ಅವಕಾಶವೊಂದನ್ನು ತೆರೆದಿಡುವುದು: ಗ್ರಾಮೀಣ ಸಂವೇದನಾ ಕಾರ್ಯಕ್ರಮದ ಕಥೆ

2017 ರಲ್ಲಿ, ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಿತ್ಲಿಂಗಿ ಪ್ರದೇಶದ ಟ್ರೈಬಲ್ ಹೆಲ್ತ್ ಇನಿಶಿಯೇಟಿವ್ ಎಂಬ ಸಂಸ್ಥೆಯು, ವೈದ್ಯಕೀಯ ವಿದ್ಯಾರ್ಥಿಗಳನ್ನು 3 ದಿನಗಳ ಕಾಲ ತನ್ನ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಆಹ್ವಾನ ನೀಡುವ ಮೂಲಕ ಒಂದು ವಿಶಿಷ್ಟವಾದ ಉಪಕ್ರಮವನ್ನು ಪ್ರಾರಂಭಿಸಿತು. ಅಲ್ಲಿ ನಡೆದ ವಿದ್ಯಮಾನವು ಒಂದು ಮಾಯಾಜಾಲದಂತಿತ್ತು. ಇದೊಂದು ಗ್ರಾಮೀಣ ಸಂವೇದನಾ ಕಾರ್ಯಕ್ರಮದ ಕಥೆ.

ಅವಕಾಶವೊಂದನ್ನು ತೆರೆದಿಡುವುದು: ಗ್ರಾಮೀಣ ಸಂವೇದನಾ ಕಾರ್ಯಕ್ರಮದ ಕಥೆ

2017 ರಲ್ಲಿ, ಛತ್ತೀಸಗಢದ ಬಿಲಾಸ್ಪುರದಲ್ಲಿ ಮೆಡಿಕೊ ಫ್ರೆಂಡ್ಸ್ ಸರ್ಕಲ್ ಎಂಬ ಸಂಸ್ಥೆಯ ಸಭೆಗಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ, ನಾನು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ (ಸಿ ಎಂ ಸಿ) ಡಾ. ಆನಂದ್ ಝಕಾರಿಯಾ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದೆ. ಮಹಾರಾಷ್ಟ್ರದ ‘ಸರ್ಚ್’ ಸಂಸ್ಥೆ ನಡೆಸುವ ನಿರ್ಮಾಣ್ ಎಂಬ ಕಾರ್ಯಕ್ರಮದತ್ತ ಆಕರ್ಷಿತರಾಗಿದ್ದ, ಹೊಳೆಯುವ ಕಣ್ಣುಗಳ, ಚಡಪಡಿಕೆ ಮತ್ತು ಹುಡುಕಾಟದಲ್ಲಿದ್ದ ಯುವಕರು ಅಂದು ನಮ್ಮಿಬ್ಬರ ಗಮನ ಸೆಳೆದರು. ಅದು ಈ ಯುವ ಮನಸ್ಸುಗಳನ್ನು ಆಳದಲ್ಲಿ ತಟ್ಟುವಂಥ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿತ್ತು. ಆದರೆ ಅದನ್ನು ಸಂಪೂರ್ಣವಾಗಿ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ನಡೆಸಲಾಗುತ್ತಿತ್ತು, ಇದರಿಂದಾಗಿ ದಕ್ಷಿಣ ಭಾರತದ ಒಂದು ಇಡೀ ತಲೆಮಾರಿನ ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಹೊರಗುಳಿದು, ಕೇವಲ ದೂರದಿಂದಲೇ ನೋಡುವಂತಾಗಿತ್ತು.

ನಿರ್ಮಾಣ್ NIRMAN ‘ ಎಂಬುದು ಗ್ರಾಮೀಣ ಕೇಂದ್ರಿತ ಯುವ ಉಪಕ್ರಮವಾಗಿದ್ದು, ಇದನ್ನು 2006 ರಲ್ಲಿ ಡಾ. ಅಭಯ್ ಮತ್ತು ಡಾ. ರಾಣಿ ಬಾಂಗ್ ಅವರು ‘ಸರ್ಚ್’ ಮತ್ತು ಮಹಾರಾಷ್ಟ್ರ ನಾಲೆಡ್ಜ್ ಕಾರ್ಪೊರೇಷನ್ ಲಿಮಿಟೆಡ್ (ಎಮ್ ಕೆ ಸಿ ಎಲ್) ಅಡಿಯಲ್ಲಿ ಪ್ರಾರಂಭಿಸಿದರು. ಗಡ್ಚಿರೋಲಿಯ ಶೋಧಗ್ರಾಮದಿಂದ ಕಾರ್ಯನಿರ್ವಹಿಸುವ ಇದು, ಭಾರತದ ಅಂಚಿನಲ್ಲಿರುವ ಗ್ರಾಮೀಣ ಸಮುದಾಯಗಳ ಮೇಲೆ ವಿಶೇಷವಾಗಿ ಪರಿಣಾಮ ಬೀರುವ ನಿರ್ಣಾಯಕ ಸಾಮಾಜಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಸವಾಲುಗಳನ್ನು ಪರಿಹರಿಸಲು ವಸತಿ ಕಾರ್ಯಾಗಾರಗಳ ಮೂಲಕ ಯುವ ಬದಲಾವಣೆಗಾರರಿಗೆ ತರಬೇತಿ ನೀಡುತ್ತದೆ.

ಇದನ್ನು ಗಮನಿಸಿದ ಮೇಲೆ ನಮ್ಮ ಮನಸ್ಸಿನಲ್ಲಿ ಒಂದು ಆಲೋಚನೆ ಹುಟ್ಟಿತು. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರನ್ನು ಗ್ರಾಮೀಣ ಮತ್ತು ಬುಡಕಟ್ಟು ಭಾರತದ ಆರೋಗ್ಯದ ವಾಸ್ತವಿಕ ಪರಿಸ್ಥಿತಿಗಳಿಗೆ ಪರಿಚಯಿಸಬಲ್ಲಂಥ, ಎಲ್ಲರಿಗೂ ಮುಕ್ತವಾದ, ಒಂದು ಚಿಕ್ಕದಾದ, ಎಲ್ಲರೂ ಭಾಗವಹಿಸಲು ಸಾಧ್ಯವಾಗುವಂಥ ಕಾರ್ಯಕ್ರಮವಿದ್ದರೆ ಹೇಗಿರುತ್ತದೆ? ಇದು ಉಪನ್ಯಾಸಗಳ ಸರಣಿಯಾಗಿರಬಾರದು. ಪ್ರಮಾಣಪತ್ರಗಳು ಮತ್ತು ಕಾರ್ಯಸೂಚಿಗಳನ್ನು ಹೊಂದಿರುವಂಥ ಕಾರ್ಯಾಗಾರವೂ ಆಗಿರಬಾರದು. ಈ ಕಾರ್ಯಕ್ರಮವು ತಾಜಾತನದಿಂದ ಕೂಡಿದ, ಪ್ರಾಮಾಣಿಕವಾದ ಮತ್ತು ಮಾನವೀಯವಾದದ್ದಾಗಿರಬೇಕು. ಇದರ ಪರಿಣಾಮವಾಗಿ ನಗರದ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯರ ಅಗತ್ಯ ಅತಿ ಹೆಚ್ಚಾಗಿರುವ ಸಮುದಾಯಗಳ ನಡುವಿನ ವಿಶಾಲವಾದ ಅಂತರವನ್ನು ಬೆಸೆಯಲು ಸಾಧ್ಯವಾಗಬೇಕು.

