಾಸಿಗಳು ವಾಸವಿದ್ದಾರೆ. ಸ್ವಲ್ಪ ಹೆಚ್ಚೇ ಹಿಂದುಳಿದ ಬೈಗಾ ಆದಿವಾಸಿಗಳ 25ಕ್ಕೂ ಹೆಚ್ಚು ಮನೆಗಳಿವೆ, ಮತ್ತು ಇನ್ನೊಂದು ಹಿಂದುಳಿದ ಬುಡಕಟ್ಟಾದ ಬಿರ್ಹೋರ್‌ನ ಮೂರು ಕುಟುಂಬಗಳೂ ಇವೆ. ಸತ್ನಾಮಿ ಮತ್ತು ಬಸೋಂಡ್ ಸಮುದಾಯದ ಕೆಲವು ಜನರೂ ಇದ್ದಾರೆ. ಕೃಷಿಯ ಜೊತೆಗೆ, ಈ ಜನರು ಜೀವನಾಧಾರಕ್ಕಾಗಿ ಕಾಡನ್ನು ಅವಲಂಬಿಸಿದ್ದಾರೆ.”

ನಂತರ, ನಾವು ಖಲ್ಖೋ ಮತ್ತು ಟೊಪ್ಪೊ ಅವರ ಬಳಿ ಅಲ್ಲಿ ಚಿಕಿತ್ಸೆಗಾಗಿ ಯಾವ ರೀತಿಯ ರೋಗಿಗಳು ಬರುತ್ತಾರೆ ಎಂಬ ಬಗ್ಗೆ ಕೇಳಿದೆವು. ಮಲೇರಿಯಾ, ಡೆಂಗ್ಯೂ ಮತ್ತು ಅತಿಸಾರ ಮುಂತಾದ ಸಾಂಕ್ರಾಮಿಕ ರೋಗಗಳು, ಡಯಾಬಿಟೀಸ್ ಮತ್ತು ಹೈಪೆರ್‌ಟೆನ್ಷನ್‌ ಮುಂತಾದ ಸಾಂಕ್ರಾಮಿಕೇತರ ರೋಗಗಳು, ನೆಗೆಡಿ, ಕೆಮ್ಮು, ಜ್ವರಗಳಂತಹ ಸಾಮಾನ್ಯ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಜನರು ಬರುತ್ತಾರೆ ಎಂದು CHO ಹೇಳಿದರು. “ನಾವು ರಕ್ತ ಪರೀಕ್ಷೆಗಳನ್ನು ನಡೆಸುವುದಿಲ್ಲ, ಆದರೆ ರ್‍ಯಾಪಿಡ್ ಡಯಾಗ್ನೋಸ್ಟಿಕ್ (RD) ಕಿಟ್ ಸ್ಲೈಡ್‌ಗಳನ್ನು ತಯಾರಿಸುತ್ತೇವೆ. ಹೀಮೋಗ್ಲೋಬಿನ್, ಮಲೇರಿಯಾ, ಎಚ್ಐವಿ, ಸಿಕಲ್ ಸೆಲ್ ಮುಂತಾದ ರೋಗಗಳಿಗೆ ಪರೀಕ್ಷೆಗಳನ್ನು ನಡೆಸುತ್ತೇವೆ” ಎಂದೂ ಹೇಳಿದರು.

“But more than anything, people of the region come to this sub-health centre for childbirth.”

ಇದು ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಆದಿವಾಸಿಗಳು ವಾಸಿಸುತ್ತಾರೆ. ಸಾರಿಗೆಯು ಇಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ. ಮಿರಿಗುಡಾ, ನಾಕ್ನಾ, ಭಂವಾರ್ಖೋಲ್ ಮತ್ತು ಸಿಮಿಪಾಲಿ ಖುರ್ಜ್ ಗ್ರಾಮಗಳ ಜನರು ಈ ಉಪ-ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ, ಈ ಪ್ರದೇಶದ ಜನರು ಈ ಉಪ-ಆರೋಗ್ಯ ಕೇಂದ್ರಕ್ಕೆ ಪ್ರಸೂತಿ ಸೇವೆಗಾಗಿ ಬರುತ್ತಾರೆ. CHO ಅವರ ಪ್ರಕಾರ, ಒಂದು ತಿಂಗಳಿಗೆ ಸರಾಸರಿ 10 ಕ್ಕೂ ಹೆಚ್ಚು ಹೆರಿಗೆಗಳನ್ನು ಈ ಕೇಂದ್ರವು ನಿರ್ವಹಿಸುತ್ತದೆ. ಜನವರಿ 2024ರಿಂದ ನಾವು ಅಲ್ಲಿಗೆ ಭೇಟಿ ನೀಡಿದ ಸಮಯದ ಹೊತ್ತಿಗೆ ಈ ಕೇಂದ್ರದಲ್ಲಿ ಒಟ್ಟು 65 ಮಕ್ಕಳು ಜನಿಸಿದ್ದರು. “ನಾವು ಗರ್ಭಿಣಿಯರಿಗೆ ನಿಯತವಾಗಿ ತಪಾಸಣೆಗಳನ್ನು ಮಾಡುತ್ತೇವೆ. ಎಲ್ಲ ಸಾಮಾನ್ಯ ಹೆರಿಗೆಗಳನ್ನೂ ಇಲ್ಲಿಯೇ ನಿರ್ವಹಿಸಲಾಗುತ್ತದೆ. ಸಂಕೀರ್ಣವಾದ ಅಥವಾ ಹೆಚ್ಚು ಅಪಾಯಕಾರಿಯಾದ ಪ್ರಕರಣಗಳಿದ್ದರೆ, ನಾವು ಅವರನ್ನು ಧರ್ಮಜೈಗಢದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ರಾಯ್ಗಢದ ಜಿಲ್ಲಾ ಆಸ್ಪತ್ರೆಗೆ ಹೋಗಲು ಹೇಳುತ್ತೇವೆ”, ಎಂದು ಖಲ್ಖೋ ಹೇಳಿದರು.

