ಪತ್ತೆ ಹಚ್ಚುವುದರಿಂದ ಹಿಡಿದು ನಿರಂತರವಾಗಿ ಚಿಕಿತ್ಸೆ ಪಡೆದುಕೊಳ್ಳುವವರೆಗೆ: ಬುಡಕಟ್ಟು ಸಮುದಾಯಗಳಲ್ಲಿ ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಿಗೆ (ಎನ್ ಟಿ ಡಿ) ಸಂಬಂಧಿಸಿದ ಅಸ್ವಸ್ಥತೆಯ ಚಿಕಿತ್ಸೆಯನ್ನು ಬಲಪಡಿಸುವುದು
ಕುಷ್ಠರೋಗ, ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್) ಮತ್ತು ಉರಿಕಜ್ಜಿಯಂತಹ ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳು (ಎನ್ ಟಿ ಡಿ) ಎದುರಿಸಲು ಸೂಕ್ಷ್ಮತೆಯಿಂದ ಕೂಡಿದ ಮತ್ತು ಗಮನ ಕೇಂದ್ರೀಕೃತವಾದ ಪ್ರಯತ್ನಗಳ ಅಗತ್ಯವಿರುತ್ತದೆ. ಈ ಲೇಖನವು ಸಮುದಾಯ ಆರೋಗ್ಯ ಕಾರ್ಯಕರ್ತರು, ಸಮುದಾಯ ಆರೋಗ್ಯ ಕೇಂದ್ರದ ಮೋರ್ಟಿಬಿಡಿಟಿ ಮ್ಯಾನೇಜ್‌ಮೆಂಟ್ ಘಟಕದೊಂದಿಗೆ ಸೇರಿ, ನಿರ್ಲಕ್ಷಿತ ಉಷ್ಣವಲಯದ ಕಾಯಿಲೆ (NTD)ಗಳಿಂದ ಬಳಲುತ್ತಿದ್ದವರಿಗೆ ಹೇಗೆ ನೆರವಾದರು ಎಂಬುದನ್ನು ಒತ್ತಿಹೇಳುತ್ತದೆ.