ಡಾ. ಆನಂದ್ ಮತ್ತು ನನ್ನ ನಡುವಿನ ಆ ಸಂಭಾಷಣೆಯೇ ಗ್ರಾಮೀಣ ಸಂವೇದನಾ ಕಾರ್ಯಕ್ರಮವಾಗಿ (ಆರ್ ಎಸ್ ಪಿ) ರೂಪಾಂತರಗೊಂಡಿತು.

ಒಂದು ಅನಿಶ್ಚಿತ ಆರಂಭ  

ಟ್ರೈಬಲ್ ಹೆಲ್ತ್ ಇನಿಶಿಯೇಟಿವ್ ನ ಕಡೆಯಿಂದ ಮೊದಲ ಆರ್ ಎಸ್ ಪಿ ಯನ್ನು ನಾವು ಡಿಸೆಂಬರ್ 2017 ರಲ್ಲಿ ನಡೆಸಿದೆವು ಮತ್ತು ಸಾಮಾನ್ಯವಾಗಿ ಯಾವುದೇ ಒಳ್ಳೆಯ ವಿಷಯದಲ್ಲೂ ಆಗುವಂತೆ ಇದು ಕೂಡ ಅನಿಶ್ಚಿತತೆಯೊಂದಿಗೆ ಪ್ರಾರಂಭವಾಯಿತು. ನಾವು ವೈದ್ಯಕೀಯ ಕಾಲೇಜುಗಳಲ್ಲಿ ಡಾ. ಆನಂದ್ ಅವರ ಪರಿಚಯದ ವಿದ್ಯಾರ್ಥಿಗಳ ಮೂಲಕ ವಿಷಯವನ್ನು ತಲುಪಿಸಲು ಪ್ರಾರಂಭಿಸಿದೆವು, ಕಾರ್ಯಕ್ರಮದ ಕುರಿತಾದ ಪ್ರಕಟಣೆಗಳನ್ನು ಮುದ್ರಿಸಿದೆವು ಮತ್ತು ಸಮುದಾಯ ಆರೋಗ್ಯ ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಅವುಗಳನ್ನು ಹಾಸ್ಟೆಲ್ ನ ಸೂಚನಾ ಫಲಕಗಳಲ್ಲಿ ಮತ್ತು ಕಾಲೇಜಿನ ಹಜಾರಗಳಲ್ಲಿ ಅಂಟಿಸಲು ವಿನಂತಿಸಿದೆವು. ನಮಗೆ ಸುಮಾರು 40 ಅರ್ಜಿಗಳು ಬಂದಿದ್ದವು, ಆದರೆ ಅರ್ಜಿಗಳೇ ಮನುಶ್ಯರಲ್ಲವಲ್ಲ, ಅರ್ಜಿ ಹಾಕಿದ ಮಾತ್ರಕ್ಕೆ ಜನರು ಯಾವಾಗಲೂ ಬಂದೇ ಬರುತ್ತಾರೆ ಎಂದೇನಿಲ್ಲ.

ಟ್ರೈಬಲ್ ಹೆಲ್ತ್ ಇನಿಶಿಯೇಟಿವ್ (ಟಿ ಎಚ್ ಐ) ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಸಿತ್ಲಿಂಗಿ ಎಂಬ ಬುಡಕಟ್ಟು ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಒಂದು ಲಾಭೋದ್ದೇಶರಹಿತ ಸಂಸ್ಥೆಯಾಗಿದೆ. ಆರೋಗ್ಯ ಮತ್ತು ಆರೋಗ್ಯದ ಸಾಮಾಜಿಕ ಪರಿಣಾಮಗಳ ಕುರಿತು ವ್ಯಾಪಕವಾದ ಕೆಲಸದ ಮೂಲಕ, ಈ ಸಂಸ್ಥೆಯು ಕಳೆದ 34 ವರ್ಷಗಳಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳ ಜೀವನದ ಗುಣಮಟ್ಟವನ್ನು ಗಣನೀಯವಾಗಿ ಹೆಚ್ಚಿಸಲು ಸಹಾಯ ಮಾಡಿದೆ.

ಮೊದಲ ಆರ್ ಎಸ್ ಪಿ ಕಾರ್ಯಕ್ರಮದ ದಿನದ ಬೆಳಿಗ್ಗೆ, ನಾನು ಸೇಲಂ ಕಡೆಯಿಂದ ಬರುವ ಏಕೈಕ ಬಸ್‌ಗಾಗಿ ಕಾಯುತ್ತಾ ಬಸ್ ನಿಲ್ದಾಣದಲ್ಲಿ ನಿಂತಿದ್ದೆ, ಸಂದೇಹದ ಕ್ಷಣಗಳಲ್ಲಿ ಸಾಮಾನ್ಯವಾಗಿ ಆಗುವಂತೆ ನನ್ನ ಹೃದಯವೂ ಬಡಿದುಕೊಳ್ಳುತ್ತಿತ್ತು. ಬಸ್ ಬಂದು ನಿಂತಾಗ, ನಾನು ಒಳಗೆ ಹೆಜ್ಜೆ ಇಟ್ಟು, ಅರೆ-ಭರವಸೆಯಿಂದ “ಇಲ್ಲಿ ಯಾರಾದರೂ ಆರ್ ಎಸ್ ಪಿ ಕಾರ್ಯಕ್ರಮಕ್ಕಾಗಿ ಬಂದಿದ್ದೀರಾ” ಎಂದು ಕೇಳಿದೆ?

ಆಗ ಇಡೀ ಬಸ್ಸೇ ಖಾಲಿಯಾಯಿತು. 

ಆಗ ಮನಸ್ಸಿನಲ್ಲುಂಟಾದ ನಿರಾಳವನ್ನು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಆ ಮೊದಲ ಕಾರ್ಯಕ್ರಮವು ಕೇವಲ ಎರಡು ದಿನಗಳ ಕಾಲ ನಡೆಯಿತು – ನಾವು ಆಗ ಇನ್ನೂ ಅದರ ಸ್ವರೂಪದ ಕುರಿತು ಯೋಚಿಸುತ್ತಿದ್ದೆವು, ಕತ್ತಲೆಯಲ್ಲಿ ದಾರಿಯನ್ನು ಅರಸುತ್ತಿದ್ದೆವು, ದೇಶದಲ್ಲಿ ಈ ಹಿಂದೆ ಎಂದೂ ಈ ರೀತಿಯಾಗಿ ರೀತಿಯಲ್ಲಿ ನಡೆಯದೇ ಇದ್ದ ಕೆಲಸವನ್ನು ನಿರ್ವಹಿಸುತ್ತಿದ್ದೆವು. ಇಂದು, ಆರ್ ಎಸ್ ಪಿ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯುತ್ತದೆ: ಮೂರು ದಿನಗಳ ಕಲಿಕೆ, ನಗು, ಪ್ರಾಮಾಣಿಕ ಸಂಭಾಷಣೆ ಮತ್ತು ಅನಿರೀಕ್ಷಿತವಾದ ಸ್ನೇಹಗಳನ್ನು ಬೆಳೆಸಿಕೊಳ್ಳುವುದು.