ನಾವು ರಕ್ತ ಪರೀಕ್ಷೆಗಳನ್ನು ನಡೆಸುವುದಿಲ್ಲ, ಆದರೆ ರ್‍ಯಾಪಿಡ್ ಡಯಾಗ್ನೋಸ್ಟಿಕ್ (RD) ಕಿಟ್ ಸ್ಲೈಡ್‌ಗಳನ್ನು ತಯಾರಿಸುತ್ತೇವೆ. ಹೀಮೋಗ್ಲೋಬಿನ್, ಮಲೇರಿಯಾ, ಎಚ್ಐವಿ, ಸಿಕಲ್ ಸೆಲ್ ಮುಂತಾದ ರೋಗಗಳಿಗೆ ಪರೀಕ್ಷೆಗಳನ್ನು ನಡೆಸುತ್ತೇವೆ” ಎಂದೂ ಹೇಳಿದರು.

ಈ ಉಪ-ಆರೋಗ್ಯ ಕೇಂದ್ರದಲ್ಲಿ ಹಿಂದೆ ಹೆಚ್ಚು ಸಂಖ್ಯೆಯಲ್ಲಿ ಹೆರಿಗೆಗಳು ನಡೆಯುತ್ತಿದ್ದವು, ಆದರೆ ಹತ್ತಿರದಲ್ಲಿಯೇ ಇದೇ ರೀತಿಯ ಇನ್ನೊಂದು ಕೇಂದ್ರ ತೆರೆದಿರುವುದರಿಂದ ಈಗ ಒತ್ತಡ ಸ್ವಲ್ಪ ಕಡಿಮೆಯಾಗಿದೆ. ಖಲ್ಖೋ ಇಲ್ಲಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತ್ತಿದ್ದರೆ, ಟೊಪ್ಪೊ ಅವರು ಕಳೆದ 19 ವರ್ಷಗಳಿಂದ ಈ ಆರೋಗ್ಯ ಕೇಂದ್ರಕ್ಕಾಗಿ ತಮ್ಮ ಜೀವನವನ್ನು ಸವೆಸಿದ್ದಾರೆ. ಅವರು ಸುಮಾರು 3,000 ಮಕ್ಕಳ ಹೆರಿಗೆಯ ಉಸ್ತುವಾರಿ ವಹಿಸಿದ್ದಾರೆ.

“ಅಸುಂತಾ ದೀದಿಯವರ ಕೈಗಳಲ್ಲಿ ತಾವು ಸುರಕ್ಷಿತರೆಂದು ತಿಳಿದು ಜನರು ಇಲ್ಲಿಗೆ ಬರುತ್ತಾರೆ”, ಎಂದು ಖಲ್ಖೋ ಹೇಳುತ್ತಾರೆ.

CHO ಅವರ ಪ್ರಕಾರ, ಒಂದು ತಿಂಗಳಿಗೆ ಸರಾಸರಿ 10 ಕ್ಕೂ ಹೆಚ್ಚು ಹೆರಿಗೆಗಳನ್ನು ಈ ಕೇಂದ್ರವು ನಿರ್ವಹಿಸುತ್ತದೆ. ಜನವರಿ 2024ರಿಂದ ನಾವು ಅಲ್ಲಿಗೆ ಭೇಟಿ ನೀಡಿದ ಸಮಯದ ಹೊತ್ತಿಗೆ ಈ ಕೇಂದ್ರದಲ್ಲಿ ಒಟ್ಟು 65 ಮಕ್ಕಳು ಜನಿಸಿದ್ದರು. “ನಾವು ಗರ್ಭಿಣಿಯರಿಗೆ ನಿಯತವಾಗಿ ತಪಾಸಣೆಗಳನ್ನು ಮಾಡುತ್ತೇವೆ. ಎಲ್ಲ ಸಾಮಾನ್ಯ ಹೆರಿಗೆಗಳನ್ನೂ ಇಲ್ಲಿಯೇ ನಿರ್ವಹಿಸಲಾಗುತ್ತದೆ. ಸಂಕೀರ್ಣವಾದ ಅಥವಾ ಹೆಚ್ಚು ಅಪಾಯಕಾರಿಯಾದ ಪ್ರಕರಣಗಳಿದ್ದರೆ, ನಾವು ಅವರನ್ನು ಧರ್ಮಜೈಗಢದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ರಾಯ್ಗಢದ ಜಿಲ್ಲಾ ಆಸ್ಪತ್ರೆಗೆ ಹೋಗಲು ಹೇಳುತ್ತೇವೆ”, ಎಂದು ಖಲ್ಖೋ ಹೇಳಿದರು.

ಈ 19 ವರ್ಷಗಳಲ್ಲಿ, ಜನರ ಗೌರವ ಮತ್ತು ನಂಬಿಕೆಗಳನ್ನು ಗಳಿಸಿರುವ ಅಸುಂತಾ ದೀದಿ ಈ ಪ್ರದೇಶದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದಾರೆ. “ನಾನು 2005ರಲ್ಲಿ ನನ್ನ ವೃತ್ತಿಯನ್ನು ಆರಂಭಿಸಿದೆ. ಈಗ ನಾನು ಈ ಗ್ರಾಮದ ನಿವಾಸಿಯೇ ಆಗಿಬಿಟ್ಟಿದ್ದೇನೆ. ಆ ಸಮಯದಲ್ಲಿ ಸಾರಿಗೆಯು ಬಹಳ ದೊಡ್ಡ ಸಮಸ್ಯೆಯಾಗಿತ್ತು. ನಾನು ಕೆಲವೊಮ್ಮೆ ನನ್ನ ರೋಗಿಗಳನ್ನು ನೋಡಲು 15 ರಿಂದ 20 ಕಿಮೀ ನಡೆದು ಹೋಗುತ್ತಿದ್ದೆ,” ಎಂದು ಅವರು ನೆನಪಿಸಿಕೊಂಡರು. ವಾಂತಿ, ಅತಿಸಾರ ಮತ್ತು ಋತುಕಾಲಿಕ ರೋಗಗಳು ಆ ದಿನಗಳಲ್ಲಿ ಹೆಚ್ಚು ಸಾಮಾನ್ಯವಾಗಿದ್ದವು. ಜೊತೆಗೆ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಂದ ಆಗುವ ಸಾವುಗಳೂ ಕೂಡ ಕಡಿಮೆಯಾಗಿವೆ ಎಂದು ಅಸುಂತಾ ದೀದಿ ಹೇಳಿದರು.

