ಭಾರತದಲ್ಲಿ ಬುಡಕಟ್ಟು ಆರೋಗ್ಯ

ಭಾರತದ ಬುಡಕಟ್ಟು ಜನಸಮುದಾಯಗಳ ಆರೋಗ್ಯದ ಪರಿಸ್ಥಿತಿ, ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಿನ ರೋಗದ ಹೊರೆಯನ್ನು ಈ ಜನಸಮುದಾಯಗಳು ಎದುರಿಸುತ್ತಿರುವುದಕ್ಕೆ ಪ್ರಮುಖ ಕಾರಣಗಳು ಮತ್ತು ಈ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಕೈಗೊಳ್ಳಲಾದ ಉಪಕ್ರಮಗಳ ಕುರಿತಾದ ಒಂದು ಚಿಕ್ಕ ವಿವರಣಾತ್ಮಕ ವಿಡಿಯೊ ಇದು.

ಭಾರತದಲ್ಲಿ 104 ಮಿಲಿಯನ್‌ಗಿಂತಲೂ ಹೆಚ್ಚು ಜನರು—ಅಂದರೆ ದೇಶದ ಜನಸಂಖ್ಯೆಯ ಸುಮಾರು 8.6% ರಷ್ಟು ಜನರು —ಬುಡಕಟ್ಟು ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಇವರಲ್ಲಿ ಅನೇಕರು ದುರ್ಗಮವಾದ, ಮೂಲಸೌಕರ್ಯ ವಂಚಿತ ಪ್ರದೇಶಗಳಲ್ಲಿ ಬದುಕುತ್ತಿದ್ದಾರೆ ಮತ್ತು ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ ಅಸಮಾನ ಪ್ರಮಾಣದ ರೋಗದ ಹೊರೆಯನ್ನು ಹೊರುತ್ತಿದ್ದಾರೆ.

ಐತಿಹಾಸಿಕವಾಗಿ ಮಲೇರಿಯಾ ಮತ್ತು ಕುಡುಗೋಲು ಕಣ ರಕ್ತಹೀನತೆಯ (ಸಿಕ್ಲ್ ಸೆಲ್) ರೋಗಗಳಿಗೆ ತುತ್ತಾಗುತ್ತಿದ್ದ ಜನಸಮುದಾಯವು, ಈಗ ಸಾಂಕ್ರಾಮಿಕವಲ್ಲದ ರೋಗಗಳು (ಎನ್‌ಸಿಡಿ) ಮತ್ತು ಕ್ಷಯರೋಗವು (ಟಿಬಿ) ಹೆಚ್ಚಾಗಿ ಹರಡುತ್ತಿರುವ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಈ ವಿವರಣಾತ್ಮಕ ವಿಡಿಯೊ, ಈ ಆರೋಗ್ಯ ಅಸಮಾನತೆಗಳ ಹಿಂದಿನ ಮೂಲ ಕಾರಣಗಳನ್ನು ಪರೀಕ್ಷಿಸುತ್ತದೆ ಮತ್ತು ಆರೋಗ್ಯ ಸೇವೆಯ ವಿತರಣೆಯನ್ನು ಬದಲಾಯಿಸಲು ಹಾಗೂ ಬುಡಕಟ್ಟು ಪ್ರದೇಶಗಳಾದ್ಯಂತ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸರ್ಕಾರಗಳು ಮತ್ತು ಸಾರ್ವಜನಿಕ ಕಾಳಜಿಯುಳ್ಳ ಸರ್ಕಾರೇತರ ಸಂಸ್ಥೆಗಳು (ಎನ್‌ ಜಿ ಒ) ಕೈಗೊಂಡಿರುವ ಪ್ರಮುಖ ಉಪಕ್ರಮಗಳನ್ನು ಎತ್ತಿ ತೋರಿಸುತ್ತದೆ.