A large group of diverse individuals posing together outside a rustic building with a tiled roof, surrounded by greenery and trees.

ಉಪನ್ಯಾಸದ ಕೊಠಡಿಯ ಹಿಂಭಾಗದಲ್ಲಿ ಸಾಮಾನ್ಯವಾಗಿ ಸದ್ದಿಲ್ಲದೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಮಾತನಾಡಲು ಪ್ರಾರಂಭಿಸುತ್ತಾರೆ. ಅವರು ಪ್ರಶ್ನಿಸುತ್ತಾರೆ, ಸವಾಲು ಹಾಕುತ್ತಾರೆ, ಕಲ್ಪಿಸಿಕೊಳ್ಳುತ್ತಾರೆ. ಶ್ರೇಣೀಕೃತ ವ್ಯವಸ್ಥೆಯ ಭಾರವು ಮರೆಯಾದಾಗ ಸ್ವಯಂ-ಅಭಿವ್ಯಕ್ತಿ, ರಚನಾತ್ಮಕ ಟೀಕೆ ಮತ್ತು ಸೃಜನಶೀಲ ಚಿಂತನೆಗಳು ಏಳಿಗೆ ಹೊಂದುತ್ತವೆ.

 ಕಲಿತಿದ್ದನ್ನು ಮರೆಯಲು ಕಲಿಯುವುದು  

ಪ್ರಾರಂಭದಲ್ಲೇ ನಾವು ಒಂದು ಮೂಲಭೂತ ನಿರ್ಧಾರವನ್ನು ತೆಗೆದುಕೊಂಡೆವು: ಅದೆಂದರೆ ಯಾವುದೇ ನಿಗದಿತವಾದ ಕಾರ್ಯಸೂಚಿಯನ್ನು ಹೊಂದಿರದೇ ಇರುವುದು. ಇದು ಮತ್ತೊಂದು ತರಗತಿಯಾಗಬಾರದು. ಭಾಗವಹಿಸುವವರು ಚರ್ಚೆಗಳನ್ನು ರೂಪಿಸುತ್ತಾರೆ, ಅವರ ಮನಸ್ಸನ್ನು ಕಾಡುತ್ತಿರುವ ಪ್ರಶ್ನೆಗಳನ್ನು ಎತ್ತುತ್ತಾರೆ ಮತ್ತು ಕಾರ್ಯಕ್ರಮವನ್ನು ಅವರಿಗೆ ಅತ್ಯಂತ ಸೂಕ್ತ ಎನಿಸಿದ ದಿಕ್ಕಿನಲ್ಲಿ ಕೊಂಡೊಯ್ಯುತ್ತಾರೆ. ಇದೊಂದು ಅನೌಪಚಾರಿಕ-ಸಮ್ಮೇಳನ ಆಗಿರುತ್ತದೆ ಮತ್ತು ಆ ಮನೋಭಾವದಿಂದಲೇ, “ಅನೌಪಚಾರಿಕ” ಎನ್ನಬಹುದಾದ ಇಡೀ ತತ್ವಶಾಸ್ತ್ರವೇ ಹೊರಹೊಮ್ಮಿತು.

ಇದು ಅನೌಪಚಾರಿಕ – ಕಾಲೇಜು ಶಿಕ್ಷಣವಾಗಿತ್ತು – ಔಪಚಾರಿಕ ವೈದ್ಯಕೀಯ ತರಬೇತಿಯು ಈ ರೀತಿಯ ಶಿಕ್ಷಣವನ್ನು ಕೊಡಲು ಸಾಧ್ಯವಿಲ್ಲ ಅಥವಾ . ಇಲ್ಲಿ ಯಾವುದೇ “ಸರ್” ಅಥವಾ “ಮೇಡಂ” ಗಳಿರುವುದಿಲ್ಲ. ವಯಸ್ಸು ಅಥವಾ ತಲೆನೆರೆತಿರುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪ್ರತಿಯೊಬ್ಬರನ್ನೂ ಅವರ ಮೊದಲ ಹೆಸರಿನಿಂದಲೇ ಕರೆಯಲಾಗುತ್ತದೆ. ಇದು ವೈದ್ಯಕೀಯ ಸಂಸ್ಕೃತಿಯು ಸಾಮಾನ್ಯವಾಗಿ ಸಹಜವೆಂದು ಪರಿಗಣಿಸುವ ಶ್ರೇಣೀಕೃತ ವ್ಯವಸ್ಥೆಯ ವಿರುದ್ಧದ ಒಂದು ಉದ್ದೇಶಪೂರ್ವಕವಾದ, ನಿಶ್ಯಬ್ದ ದಂಗೆಯಾಗಿದೆ ಹಾಗೂ ಇದು ಪರಿಣಾಮಕಾರಿಯಾಗಿದೆ. ಈ ವಾತಾವರಣದಲ್ಲಿ, ಏನೋ ಒಂದು ಬದಲಾವಣೆ ಉಂಟಾಗುತ್ತದೆ. ಉಪನ್ಯಾಸದ ಕೊಠಡಿಯ ಹಿಂಭಾಗದಲ್ಲಿ ಸಾಮಾನ್ಯವಾಗಿ ಸದ್ದಿಲ್ಲದೆ ಕುಳಿತುಕೊಳ್ಳುವ ವಿದ್ಯಾರ್ಥಿಗಳು ಮಾತನಾಡಲು ಪ್ರಾರಂಭಿಸುತ್ತಾರೆ. ಅವರು ಪ್ರಶ್ನಿಸುತ್ತಾರೆ, ಸವಾಲು ಹಾಕುತ್ತಾರೆ, ಕಲ್ಪಿಸಿಕೊಳ್ಳುತ್ತಾರೆ. ಶ್ರೇಣೀಕೃತ ವ್ಯವಸ್ಥೆಯ ಭಾರವು ಮರೆಯಾದಾಗ ಸ್ವಯಂ-ಅಭಿವ್ಯಕ್ತಿ, ರಚನಾತ್ಮಕ ಟೀಕೆ ಮತ್ತು ಸೃಜನಶೀಲ ಚಿಂತನೆಗಳು ಏಳಿಗೆ ಹೊಂದುತ್ತವೆ.

Group of people sitting on the ground under a large tree, engaged in conversation, with a pile of tubers in the foreground.