With a relatively higher degree of awareness among people, cases of malaria, too, have reduced over the years. This change hasn’t come overnight. Repeated efforts such as health surveys, various kinds of vaccines, distribution of medicated mosquito nets and awareness campaigns on diseases spread my mosquitoes, snakes and insects such as bedbugs have brought about a positive shift.

ಅಸುಂತಾ ದೀದಿಯವರ ಕೈಗಳಲ್ಲಿ ತಾವು ಸುರಕ್ಷಿತರೆಂದು ತಿಳಿದು ಜನರು ಇಲ್ಲಿಗೆ ಬರುತ್ತಾರೆ”, ಎಂದು ಖಲ್ಖೋ ಹೇಳುತ್ತಾರೆ.

ಮೊದಲಿಗೆ ಹೋಲಿಸಿದರೆ ಮಲೇರಿಯಾದ ಬಗ್ಗೆ ಜನರಲ್ಲಿ ಇಂದು ಹೆಚ್ಚು ಜಾಗೃತಿ ಮೂಡಿರುವುದರಿಂದ, ಮಲೇರಿಯಾ ಪ್ರಕರಣಗಳೂ ಸಹ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿವೆ. ಈ ಬದಲಾವಣೆಯು ಒಂದು ರಾತ್ರಿಯಲ್ಲಿ ಆದದ್ದಲ್ಲ. ಆರೋಗ್ಯ ಸಮೀಕ್ಷೆಗಳು, ವಿವಿಧ ರೀತಿಯ ಲಸಿಕೆಗಳು, ಔಷಧೀಯ ಸೊಳ್ಳೆ ಪರದೆಗಳ ವಿತರಣೆ, ಹಾಗೂ ಸೊಳ್ಳೆ, ಹಾವು ಮತ್ತು ಕೀಟಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಅಭಿಯಾನಗಳು, ಹೀಗೆ ಪದೇ ಪದೇ ನಡೆಸಿದ ಪ್ರಯತ್ನಗಳು ಈ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿವೆ.

ಗ್ರಾಮ ಆರೋಗ್ಯ ಸ್ವಚ್ಛತಾ ಮತ್ತು ಪೋಷಣೆ ದಿನದ (VHSND – Village Health Sanitation and Nutrition Day) ಅಂಗವಾಗಿ, ಮಂಗಳವಾರ ಮತ್ತು ಶುಕ್ರವಾರದಂದು RHO ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಪರಿಶೀಲಿಸುತ್ತಾರೆ. ಇದರ ಜೊತೆಗೆ, ಗರ್ಭಿಣಿಯರಿಗೆ ಆಂಟಿನೇಟಲ್ ಪ್ರೊಫೈಲ್ ಪರೀಕ್ಷೆಗಳನ್ನು (ANC) ನಡೆಸುವುದು ಅವರ ಇನ್ನೊಂದು ಜವಾಬ್ದಾರಿ.

ಈ 19 ವರ್ಷಗಳಲ್ಲಿ, ಜನರ ಗೌರವ ಮತ್ತು ನಂಬಿಕೆಗಳನ್ನು ಗಳಿಸಿರುವ ಅಸುಂತಾ ದೀದಿ ಈ ಪ್ರದೇಶದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿದ್ದಾರೆ. “ನಾನು 2005ರಲ್ಲಿ ನನ್ನ ವೃತ್ತಿಯನ್ನು ಆರಂಭಿಸಿದೆ. ಈಗ ನಾನು ಈ ಗ್ರಾಮದ ನಿವಾಸಿಯೇ ಆಗಿಬಿಟ್ಟಿದ್ದೇನೆ. ಆ ಸಮಯದಲ್ಲಿ ಸಾರಿಗೆಯು ಬಹಳ ದೊಡ್ಡ ಸಮಸ್ಯೆಯಾಗಿತ್ತು. ನಾನು ಕೆಲವೊಮ್ಮೆ ನನ್ನ ರೋಗಿಗಳನ್ನು ನೋಡಲು 15 ರಿಂದ 20 ಕಿಮೀ ನಡೆದು ಹೋಗುತ್ತಿದ್ದೆ,” ಎಂದು ಅವರು ನೆನಪಿಸಿಕೊಂಡರು.

“ನಮ್ಮ ಮಿತಾನಿನ್ ದೀದಿಯರು ಫೌಂಡೇಷನ್‌ನಿಂದ ತರಬೇತಿ ಪಡೆಯುತ್ತಿದ್ದಾರೆ. ಅವರು ANC ಪರಿಶೀಲನೆಗಳಿಗೆ ವೈದ್ಯರನ್ನು ಕಳುಹಿಸಿದ್ದಾರೆ ಮತ್ತು ಹೈ ರಿಸ್ಕ್ ಸ್ಕ್ರೀನಿಂಗ್ ಕುರಿತು ಮಾಹಿತಿ ನೀಡಿದ್ದಾರೆ,” ಎಂದು ಅವರು ಹೇಳಿದರು.