ಯಾವ ಅಂಶಗಳು ಬದಲಾಗುತ್ತವೆ   

ಆರ್ ಎಸ್ ಪಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮೀಣ ಆರೋಗ್ಯದಲ್ಲಿನ ಕೊರತೆಗಳನ್ನು ತೋರಿಸಲು ಉದ್ದೇಶಿಸಲಾಗಿತ್ತು. ಆದರೆ ಆ ಕೊರತೆಗಳು ಅವರಿಗೆ ದೂರದಲ್ಲಿರಲಿಲ್ಲ – ಅಂದರೆ ಅವರು ತರಬೇತಿ ಪಡೆಯುವ ವ್ಯವಸ್ಥೆಯಲ್ಲೇ ಇವೆ ಎಂಬುದನ್ನು ನಾವು ಶೀಘ್ರದಲ್ಲೇ ಅರಿತುಕೊಂಡೆವು. ಘನತೆಯುಳ್ಳ ಆರೋಗ್ಯ ಸೇವೆ, ತರ್ಕಬದ್ಧ ಕಾರ್ಯವೈಖರಿ, ಆರೋಗ್ಯವು ಹಾಳಾಗುವುದಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಪ್ರಾಮಾಣಿಕ ಸಂಭಾಷಣೆಗಳು, ಅವರೊಳಗಿನ ತಳಮಳಗಳನ್ನು ವ್ಯಕ್ತಪಡಿಸಲು ಒಂದು ಮುಕ್ತವಾದ ಅವಕಾಶ, ನಿಜವಾದ ಮಾನವೀಯ ಬಾಂಧವ್ಯಗಳು – ಇವುಗಳೂ ಸಹ ಅಲ್ಲಿ ಕಣ್ಮರೆಯಾಗಿದ್ದವು.

ಉದಯಪುರದ ಮೂಲಭೂತ ಆರೋಗ್ಯ ಸೇವೆಗಳ (ಬಿ ಎಚ್ ಎಸ್) ಸಂಸ್ಥೆಯಲ್ಲಿ ಪ್ರತಿ ವರ್ಷ ನಡೆಸುವ ಆರ್ ಎಸ್ ಪಿ ಕಾರ್ಯಕ್ರಮದ ಕುರಿತು ಡಾ. ಪವಿತ್ರಾ ಅವರು ಈ ರೀತಿ ಅಭಿಪ್ರಾಯಪಡುತ್ತಾರೆ — “ಆರ್ ಎಸ್ ಪಿ ಕಾರ್ಯಕ್ರಮವು ವಾಸ್ತವವಾಗಿ ಏನನ್ನು ಸಾಧಿಸುತ್ತದೆ ಎಂದು ಜನರು ನನ್ನನ್ನು ಕೇಳಿದಾಗ, ನಾನು ಅಂಕಿಅಂಶಗಳ ಕಡೆಗೆ ಗಮನ ಹರಿಸದೆ, ಆ ಕಾರ್ಯಕ್ರಮದ ಕೆಲವು ನಿರ್ದಿಷ್ಟ ಕ್ಷಣಗಳತ್ತ ಹಿಂತಿರುಗಿ ನೋಡುತ್ತೇನೆ.”

ಆರ್ ಎಸ್ ಪಿ ಕಾರ್ಯಕ್ರಮದ ಮುಕ್ತಾಯದ ಅಧಿವೇಶನದಲ್ಲಿ ಜೈಲಿನ ಕೈದಿಗಳ ತಂಡವೊಂದು ಪ್ರದರ್ಶನ ನೀಡಿದ ನಂತರ ಆಡಿದ ಮಾತುಗಳನ್ನು ಕೇಳಿ, ಯುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ನನ್ನ ಕಡೆಗೆ ತಿರುಗಿ ಹೀಗೆಂದರು: “ಜೈಲಿನಲ್ಲಿರುವವರು ಅಪರಾಧಿಗಳು ಎಂದೇ ನಾವು ಯಾವಾಗಲೂ ಭಾವಿಸಿದ್ದೆವು. ಅವರು ಇಷ್ಟು ಬದಲಾದ ವ್ಯಕ್ತಿಗಳಾಗಿರಬಹುದು ಎಂದು ನಾವು ಎಂದಿಗೂ ಭಾವಿಸಿರಲಿಲ್ಲ.” ಅವಳ ಮನಸ್ಸಿನೊಳಗಡೆ ಯಾವುದೋ ಒಂದು ವಿಷಯ ಸದ್ದಿಲ್ಲದೆ ಮರುರೂಪಿತಗೊಳ್ಳುತ್ತಿತ್ತು.

ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಒಮ್ಮೆ ನನಗೆ ಹೀಗೆಂದು ಹೇಳಿದರು: “ನಾನು ಯಾವಾಗಲೂ ಮಕ್ಕಳ ವೈದ್ಯಕೀಯ ವಿಭಾಗದಲ್ಲಿ ತರಬೇತಿ ತೆಗೆದುಕೊಳ್ಳಲು (ರೆಸಿಡೆನ್ಸಿ) ಬಯಸಿದ್ದೆ, ಏಕೆಂದರೆ ನಾನು ಮಕ್ಕಳನ್ನು ಪ್ರೀತಿಸುತ್ತೇನೆ. ಆದರೆ ನನ್ನ ಸ್ನೇಹಿತರು ಹೇಳುತ್ತಲೇ ಇದ್ದರು – ವಿಕಿರಣಶಾಸ್ತ್ರದಲ್ಲಿ (ರೇಡಿಯಾಲಜಿ) ಸ್ನಾತಕೋತ್ತರ ಪದವಿ ಮಾಡು, ಅದರಲ್ಲಿ ಕೆಲಸ ಕಡಿಮೆ, ಹಣ ಹೆಚ್ಚು ಎಂದು. ಆರ್ ಎಸ್ ಪಿ ಕಾರ್ಯಕ್ರಮದ ನಂತರ, ನಾನು ನನ್ನ ಮನಸ್ಸು ಏನು ಹೇಳುತ್ತದೋ ಅದನ್ನು ಅನುಸರಿಸಬೇಕು ಎಂದು ಅರಿತುಕೊಂಡೆ.” ಆನಂತರ ಆಕೆ ಹೆಚ್ಚು ಗಾಢವಾದ ಅನುಭವಕ್ಕಾಗಿ ನಮ್ಮ ಕೇಂದ್ರದಲ್ಲಿ ಒಂದಿಡೀ ವಾರ ಕಳೆಯಲು ಹಿಂತಿರುಗಿ ಬಂದರು.

ಭಾರತದಾದ್ಯಂತ ಆರ್ ಎಸ್ ಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಡಾ. ವಸುಂಧರಾ ಅವರು ಈ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಸೆರೆಹಿಡಿದಿದ್ದಾರೆ: ” ಆರ್ ಎಸ್ ಪಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮೀಣ ಆರೋಗ್ಯದಲ್ಲಿನ ಕೊರತೆಗಳನ್ನು ತೋರಿಸಲು ಉದ್ದೇಶಿಸಲಾಗಿತ್ತು. ಆದರೆ ಆ ಕೊರತೆಗಳು ಅವರಿಗೆ ದೂರದಲ್ಲಿರಲಿಲ್ಲ – ಅಂದರೆ ಅವರು ತರಬೇತಿ ಪಡೆಯುವ ವ್ಯವಸ್ಥೆಯಲ್ಲೇ ಇವೆ ಎಂಬುದನ್ನು ನಾವು ಶೀಘ್ರದಲ್ಲೇ ಅರಿತುಕೊಂಡೆವು. ಘನತೆಯುಳ್ಳ ಆರೋಗ್ಯ ಸೇವೆ, ತರ್ಕಬದ್ಧ ಕಾರ್ಯವೈಖರಿ, ಆರೋಗ್ಯವು ಹಾಳಾಗುವುದಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಪ್ರಾಮಾಣಿಕ ಸಂಭಾಷಣೆಗಳು, ಅವರೊಳಗಿನ ತಳಮಳಗಳನ್ನು ವ್ಯಕ್ತಪಡಿಸಲು ಒಂದು ಮುಕ್ತವಾದ ಅವಕಾಶ, ನಿಜವಾದ ಮಾನವೀಯ ಬಾಂಧವ್ಯಗಳು – ಇವುಗಳೂ ಸಹ ಅಲ್ಲಿ ಕಣ್ಮರೆಯಾಗಿದ್ದವು. “ಆರ್ ಎಸ್ ಪಿ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಗ್ರಾಮೀಣ ಆರೋಗ್ಯದಲ್ಲಿನ ಕೊರತೆಗಳನ್ನು ತೋರಿಸಲು ಉದ್ದೇಶಿಸಲಾಗಿತ್ತು. ಆದರೆ ಆ ಕೊರತೆಗಳು ಅವರಿಗೆ ದೂರದಲ್ಲಿರಲಿಲ್ಲ – ಅಂದರೆ ಅವರು ತರಬೇತಿ ಪಡೆಯುವ ವ್ಯವಸ್ಥೆಯಲ್ಲೇ ಇವೆ ಎಂಬುದನ್ನು ನಾವು ಶೀಘ್ರದಲ್ಲೇ ಅರಿತುಕೊಂಡೆವು. ಘನತೆಯುಳ್ಳ ಆರೋಗ್ಯ ಸೇವೆ, ತರ್ಕಬದ್ಧ ಕಾರ್ಯವೈಖರಿ, ಆರೋಗ್ಯವು ಹಾಳಾಗುವುದಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಪ್ರಾಮಾಣಿಕ ಸಂಭಾಷಣೆಗಳು, ಅವರೊಳಗಿನ ತಳಮಳಗಳನ್ನು ವ್ಯಕ್ತಪಡಿಸಲು ಒಂದು ಮುಕ್ತವಾದ ಅವಕಾಶ, ನಿಜವಾದ ಮಾನವೀಯ ಬಾಂಧವ್ಯಗಳು – ಇವುಗಳೂ ಸಹ ಅಲ್ಲಿ ಕಣ್ಮರೆಯಾಗಿದ್ದವು.ಆರ್ ಎಸ್ ಪಿ ಕಾರ್ಯಕ್ರಮವು, ಬಹುತೇಕ ಆಕಸ್ಮಿಕವಾಗಿ, ಈ ಎಲ್ಲವನ್ನೂ ನೀಡಲು ಪ್ರಾರಂಭಿಸಿತು.”

A group of eleven people smiling and posing together on rocky terrain surrounded by greenery.

ಈ ಮೈಮರೆಯುವಿಕೆಯ ಕ್ಷಣಗಳಲ್ಲಿ, ವಿದ್ಯಾರ್ಥಿಗಳು ಏನನ್ನೋ ಕೊಡವಿಕೊಳ್ಳುತ್ತಾರೆ — ವೈದ್ಯಕೀಯ ತರಬೇತಿಯು ಸಾಮಾನ್ಯವಾಗಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಬಯಸುವ ಒಂದು ರೀತಿಯ ರಕ್ಷಣಾತ್ಮಕ ಕವಚವನ್ನು ಅವರು ಕಳಚಿಡುತ್ತಾರೆ. ಅಲ್ಲಿ ಹೊರಹೊಮ್ಮುವುದು, ಬಹುತೇಕವಾಗಿ, ಹೆಚ್ಚು ಸ್ವತಂತ್ರವಾದ ಮತ್ತು ಕುತೂಹಲದಿಂದ ಕೂಡಿದ ಮನಸ್ಥಿತಿಯಾಗಿದೆ.

ಕಲಿಕೆಯ ಹಬ್ಬ  

ಆರ್ ಎಸ್ ಪಿ ಅನೇಕ ವಿಧಗಳಲ್ಲಿ ಒಂದು ಹಬ್ಬವೂ ಆಗಿದೆ. ಆರ್ ಎಸ್ ಪಿ ಯ ಪ್ರತಿ ಕೇಂದ್ರವು ಸ್ಥಳೀಯ ಆಹಾರವನ್ನು ನೀಡುತ್ತದೆ – ಸಿತ್ಲಿಂಗಿಯಲ್ಲಿ, ಸಿರಿಧಾನ್ಯಗಳು ಪ್ರಮುಖ ಸ್ಥಾನವನ್ನು ಪಡೆಯುತ್ತವೆ, ಇದು ಭಾಗವಹಿಸುವವರಿಗೆ ಸಮುದಾಯವು ನಿಜವಾಗಿ ಏನನ್ನು ಸೇವಿಸುತ್ತದೆ ಎಂಬುದರ ರುಚಿಯನ್ನು ನೀಡುತ್ತದೆ; ಇದು ಜನಾಂಗೀಯತೆಗೆ ಸಂಬಂಧಿಸಿದ ಅಧ್ಯಯನವಾಗಿರದೆ, ಒಗ್ಗಟ್ಟಿನ ಸಂಕೇತವಾಗಿರುತ್ತದೆ. ಅಲ್ಲಿ ಸ್ಥಳೀಯ ನೃತ್ಯಗಳು, ದಿಢೀರ್ ಅಡುಗೆ, ಚಂದ್ರನ ಬೆಳಕಿನಲ್ಲಿ ನಡಿಗೆ ಮತ್ತು ಕಾಡಿನ ಚಾರಣಗಳು, ಯಾವಾಗಾದರೊಮ್ಮೆ ಕಾಡಿನ ತೊರೆಯಲ್ಲಿ ಮುಳುಗೇಳುವುದು ಇವೆಲ್ಲವೂ ಇರುತ್ತವೆ. ಅಲ್ಲಿ ಉತ್ಸುಕರಾದ ವಿದ್ಯಾರ್ಥಿಗಳು ಟಿಪ್ಪಣಿ ಬರೆದುಕೊಳ್ಳಲು ಮಾರ್ಗದರ್ಶಕರ ಸುತ್ತ ನೆರೆಯುವುದಿಲ್ಲ, ಬದಲಿಗೆ ಆ ವೈದ್ಯರು ಈ ರೀತಿಯ ಆಯ್ಕೆಗಳನ್ನು ಹೇಗೆ ಮಾಡಿಕೊಂಡರು, ಅವರನ್ನು ಹಿಡಿದಿಟ್ಟಿದ್ದು ಯಾವುದು, ಅವರನ್ನು ಕುಗ್ಗಿಸಿದ್ದು ಯಾವುದು ಮತ್ತು ಅವರನ್ನು ಮತ್ತೆ ಎತ್ತಿ ನಿಲ್ಲಿಸಿದ್ದು ಯಾವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಮಾರ್ಗದರ್ಶಕರ ಸುತ್ತ ನೆರೆಯುತ್ತಾರೆ.