ತಾಯಿಯರ ಆರೋಗ್ಯಕ್ಕೆ ಸಂಬಂಧಿಸಿದ ಕೆಲಸಗಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಉಪ-ಆರೋಗ್ಯ ಕೇಂದ್ರಕ್ಕೆ ನೀಡುವ ಬೆಂಬಲದ ಬಗ್ಗೆ ಅವರು ಉಲ್ಲೇಖಿಸಿದರು. “ನಮ್ಮ ಮಿತಾನಿನ್ ದೀದಿಯರು ಫೌಂಡೇಷನ್‌ನಿಂದ ತರಬೇತಿ ಪಡೆಯುತ್ತಿದ್ದಾರೆ. ಅವರು ANC ಪರಿಶೀಲನೆಗಳಿಗೆ ವೈದ್ಯರನ್ನು ಕಳುಹಿಸಿದ್ದಾರೆ ಮತ್ತು ಹೈ ರಿಸ್ಕ್ ಸ್ಕ್ರೀನಿಂಗ್ ಕುರಿತು ಮಾಹಿತಿ ನೀಡಿದ್ದಾರೆ,” ಎಂದು ಅವರು ಹೇಳಿದರು.

ಆರೋಗ್ಯ ಸೇವೆಗೆ ಸಂಬಂಧಿಸಿದ ಕೆಲಸಗಳಲ್ಲಿ ಫೌಂಡೇಷನ್ ಬೆಂಬಲ ನೀಡುತ್ತಿರುವ ಇನ್ನೊಂದು ಕ್ಷೇತ್ರವೆಂದರೆ ಅಂಗನವಾಡಿ ಕಾರ್ಯಕರ್ತರ ಸಾಮರ್ಥ್ಯ ನಿರ್ಮಾಣ.   ಧರ್ಮಜೈಗಢದಲ್ಲಿ ಅಂಗನವಾಡಿ ಕಾರ್ಯಕರ್ತರ ಸಾಮರ್ಥ್ಯ ಅಭಿವೃದ್ಧಿಗೆ  ಗ್ರಾಮ ಆರೋಗ್ಯ ಸ್ವಚ್ಛತಾ ಮತ್ತು ಪೋಷಣೆ ದಿನದ ಆಚರಣೆಯಲ್ಲಿ ಅವರ ಪಾತ್ರ, ಮಕ್ಕಳ ಬೆಳವಣಿಗೆಯನ್ನು ಗಮನಿಸುವುದರಲ್ಲಿ ಕೌಶಲ್ಯ ಸುಧಾರಣೆ, ಗುಂಪು ಅಥವಾ ವೈಯಕ್ತಿಕ ಸಲಹೆಗಾಗಿ ಸಂವಹನ ಕೌಶಲ್ಯಗಳು ಮುಂತಾದ ಕ್ಷೇತ್ರಗಳನ್ನು ಗುರುತಿಸಲಾಗಿದೆ

ನಮ್ಮ ಮಿತಾನಿನ್ ದೀದಿಯರು ಫೌಂಡೇಷನ್‌ನಿಂದ ತರಬೇತಿ ಪಡೆಯುತ್ತಿದ್ದಾರೆ. ಅವರು ANC ಪರಿಶೀಲನೆಗಳಿಗೆ ವೈದ್ಯರನ್ನು ಕಳುಹಿಸಿದ್ದಾರೆ ಮತ್ತು ಹೈ ರಿಸ್ಕ್ ಸ್ಕ್ರೀನಿಂಗ್ ಕುರಿತು ಮಾಹಿತಿ ನೀಡಿದ್ದಾರೆ,” ಎಂದು ಅವರು ಹೇಳಿದರು.

ಆರೋಗ್ಯ ಕಾರ್ಯಕರ್ತೆಯಾಗಿ ತಮ್ಮ ಸುದೀರ್ಘ ಅನುಭವದಲ್ಲಿ ಅಸುಂತಾ ದೀದಿಯವರು ಹಲವು ಸವಾಲುಗಳು ಮತ್ತು ಯಶಸ್ಸುಗಳನ್ನು ಕಂಡಿದ್ದಾರೆ. ಅವರ ಕೌಶಲ್ಯ ಮತ್ತು ಸಹನಶೀಲತೆಯನ್ನು ಪರೀಕ್ಷಿಸಿದ ಮತ್ತು ಅವರಿಗೆ ಅಪಾರ ತೃಪ್ತಿ ನೀಡಿದ ಒಂದು ಘಟನೆಯನ್ನು ಹಂಚಿಕೊಳ್ಳುವಂತೆ ನಾವು ಅವರನ್ನು ಕೇಳಿದೆವು.

AsuntDidi-body-image3
ಗ್ರಾಮೀಣ ಆರೋಗ್ಯ ಸಂಯೋಜಕಿ ಅಸುಂತಾ ಟೊಪ್ಪೊ (ಅಸುಂತಾ ದೀದಿ) ಅವರೊಂದಿಗಿರುವ ಸಂಜೀವನಿ ಮತ್ತು ಅವರ ತಾಯಿ ವಿಮ್ಲಾ ರಾಥಿಯಾ. ​
AsuntDidi-body-image4
2018 ರಲ್ಲಿ ಅಸುಂತಾ ಟೊಪ್ಪೊ, ತಾವು ಉಳಿಸಿದ ಮಗು ಸಂಜೀವನಿಯೊಂದಿಗೆ. ರಕ್ತಸ್ರಾವದಿಂದ ಬಳಲುತ್ತಿದ್ದ ಅವನ ತಾಯಿ ಮತ್ತು ಅವನನ್ನು ರಾಯ್ಗಢದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ಆಂಬುಲೆನ್ಸ್ ಸೇವೆಯ ಹೆಸರಿನ ಆಧಾರದ ಮೇಲೆ ಅವರು ಮಗುವಿಗೆ ಸಂಜೀವನಿ ಎಂದು ಹೆಸರಿಟ್ಟರು.​