ಈ ಮೈಮರೆಯುವಿಕೆಯ ಕ್ಷಣಗಳಲ್ಲಿ, ವಿದ್ಯಾರ್ಥಿಗಳು ಏನನ್ನೋ ಕೊಡವಿಕೊಳ್ಳುತ್ತಾರೆ — ವೈದ್ಯಕೀಯ ತರಬೇತಿಯು ಸಾಮಾನ್ಯವಾಗಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಬಯಸುವ ಒಂದು ರೀತಿಯ ರಕ್ಷಣಾತ್ಮಕ ಕವಚವನ್ನು ಅವರು ಕಳಚಿಡುತ್ತಾರೆ. ಅಲ್ಲಿ ಹೊರಹೊಮ್ಮುವುದು, ಹೆಚ್ಚಾಗಿ, ಹೆಚ್ಚು ಸ್ವತಂತ್ರವಾದ ಮತ್ತು ಕುತೂಹಲದಿಂದ ಕೂಡಿದ ಮನಸ್ಥಿತಿಯಾಗಿದೆ.

A group of eight people, including an elderly woman, pose for a selfie in a green rice field. They are casually dressed and smiling, with lush crops in the background.

ಪ್ರತಿ ಕೇಂದ್ರವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದ್ದರೂ, ಕಾರ್ಯಕ್ರಮದ ಒಟ್ಟಾರೆ ವಿನ್ಯಾಸವು ಒಂದು ಸಾಮರಸ್ಯದ ಮನೋಭಾವವನ್ನು ಹೊಂದಿರುತ್ತದೆ: ನೈತಿಕವಾದ, ಕಡಿಮೆ-ವೆಚ್ಚದ ಆರೋಗ್ಯ ಸೇವೆಯನ್ನು ವಾಸ್ತವವಾಗಿ ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ನೋಡಲು ದ್ವಿತೀಯ ಹಂತದ ಆಸ್ಪತ್ರೆಗಳಿಗೆ ಭೇಟಿ ನೀಡುವುದು; ಕೆಳಗಿನ ಹಂತದ ಆರೋಗ್ಯ ಸೇವೆಯ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಆ ಕ್ಷೇತ್ರಗಳಿಗೆ ಭೇಟಿ ನೀಡುವುದು; ಮತ್ತು ಪ್ರಾಮಾಣಿಕವಾಗಿ ವೈದ್ಯಕೀಯ ವೃತ್ತಿಯನ್ನು ಮಾಡುವುದರ ಹಿಂದಿರುವ ಪರಿಸ್ಥಿತಿ ಹಾಗೂ ಜಾತಿ, ಲಿಂಗ, ಬಡತನ ಮತ್ತು ಭೌಗೋಳಿಕತೆಗಳು, ಯಾವುದೇ ಪಠ್ಯಪುಸ್ತಕವು ಸಮರ್ಪಕವಾಗಿ ಸೆರೆಹಿಡಿಯದ ರೀತಿಯಲ್ಲಿ ಆರೋಗ್ಯವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಮುಕ್ತ ಚರ್ಚೆಗಳು ನಡೆಯುತ್ತವೆ.

ಬೇರುಗಳನ್ನು ಬೆಳೆಸುವುದು  

ಆರ್ ಎಸ್ ಪಿ ಗೆ ಯಾವುದೇ ಅಧಿಕೃತ ಅನುಮೋದನೆ ಇಲ್ಲ. ಅದು ಯಾವುದೇ ಪ್ರಮಾಣಪತ್ರವನ್ನು ನೀಡುವುದಿಲ್ಲ. ಭಾಗವಹಿಸುವವರು ತಮ್ಮದೇ ಆದ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು, ಆಹಾರದ ವೆಚ್ಚವನ್ನು ಭರಿಸಲು ಸಣ್ಣ ಶುಲ್ಕವನ್ನು ಪಾವತಿಸಬೇಕು ಮತ್ತು ಪ್ರಾಯಶಃ ಅವರ ಬದ್ಧತೆಗೆ ನಿಜವಾದ ಪರೀಕ್ಷೆಯೆಂದರೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತರಗತಿಗಳನ್ನು ಬಿಟ್ಟು ಬರಬೇಕು. ಆದರೂ, ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ಸೀಟುಗಳು ಭರ್ತಿಯಾಗುತ್ತವೆ. ಕಾಯುವ ಸರದಿಗಳು ದೀರ್ಘವಾಗಿರುತ್ತವೆ. ಕಾರ್ಯಕ್ರಮವು ಸಂಪೂರ್ಣವಾಗಿ ಮೌಖಿಕ ಪ್ರಚಾರದ ಮೇಲೆ ಮತ್ತು ಅದು ಯಾರನ್ನು ತಲುಪುತ್ತದೆಯೋ ಅವರ ಚೈತನ್ಯದ ಮೇಲೆ ತನ್ನನ್ನು ತಾನು ಉಳಿಸಿಕೊಂಡಿದೆ.

ತಮಿಳುನಾಡಿನ ಒಂದು ಸಣ್ಣ ಮೂಲೆಯಲ್ಲಿ ಪ್ರಾರಂಭವಾದದ್ದು ಅಂದಿನಿಂದ ದೇಶಾದ್ಯಂತ ಹರಡಿದೆ. ಆರ್ ಎಸ್ ಪಿ ಗಳು ಮತ್ತು ಇಂತಹದೇ ಕಾರ್ಯಕ್ರಮಗಳು ಈಗ ಅಶ್ವಿನಿ – ಗುಡಲೂರು, ಉಡಯಪುರದ ಮೂಲಭೂತ ಆರೋಗ್ಯ ಸೇವೆಗಳು , ಜನ್ ಸ್ವಾಸ್ಥ್ಯ ಸಹಯೋಗ – ಗನಿಯಾರಿ, ಐಡಿಒ – ಭದ್ರಾದ್ರಿ, ಭನ್ಸಾಲಿ ಟ್ರಸ್ಟ್ – ಡಾಂಗ್ಸ್ ಮತ್ತು ಬೊಕಾರೊದ ಜನ ಚೇತನಾ ಮಂಚ್ ಮುಂತಾದ ಕಡೆಗಳಲ್ಲಿ ನಡೆಯುತ್ತಿವೆ. ಪ್ರತಿ ಕೇಂದ್ರವು ತನ್ನದೇ ಆದ ವಿಶಿಷ್ಟ ಶೈಲಿಯನ್ನು ಹೊಂದಿದ್ದರೂ, ಕಾರ್ಯಕ್ರಮದ ಒಟ್ಟಾರೆ ವಿನ್ಯಾಸವು ಒಂದು ಸಾಮರಸ್ಯದ ಮನೋಭಾವವನ್ನು ಹೊಂದಿರುತ್ತದೆ: ನೈತಿಕವಾದ, ಕಡಿಮೆ-ವೆಚ್ಚದ ಆರೋಗ್ಯ ಸೇವೆಯನ್ನು ವಾಸ್ತವವಾಗಿ ಹೇಗೆ ನಿರ್ವಹಿಸಲಾಗುತ್ತದೆ ಎಂಬುದನ್ನು ನೋಡಲು ದ್ವಿತೀಯ ಹಂತದ ಆಸ್ಪತ್ರೆಗಳಿಗೆ ಭೇಟಿ ನೀಡುವುದು; ಕೆಳಗಿನ ಹಂತದ ಆರೋಗ್ಯ ಸೇವೆಯ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಆ ಕ್ಷೇತ್ರಗಳಿಗೆ ಭೇಟಿ ನೀಡುವುದು; ಮತ್ತು ಪ್ರಾಮಾಣಿಕವಾಗಿ ವೈದ್ಯಕೀಯ ವೃತ್ತಿಯನ್ನು ಮಾಡುವುದರ ಹಿಂದಿರುವ ಪರಿಸ್ಥಿತಿ ಹಾಗೂ ಜಾತಿ, ಲಿಂಗ, ಬಡತನ ಮತ್ತು ಭೌಗೋಳಿಕತೆಗಳು ಆರೋಗ್ಯವನ್ನು ಯಾವುದೇ ಪಠ್ಯಪುಸ್ತಕವು ಸಮರ್ಪಕವಾಗಿ ಸೆರೆಹಿಡಿಯದ ರೀತಿಯಲ್ಲಿ ಆರೋಗ್ಯವನ್ನು ಹೇಗೆ ರೂಪಿಸುತ್ತದೆ ಎಂಬುದರ ಕುರಿತು ಮುಕ್ತ ಚರ್ಚೆಗಳು ನಡೆಯುತ್ತವೆ.

A group of people sitting on the floor engaged in a collaborative discussion, with some taking notes on a large sheet of paper. The setting appears to be relaxed and informal.

2017 ರಿಂದ, ಪ್ರತಿ ವರ್ಷ ಎಲ್ಲಾ ಕೇಂದ್ರಗಳಲ್ಲಿ ಸುಮಾರು 200 ಅಥವಾ ಅದಕ್ಕಿಂತ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಆರ್ ಎಸ್ ಪಿ ಗಳಲ್ಲಿ ಭಾಗಿಯಾಗುತ್ತಾರೆ. ಕೆಲವರು ಸ್ನಾತಕೋತ್ತರ ಫೆಲೋಷಿಪ್ ಕಾರ್ಯಕ್ರಮಕ್ಕೆ ಹಿಂತಿರುಗುತ್ತಾರೆ.

ಪ್ರಯಾಣ ಮುಂದುವರಿಯುತ್ತದೆ  

ಪ್ರಯಾಣ ಫೆಲೋಶಿಪ್ ಕಾರ್ಯಕ್ರಮವು ಆರ್ ಎಸ್ ಪಿ ಯ ಸಹಜವಾದ ವಿಸ್ತರಣೆಯೇ ಆಗಿದೆ – ಇದು ಒಂದು ವರ್ಷದ ಅವಧಿಯ ಕಾರ್ಯಕ್ರಮವಾಗಿದ್ದು, ಇದರಲ್ಲಿ ಯುವ ವೈದ್ಯರು ಭಾರತದ 21 ಸಂಸ್ಥೆಗಳಿಗೆ ಪ್ರಯಾಣಿಸುತ್ತಾರೆ, ಪ್ರತಿಯೊಂದರಲ್ಲೂ ಎರಡು ಮೂರು ತಿಂಗಳುಗಳನ್ನು ಕಳೆಯುತ್ತಾರೆ, ವಿಭಿನ್ನ ಭೌಗೋಳಿಕತೆಗಳು, ಸಂಸ್ಕೃತಿಗಳು ಮತ್ತು ಆರೈಕೆಯ ವಿಧಾನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಪ್ರಸ್ತುತ, ಪ್ರತಿ ವರ್ಷ ಐವರು ವೈದ್ಯರು ಇದರಲ್ಲಿ ಭಾಗವಹಿಸುತ್ತಾರೆ.

ಪ್ರಸ್ತುತ ತಂಡದ ಟ್ರಾವೆಲ್ ಫೆಲೋಗಳಲ್ಲಿ ಒಬ್ಬರಾದ ಡಾ. ಹಸಿತಾ ಅವರು ತಾವು ಇಲ್ಲಿಗೆ ಬಂದದ್ದು ಹೇಗೆ ಎಂದು ವಿವರಿಸುತ್ತಾರೆ: “ಪದವಿ ಮುಗಿಸಿದ ಕೆಲವು ತಿಂಗಳುಗಳ ನಂತರ ಸಿತ್ಲಿಂಗಿಯಲ್ಲಿ ಆರ್ ಎಸ್ ಪಿ ಗೆ ಹಾಜರಾಗಿದ್ದು ಒಂದು ಮಹತ್ವದ ತಿರುವಾಗಿತ್ತು. ವೈದ್ಯಕೀಯ ಶಾಲೆಯು ನನಗೆ ಸಮುದಾಯದ ಕೆಲಸದ ಪ್ರಾಮುಖ್ಯತೆಯನ್ನು ಕಲಿಸಿತ್ತು – ಆದರೆ ಆ ಮೂರು ದಿನಗಳು, ವೈದ್ಯರು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಮಾಜಿಕ ನಿರ್ಧಾರಕ ಅಂಶಗಳನ್ನು ಪರಿಗಣಿಸುವುದನ್ನು ನೋಡುವುದು ಮತ್ತು ಸಮಾನ ಮನಸ್ಕ ಗೆಳೆಯರು ಹಾಗೂ ಮಾರ್ಗದರ್ಶಕರೊಂದಿಗೆ ನಡೆಸಿದ ಸಮೃದ್ಧ ಚರ್ಚೆಗಳು ಆ ತಿಳಿವಳಿಕೆಯನ್ನು ದೃಢವಾದ ನಂಬಿಕೆಯನ್ನಾಗಿ ಪರಿವರ್ತಿಸಿದವು. ಪ್ರಯಾಣ ಫೆಲೋಶಿಪ್ ಕಾರ್ಯಕ್ರಮವು ಸಹಜವಾದ ಮುಂದಿನ ಹೆಜ್ಜೆಯಾಗಿ ಭಾಸವಾಗುತ್ತಿದೆ: ಭಾರತದಾದ್ಯಂತ ವೈವಿಧ್ಯಮಯ ಸಮುದಾಯಗಳು ಮತ್ತು ಸಂದರ್ಭಗಳಲ್ಲಿ ಆರೋಗ್ಯದ ನಿಜವಾದ ಅರ್ಥವೇನು ಎಂಬುದನ್ನು ಅನ್ವೇಷಿಸಲು ಇದು ಸಹಕಾರಿಯಾಗಿದೆ.”

A group of 19 people smiling and posing for a photo outdoors, surrounded by greenery and rocky terrain.

ಒಬ್ಬ ಶಿಕ್ಷಕನಾಗಿ ಆರ್ ಎಸ್ ಪಿ ಯ ಕೊನೆಯಲ್ಲಿ, ನಾನು ಸತತವಾಗಿ ‘ಆಹಾ’ (ಆಹ್ಲಾದದ) ಅನುಭವವನ್ನು ಪಡೆಯುತ್ತೇನೆ. ಭಾಗವಹಿಸುವವರು ಮತ್ತು ಮಾರ್ಗದರ್ಶಕರು ಇಬ್ಬರಿಗೂ ಅದ್ಭುತವಾದದ್ದು ಏನೋ ಸಂಭವಿಸಿರುತ್ತದೆ. ಅದು ಏನೆಂಬುದನ್ನು ಮಾತುಗಳಲ್ಲಿ ಸೆರೆಹಿಡಿಯುವುದು ಅಸಾಧ್ಯ. ಉತ್ತಮ ಶಿಕ್ಷಣವು ಅನಿರೀಕ್ಷಿತ ವಿಧಾನಗಳಲ್ಲಿಯೂ ಸಂಭವಿಸಲು ಸಾಧ್ಯ ಎನ್ನುವುದನ್ನು ಆರ್ ಎಸ್ ಪಿ ತೋರಿಸುತ್ತದೆ.