ತಾಯಿಯರ ಆರೋಗ್ಯಕ್ಕೆ ಸಂಬಂಧಿಸಿದ ಕೆಲಸಗಳಿಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಉಪ-ಆರೋಗ್ಯ ಕೇಂದ್ರಕ್ಕೆ ನೀಡುವ ಬೆಂಬಲದ ಬಗ್ಗೆ ಅವರು ಉಲ್ಲೇಖಿಸಿದರು. “ನಮ್ಮ ಮಿತಾನಿನ್ ದೀದಿಯರು ಫೌಂಡೇಷನ್‌ನಿಂದ ತರಬೇತಿ ಪಡೆಯುತ್ತಿದ್ದಾರೆ. ಅವರು ANC ಪರಿಶೀಲನೆಗಳಿಗೆ ವೈದ್ಯರನ್ನು ಕಳುಹಿಸಿದ್ದಾರೆ ಮತ್ತು ಹೈ ರಿಸ್ಕ್ ಸ್ಕ್ರೀನಿಂಗ್ ಕುರಿತು ಮಾಹಿತಿ ನೀಡಿದ್ದಾರೆ,” ಎಂದು ಅವರು ಹೇಳಿದರು.

“ಅದು 2018ರ ಮೇ 1ನೇ ತಾರೀಖು,” ಎನ್ನತ್ತಾ ಅವರು ಒಂದು ಕಥೆಯನ್ನು ಹೇಳಲು ಪ್ರಾರಂಭಿಸಿದರು. “ಇಲ್ಲಿ, ಉಪ-ಕೇಂದ್ರದಲ್ಲಿ, ನಾವು ಗರ್ಭಿಣಿಯೊಬ್ಬಳನ್ನು ನೋಡುತ್ತಿದ್ದೆವು. ಆಕೆಯ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕಿಂತ ಬಹಳ ಹೆಚ್ಚಾಗಿತ್ತು ಮತ್ತು ಹೀಮೋಗ್ಲೋಬಿನ್ ಅತ್ಯಂತ ಕಡಿಮೆ – ಏಳಕ್ಕಿಂತ ಕಡಿಮೆ – ಇತ್ತು. ಆಕೆಯನ್ನು ನಮ್ಮ ಬಳಿಗೆ ಕರೆತಂದಾಗ ಹೆರಿಗೆ ನೋವು ಪ್ರಾರಂಭವಾಗಿತ್ತು. ನಾವು ಆಕೆಯನ್ನು ಮೇಜಿನ ಮೇಲೆ ಮಲಗಿಸುವ ಮೊದಲೇ ಆಕೆ ಮಗುವಿಗೆ ಜನ್ಮ ನೀಡಿದಳು,” ಎಂದು RHO ಹೇಳಿದರು.

ಅಸುಂತಾ ದೀದಿಯವರು ತಾಯಿ ಮತ್ತು ಮಗು ಇಬ್ಬರ ಜೀವ ಉಳಿಸಲು ಹೋರಾಡುತ್ತಿದ್ದಂತಹ ಮುಂದಿನ ಕೆಲವು ಗಂಟೆಗಳು ಒತ್ತಡ ಮತ್ತು ಅನಿಶ್ಚಿತತೆಗಳಿಂದ ತುಂಬಿದ್ದವು. ತಾಯಿಗೆ ಅತಿಯಾದ ರಕ್ತಸ್ರಾವವಾಗುತ್ತಿತ್ತು, ಮತ್ತು ಹೊಸದಾಗಿ ಜನಿಸಿದ ಮಗುವಿಗೆ ಉಸಿರಾಟದ ತೊಂದರೆಗಳಿದ್ದವು. ಆಕ್ಸಿಜನ್ ಸಿಲಿಂಡರ್ ಇಲ್ಲದ ಕಾರಣ, ಅಸುಂತಾ ದೀದಿ ಮಗುವಿನ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಅದನ್ನು ಜೀವಂತವಾಗಿಡಲು ಪ್ರಯತ್ನಿಸಿದರು. ಅದೇ ಸಮಯದಲ್ಲಿ, ಅವರು ತಾಯಿಯ ಸ್ಥಿತಿಯನ್ನು ಸ್ಥಿರಗೊಳಿಸಿ ರಕ್ತಸ್ರಾವವನ್ನು ನಿಯಂತ್ರಿಸಿದರು. “ಇದಾದ ನಂತರ, ನಾನು ಸಂಜೀವನಿ ಸೇವಾ 108 (ಆಂಬುಲೆನ್ಸ್) ಗೆ ಸಹಾಯ ಕೋರಿ ಕರೆ ಮಾಡಿದೆ. ಅವರು ಬಂದ ನಂತರ, ಅವರ ವೈದ್ಯರು ತಾಯಿಯನ್ನು ನೋಡಿಕೊಂಡರು. ನಾನು ಮಗುವನ್ನು ನನ್ನ ಮಡಿಲಿನಲ್ಲಿ ಇರಿಸಿಕೊಂಡು ರಾಯ್‌ಗಢ್ ಮೆಡಿಕಲ್ ಕಾಲೇಜ್‌ಗೆ ಹೊರಟೆ,” ಎಂದು ಅಸುಂತಾ ದೀದಿ ಹೇಳಿದರು.

ಆರೋಗ್ಯ ಸೇವೆಗೆ ಸಂಬಂಧಿಸಿದ ಕೆಲಸಗಳಲ್ಲಿ ಫೌಂಡೇಷನ್ ಬೆಂಬಲ ನೀಡುತ್ತಿರುವ ಇನ್ನೊಂದು ಕ್ಷೇತ್ರವೆಂದರೆ ಅಂಗನವಾಡಿ ಕಾರ್ಯಕರ್ತರ ಸಾಮರ್ಥ್ಯ ನಿರ್ಮಾಣ.