2017 ರಿಂದ, ಪ್ರತಿ ವರ್ಷ ಎಲ್ಲಾ ಕೇಂದ್ರಗಳಲ್ಲಿ ಸುಮಾರು 200 ಅಥವಾ ಅದಕ್ಕಿಂತ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಆರ್ ಎಸ್ ಪಿ ಗಳ ಮೂಲಕ ಹಾದುಹೋಗುತ್ತಾರೆ. ಕೆಲವರು ಪ್ರಯಾಣ ಫೆಲೋಶಿಪ್‌ ಕಾರ್ಯಕ್ರಮಕ್ಕಾಗಿ ಹಿಂತಿರುಗುತ್ತಾರೆ. ಅನೇಕರು ಗ್ರಾಮೀಣ ಎನ್‌ ಜಿ ಒ ಗಳೊಂದಿಗೆ ಕೆಲಸ ಮಾಡಲು ಹೋಗಿದ್ದಾರೆ, ಹಿಂದುಳಿದ ಪ್ರದೇಶಗಳಲ್ಲಿ ಕಿರಿಯ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ನಂತರ ಸ್ನಾತಕೋತ್ತರ ತರಬೇತಿಯನ್ನು ಪಡೆದಿದ್ದಾರೆ. ಇತರರು ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಹೋಗಿದ್ದಾರೆ. ಆದರೆ ಮುಖ್ಯವಾದ ಸಂಗತಿ ಅದು ಮಾತ್ರ ಅಲ್ಲ ಎಂದು ನಾವು ನಂಬುತ್ತೇವೆ.

ಮನಸ್ಸಿನಲ್ಲಿ ಬಿತ್ತಲಾಗಿರುವ ವಿಷಯ ಮುಖ್ಯವಾದದ್ದು.

ರೋಗಿ ಎಂದರೆ ಒಬ್ಬ ವ್ಯಕ್ತಿ, ಅವರನ್ನು ಕೇವಲ ಅವರ ರೋಗನಿರ್ಣಯದ ವಸ್ತುವಲ್ಲ; ಕರುಣೆ ಎಂಬುದು ಕೇವಲ ಮೃದುವಾಗಿರುವುದಲ್ಲ, ಬದಲಿಗೆ ಅತ್ಯಗತ್ಯವಾದದ್ದನ್ನು ಮಾಡುವುದು; ಆರೋಗ್ಯವು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿಲ್ಲ ಬದಲಿಗೆ ಅದು ಸಮುದಾಯ, ಇತಿಹಾಸ ಮತ್ತು ಸಮಾಜದ ವಿಶಾಲವಾದ ರಚನೆಯೊಂದಿಗೆ ಹೆಣೆಯಲ್ಪಟ್ಟಿದೆ, ಮುಂತಾದ ವಿಚಾರಗಳನ್ನು ನಾವು ಯುವ ವೈದ್ಯರ ಮನಸ್ಸಿನಲ್ಲಿ ಬಿತ್ತುತ್ತೇವೆ. ಒಂದು ದಿನ, ಕಿಕ್ಕಿರಿದ ಚಿಕಿತ್ಸಾಲಯದಲ್ಲಿ ಅಥವಾ ಪ್ರಶಾಂತವಾದ ವಾರ್ಡ್‌ನಲ್ಲಿ, ಆ ಬೀಜವು ಚಿಗುರೊಡೆಯುತ್ತದೆ. ಮತ್ತು ಆಗ – ಎಷ್ಟೇ ಚಿಕ್ಕದಾಗಿದ್ದರೂ ಸಹ – ಏನೋ ಒಂದು ಬದಲಾವಣೆ ಖಂಡಿತಾ ಆಗಿರುತ್ತದೆ.

ವೆಲ್ಲೂರಿನ ಸಿ ಎಂ ಸಿ ಯ ಪ್ರೊ. ಆನಂದ್ ಝಕಾರಿಯಾ ಅವರ ಚಿಂತನೆಯು ಆರ್ ಎಸ್ ಪಿ ಅನುಭವದ ಅಪರೂಪದ ಮತ್ತು ಆಳವಾದ ಸಂಗತಿಯನ್ನು ಸೆರೆಹಿಡಿಯುತ್ತದೆ – ಅತ್ಯಂತ ಅರ್ಥಪೂರ್ಣವಾದ ಶೈಕ್ಷಣಿಕ ಕ್ಷಣಗಳು ಹೆಚ್ಚಾಗಿ ಅಚ್ಚುಕಟ್ಟಾದ ದಾಖಲೀಕರಣ ಅಥವಾ ಪುನರಾವರ್ತನೆಯನ್ನು ನಿರಾಕರಿಸುತ್ತವೆ. ಒಬ್ಬ ಶಿಕ್ಷಕನಾಗಿ ಆರ್ ಎಸ್ ಪಿ ಯ ಕೊನೆಯಲ್ಲಿ, ನಾನು ಸತತವಾಗಿ ‘ಆಹಾ’ (ಆಹ್ಲಾದದ) ಅನುಭವವನ್ನು ಪಡೆಯುತ್ತೇನೆ. ಭಾಗವಹಿಸುವವರು ಮತ್ತು ಮಾರ್ಗದರ್ಶಕರು ಇಬ್ಬರಿಗೂ ಅದ್ಭುತವಾದದ್ದು ಏನೋ ಸಂಭವಿಸಿರುತ್ತದೆ. ಅದು ಏನೆಂಬುದನ್ನು ಮಾತುಗಳಲ್ಲಿ ಸೆರೆಹಿಡಿಯುವುದು ಅಸಾಧ್ಯ. ಉತ್ತಮ ಶಿಕ್ಷಣವು ಅನಿರೀಕ್ಷಿತ ವಿಧಾನಗಳಲ್ಲಿಯೂ ಸಂಭವಿಸಲು ಸಾಧ್ಯ ಎನ್ನುವುದನ್ನು ಆರ್ ಎಸ್ ಪಿ ತೋರಿಸುತ್ತದೆ.

ಇದರ ಮೇಲೆ ನಾವು ಯಾವುದೇ ಹಕ್ಕುಸ್ವಾಮ್ಯವನ್ನು ಹೊಂದಿಲ್ಲ. ನೀವು ಯಾರೇ ಆಗಲಿ ಈ ಮಾದರಿಯನ್ನು ಅನುಕರಿಸಲು, ಅಳವಡಿಸಿಕೊಳ್ಳಲು, ಅದನ್ನು ನಿಮ್ಮದೇ ನೆಲದಲ್ಲಿ ಬೆಳೆಸಲು ಬಯಸಿದರೆ – ನಮ್ಮ ಬೆಂಬಲವು ನಿಮ್ಮೊಂದಿಗೆ ಇರುತ್ತವೆ.