ಆಸ್ಪತ್ರೆಗೆ ಹೋಗುವ ದಾರಿಯಲ್ಲಿ, ಸುಮಾರು 70-80 ಕಿಮೀ ದೂರದವರೆಗೆ, ಅಸುಂತಾ ದೀದಿ ಮಗುವಿನ ಬಾಯಿಗೆ ಆಕ್ಸಿಜನ್ ಊದುತ್ತಲೇ ಇದ್ದರು. ಆಸ್ಪತ್ರೆಯ ವೈದ್ಯರು ಮೊದಲಿಗೆ ಮಗುವನ್ನು ಉಳಿಸಲು ಸಾಧ್ಯ ಎಂಬ ವಿಶ್ವಾಸವನ್ನು ಹೊಂದಿರಲಿಲ್ಲ.

“But I was adamant… If he had to die, the child would not have reached the hospital. Finally, both mother and child survived the ordeal. This is one case that still fills me with satisfaction,” Asunta Didi said.

“ಮಗು ಈಗ ಹೇಗಿದೆ” ಎಂದು ನಾವು ಕೇಳಿದೆವು.

ತಾಯಿಗೆ ಅತಿಯಾದ ರಕ್ತಸ್ರಾವವಾಗುತ್ತಿತ್ತು, ಮತ್ತು ಹೊಸದಾಗಿ ಜನಿಸಿದ ಮಗುವಿಗೆ ಉಸಿರಾಟದ ತೊಂದರೆಗಳಿದ್ದವು. ಆಕ್ಸಿಜನ್ ಸಿಲಿಂಡರ್ ಇಲ್ಲದ ಕಾರಣ, ಅಸುಂತಾ ದೀದಿ ಮಗುವಿನ ಬಾಯಿಗೆ ಬಾಯಿಟ್ಟು ಉಸಿರು ನೀಡಿ ಅದನ್ನು ಜೀವಂತವಾಗಿಡಲು ಪ್ರಯತ್ನಿಸಿದರು. ಅದೇ ಸಮಯದಲ್ಲಿ, ಅವರು ತಾಯಿಯ ಸ್ಥಿತಿಯನ್ನು ಸ್ಥಿರಗೊಳಿಸಿ ರಕ್ತಸ್ರಾವವನ್ನು ನಿಯಂತ್ರಿಸಿದರು.

“ಅವನು ಇಲ್ಲಿ ಮಿರಿಗುಡಾ ಗ್ರಾಮದಲ್ಲಿದ್ದಾನೆ, ನಾನು ಅವನಿಗೆ ಸಂಜೀವನಿ ರಾಥಿಯಾ ಎಂದು ಹೆಸರಿಟ್ಟಿದ್ದೇನೆ. ನಾನು ಮೊದಲ ಬಾರಿಗೆ 108 ಸಂಜೀವನಿ ಸೇವೆಗೆ ಸಹಾಯ ಕೋರಿ ಕರೆ ಮಾಡಿದ್ದೆ, ಆದ್ದರಿಂದ ಮಗುವಿಗೆ ಸಂಜೀವನಿ ಎಂದು ಹೆಸರಿಟ್ಟೆ.” ಎಂದು ಅಸುಂತಾ ದೀದಿ ಹೇಳಿದರು.

ಸಂಜೀವನಿಯ ಪೋಷಕರು ಆ ಪ್ರಮುಖವಾದ ದಿನವನ್ನು ನೆನಪಿಸಿಕೊಳ್ಳುತ್ತಾರೆಯೇ?

“ಖಂಡಿತವಾಗಿಯೂ ನೆನಪಿಸಿಕೊಳ್ಳುತ್ತಾರೆ” ಎಂದರು. “ಆ ಮಗು ನನ್ನನ್ನು ‘ಅಮ್ಮ’ ಎಂದು ಕರೆಯುತ್ತಾನೆ, ಮಗುವಿನ ತಜ್ಞರು ಅವನನ್ನು ಬದುಕಿಸುವ ಪ್ರಯತ್ನಗಳನ್ನು ಕೈಬಿಟ್ಟಿದ್ದರು. ಅವನ ಕುಟುಂಬ ನಿರಾಶೆಯಲ್ಲಿತ್ತು. ಆದರೆ ನಾನು ಮಗುವಿಗೆ ಏನೂ ಆಗುವುದಿಲ್ಲ ಎಂಬ ದೃಢನಿಶ್ಚಯದಿಂದ ಇದ್ದೆ, ಏಕೆಂದರೆ ನಾವು ಅವನನ್ನು ಮಿರಿಗುಡಾದಿಂದ ರಾಯ್ಗಢದಷ್ಟು ದೂರದವರೆಗೂ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದೆವು. ಈಗ ಐದು ವರ್ಷಗಳು ಕಳೆದಿವೆ… ಅವನು ಚೆನ್ನಾಗಿದ್ದಾನೆ.” ಎಂದು ಅವರು ಹೆಮ್ಮೆಯಿಂದ ಹೇಳಿದರು.

ನಾನು ಅವನಿಗೆ ಸಂಜೀವನಿ ರಾಥಿಯಾ ಎಂದು ಹೆಸರಿಟ್ಟಿದ್ದೇನೆ. ನಾನು ಮೊದಲ ಬಾರಿಗೆ 108 ಸಂಜೀವನಿ ಸೇವೆಗೆ ಸಹಾಯ ಕೋರಿ ಕರೆ ಮಾಡಿದ್ದೆ, ಆದ್ದರಿಂದ ಮಗುವಿಗೆ ಸಂಜೀವನಿ ಎಂದು ಹೆಸರಿಟ್ಟೆ.” ಎಂದು ಅಸುಂತಾ ದೀದಿ ಹೇಳಿದರು.

When we asked her why she thought she could save the child and how she managed to take him from here to Raigarh, her answer was: “From here, we first took him to Dharamjaigarh. There was a lady doctor whose name I would not like to mention. She expressed her displeasure and questioned why we took the mother and child to the hospital in that condition. But I wanted to save both the mother and the child, so I argued with the doctor… I requested her, ‘Please give me an ambulance.’ After this, the maid administered an injection to the child and gave him some medicine. Then, I took him to Raigarh Medical College while giving mouth-to-mouth resuscitation.” Asunta became very emotional while recounting this.

ನಾವು ಸಂಜೀವನಿ ಮತ್ತು ಅವನ ತಾಯಿಯನ್ನು ಭೇಟಿ ಮಾಡಬಹುದೇ ಎಂದು ಕೇಳಿದೆವು. ಅಸುಂತಾ ದೀದಿ ಸಂತೋಷದಿಂದ ಒಪ್ಪಿದರು. ನಾವು ಅವರ ಮನೆಗೆ ಹೋದಾಗ, ಕುಟುಂಬವು ಭತ್ತದ ಗದ್ದೆಗೆ ಹೋಗಿದೆ ಎಂದು ತಿಳಿಯಿತು. ನಾವು ಗದ್ದೆಗೆ ಹೋದೆವು. ತಾಯಿ ವಿಮ್ಲಾ ಭತ್ತದ ನಾಟಿಯನ್ನು ಹಾಕುತ್ತಿದ್ದರು, ಮತ್ತು ಸಂಜೀವನಿ ಕೆಲವು ಸ್ನೇಹಿತರೊಂದಿಗೆ ಆಟವಾಡುತ್ತಿದ್ದ. ಅಸುಂತಾ ದೀದಿಯವರನ್ನು ನೋಡಿದ ನಂತರ, ಸಂಜೀವನಿಯ ತಾಯಿ ವಿಮ್ಲಾ ನಮ್ಮನ್ನು ಸ್ವಾಗತಿಸಲು ಬಂದರು. ಸಂಜೀವನಿ ಕೂಡ ಸ್ವಲ್ಪ ಸಮಯದ ನಂತರ ನಮ್ಮಲ್ಲಿಗೆ ಬಂದನು. ನಾವು ಆ ಕ್ಷಣವನ್ನು ಫೋಟೋದಲ್ಲಿ ಸೆರೆಹಿಡಿಯಲು ನಿರ್ಧರಿಸಿದೆವು.

ಖಂಡಿತವಾಗಿಯೂ ನೆನಪಿಸಿಕೊಳ್ಳುತ್ತಾರೆ” ಎಂದರು. “ಆ ಮಗು ನನ್ನನ್ನು ‘ಅಮ್ಮ’ ಎಂದು ಕರೆಯುತ್ತಾನೆ, ಮಗುವಿನ ತಜ್ಞರು ಅವನನ್ನು ಬದುಕಿಸುವ ಪ್ರಯತ್ನಗಳನ್ನು ಕೈಬಿಟ್ಟಿದ್ದರು. ಅವನ ಕುಟುಂಬ ನಿರಾಶೆಯಲ್ಲಿತ್ತು. ಆದರೆ ನಾನು ಮಗುವಿಗೆ ಏನೂ ಆಗುವುದಿಲ್ಲ ಎಂಬ ದೃಢನಿಶ್ಚಯದಿಂದ ಇದ್ದೆ, ಏಕೆಂದರೆ ನಾವು ಅವನನ್ನು ಮಿರಿಗುಡಾದಿಂದ ರಾಯ್ಗಢದಷ್ಟು ದೂರದವರೆಗೂ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದೆವು. ಈಗ ಐದು ವರ್ಷಗಳು ಕಳೆದಿವೆ… ಅವನು ಚೆನ್ನಾಗಿದ್ದಾನೆ.” ಎಂದು ಅವರು ಹೆಮ್ಮೆಯಿಂದ ಹೇಳಿದರು.

ಅಸುಂತಾ ಅವರ ಕೆಲಸದ ಕ್ಷೇತ್ರದಲ್ಲಿ ಹೆರಿಗೆ ಪ್ರಕರಣ ಮತ್ತು ತೊಂದರೆಗಳು ಜೊತೆಜೊತೆಯಲ್ಲೇ ಬರುತ್ತವೆ. ಒಬ್ಬ ಬಿರ್ಹೋರ್ ಮಹಿಳೆ ತನ್ನ ಏಳನೇ ಮಗುವಿಗೆ ಗರ್ಭಿಣಿಯಾಗಿದ್ದಂತಹ ಇನ್ನೊಂದು ಘಟನೆಯನ್ನು ಅವರು ಹಂಚಿಕೊಂಡರು. ಪ್ರಸವ ಸಮಯದಲ್ಲಿ, ಅವಳ ಗರ್ಭಕೋಶ ದೇಹದಿಂದ ಬಹುತೇಕ ಹೊರಬಂದಿತ್ತು. “ನಾವು ಗರ್ಭಕೋಶವನ್ನು ಮತ್ತೆ ಹಿಂದೆ ಸರಿಸಿ ಅವಳನ್ನು ಉಳಿಸಿದೆವು. ನಾವು ಅವಳ ಪ್ರಕರಣವನ್ನು ಆಸ್ಪತ್ರೆಗೆ ರೆಫರ್ ಮಾಡಲು ಬಯಸಿದ್ದೆವು, ಆದರೆ ಅವಳು ಅಲ್ಲಿಗೆ ಹೋಗಲು ನಿರಾಕರಿಸಿದಳು. ಅದರ ನಂತರ ಅವಳು ಇನ್ನೊಂದು ಮಗುವಿಗೂ ಜನ್ಮ ನೀಡಿದಳು,” ಎಂದು ಅಸುಂತಾ ಹೇಳಿದರು.

2019 ರಲ್ಲಿ, ಅಸುಂತಾ ಎಕ್ಲಾಂಪ್ಸಿಯಾ ಇದ್ದಂತಹ ಇನ್ನೊಬ್ಬ ಗರ್ಭಿಣಿ ಮಹಿಳೆಯನ್ನು ಉಳಿಸಿದರು. ಎಕ್ಲಾಂಪ್ಸಿಯಾದಿಂದ ಗರ್ಭಿಣಿಯ ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಮೂತ್ರದಲ್ಲಿ ಆಲ್ಬುಮಿನ್ ಕಾಣಿಸಿಕೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ಹೀಮೋಗ್ಲೋಬಿನ್ ಕಡಿಮೆ ಇರುವುದರಿಂದ ದೇಹ ಆಘಾತಕ್ಕೆ ಒಳಗಾಗಬಹುದು, ಮತ್ತು ಸೀಜರ್ಸ್‍ ಉಂಟಾಗಬಹುದು. ಅಸುಂತಾ ದೀದಿಯವರ ತ್ವರಿತ ನಿರ್ಧಾರದಿಂದಾಗಿ ರೋಗಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC – Community Health Centre) ಕಳುಹಿಸಲಾಯಿತು̤. ಇದರಿಂದಾಗಿ ಈ ಕಥೆಯ ದುರಂತ ಅಂತ್ಯವನ್ನು ತಪ್ಪಿಸಲು ಸಾಧ್ಯವಾಯಿತು.

ಈ ಸುದೀರ್ಘ ವರ್ಷಗಳ ಅವಧಿಯಲ್ಲಿ ಹಳ್ಳಿಯ ಜನರಿಗೆ ಅಸುಂತಾ ದೀದಿಯವರ ಮೇಲೆ ನಂಬಿಕೆ ಬೆಳೆದಿದೆ. 2015ರಲ್ಲಿ, ಪಥರಿದಂಡ್ ಗ್ರಾಮದ ಒಬ್ಬ ಬಡ ಮಹಿಳೆಗೆ ಎಕ್ಲಾಂಪ್ಸಿಯಾ ಕಾರಣದಿಂದ ಪ್ರಯಾಣಿಸಲು ಸಾಧ್ಯವಿರಲಿಲ್ಲ. ಅಸುಂತಾ ದೀದಿ ಮತ್ತು ಅವರ ಸಹೋದ್ಯೋಗಿಗಳು ಆಕೆಯನ್ನು ಒಂದು ಮಂಚಕ್ಕೆ ಕಟ್ಟಿ ಉಪ-ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದರು.

ಅಸುಂತಾ ಟೊಪ್ಪೊ ಮತ್ತು ಅವರಂತಹ ಆರೋಗ್ಯ ಕಾರ್ಯಕರ್ತರು ರಾಜ್ಯ ಮತ್ತು ಸರ್ಕಾರಗಳ ಆರೋಗ್ಯ ಸೇವೆಗಳನ್ನು ಅವಲಂಬಿಸಿರುವ ಸಾವಿರಾರು ಜನರಿಗೆ ಆಶಾದೀಪವಾಗಿದ್ದಾರೆ. ಆದ್ದರಿಂದ ನಾವು ಅವರ ನಿಸ್ವಾರ್ಥ ಮತ್ತು ಅವಿರತ ಸೇವೆ ಮತ್ತು ನಿಷ್ಠೆಯನ್ನು ಗುರುತಿಸಬೇಕು.

2019 ರಲ್ಲಿ, ಅಸುಂತಾ ಎಕ್ಲಾಂಪ್ಸಿಯಾ ಇದ್ದಂತಹ ಇನ್ನೊಬ್ಬ ಗರ್ಭಿಣಿ ಮಹಿಳೆಯನ್ನು ಉಳಿಸಿದರು. ಎಕ್ಲಾಂಪ್ಸಿಯಾದಿಂದ ಗರ್ಭಿಣಿಯ ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಮೂತ್ರದಲ್ಲಿ ಆಲ್ಬುಮಿನ್ ಕಾಣಿಸಿಕೊಳ್ಳುತ್ತದೆ. ಇಂತಹ ಸ್ಥಿತಿಯಲ್ಲಿ ಹೀಮೋಗ್ಲೋಬಿನ್ ಕಡಿಮೆ ಇರುವುದರಿಂದ ದೇಹ ಆಘಾತಕ್ಕೆ ಒಳಗಾಗಬಹುದು, ಮತ್ತು ಸೀಜರ್ಸ್‍ ಉಂಟಾಗಬಹುದು.

ಈ ಲೇಖನವನ್ನು ಮೂಲತಃ ಪ್ರಕಟಿಸಿದ್ದು https://azimpremjifoundation.org/kn-in/asunta-didi-a-sister-who-helps-retain-trust-in-the-public-health-system/

2015ರಲ್ಲಿ, ಪಥರಿದಂಡ್ ಗ್ರಾಮದ ಒಬ್ಬ ಬಡ ಮಹಿಳೆಗೆ ಎಕ್ಲಾಂಪ್ಸಿಯಾ ಕಾರಣದಿಂದ ಪ್ರಯಾಣಿಸಲು ಸಾಧ್ಯವಿರಲಿಲ್ಲ. ಅಸುಂತಾ ದೀದಿ ಮತ್ತು ಅವರ ಸಹೋದ್ಯೋಗಿಗಳು ಆಕೆಯನ್ನು ಒಂದು ಮಂಚಕ್ಕೆ ಕಟ್ಟಿ ಉಪ-ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದರು.