ಭಾರತದ ಆರೋಗ್ಯ ವ್ಯವಸ್ಥೆಯೆಂದರೆ ಸಾಮಾನ್ಯವಾಗಿ ಆಸ್ಪತ್ರೆಗಳು, ವೈದ್ಯರು, ದಾದಿಯರು, ಔಷಧಗಳು, ವಿಮೆ ಮತ್ತು ಸರ್ಕಾರದ ಬಜೆಟ್ಗಳ ಲೆಕ್ಕದಲ್ಲಿ ಚರ್ಚಿಸಲಾಗುತ್ತದೆ. ಇವೆಲ್ಲವೂ ಮುಖ್ಯವೇ, ಆದರೆ ಯಾನ್ ಮತ್ತು ಇತರರ ಪ್ರಬಂಧವು (https://doi.org/10.3389/fpubh.2025.1666386) ನಿರೂಪಿಸುವಂತೆ, ಆರೋಗ್ಯ ವ್ಯವಸ್ಥೆಯ ಮತ್ತೊಂದು ಭಾಗವು ಯಾವಾಗಲೂ ಇರುತ್ತದೆ, ಆದರೂ ಅಪರೂಪಕ್ಕೊಮ್ಮೆ ಸ್ಪಷ್ಟವಾಗಿ ಕಂಡುಬರುತ್ತದೆ. ಇವರೇ ಕುಟುಂಬದ ಆರೈಕೆದಾರರು.
ಆರೋಗ್ಯ ವ್ಯವಸ್ಥೆಗಳು ಆರೈಕೆದಾರರನ್ನು ಉಲ್ಲೇಖಿಸುವಾಗ ‘ ಪ್ರೇಕ್ಷಕರು‘ (ಬೈಸ್ಟ್ಯಾಂಡರ್) ಎಂಬ ಪದವನ್ನು ಯೋಚಿಸದೆ ತಮ್ಮ ಶಬ್ದಕೋಶಕ್ಕೆ ಸೇರಿಸಿಕೊಂಡಿರುವುದರಲ್ಲಿ ಇದು ಹೆಚ್ಚಾಗಿ ಪ್ರತಿಫಲಿಸುತ್ತದೆ – ಇದು ಅವರನ್ನು ಕೇವಲ ನಿಷ್ಕ್ರಿಯ ವೀಕ್ಷಕರೆಂದು ಪರಿಗಣಿಸುವ ತಾರತಮ್ಯದ ಪದವಾಗಿದೆ, ಆದರೆ ವಾಸ್ತವದಲ್ಲಿ ಅವರೇ ಹೆಚ್ಚಿನ ಕಠಿಣ ಕೆಲಸಗಳನ್ನು ಮಾಡುತ್ತಾರೆ.
ಆರೈಕೆದಾರರು ಎಂದಾಗ ಅವರು, ತಾಯಿಯ ಔಷಧಿಗಳ ಬಗ್ಗೆ ನಿಗಾ ಇಡುವ ಮಗಳಾಗಿರಬಹುದು, ಹೆರಿಗೆಯ ನಂತರ ಹೆಂಡತಿಯನ್ನು ತಪಾಸಣೆಗೆ ಕರೆತರುವ ಗಂಡನಾಗಿರಬಹುದು, ಆಗ ತಾನೇ ಹುಟ್ಟಿದ ಮಗುವನ್ನು ನೋಡಿಕೊಳ್ಳಲು ನೆರವಾಗುವ ಅಜ್ಜಿಯಾಗಿರಬಹುದು, ಅಂಗವಿಕಲ ಮಗುವನ್ನು ಬೆಂಬಲಿಸುವ ಪೋಷಕರಾಗಿರಬಹುದು ಅಥವಾ ವೃದ್ಧರನ್ನು ಚಿಕಿತ್ಸಾಲಯಕ್ಕೆ ತಲುಪಿಸಲು ಸಹಾಯ ಮಾಡುವ ನೆರೆಹೊರೆಯವರಾಗಿರಬಹುದು. ಭಾರತದಲ್ಲಿ, ಹೀಗೆ ಆರೈಕೆ ಮಾಡುವುದು ಅಪರೂಪದ ಸಂಗತಿಯಲ್ಲ. ಇದು ವಾಸ್ತವದಲ್ಲಿ ಆರೈಕೆಯನ್ನು ಹೇಗೆ ಮಾಡಲಾಗುತ್ತದೆ ಎನ್ನುವುದರ ಭಾಗವೇ ಆಗಿದೆ. ಭಾರತವು ಸುಮಾರು 275 ಮಿಲಿಯನ್ ಆರೈಕೆದಾರರನ್ನು ಹೊಂದಿರಬಹುದು ಎಂದು ಒಂದು ಅಂದಾಜು ಸೂಚಿಸುತ್ತದೆ, ಇದು ದೇಶದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟಾಗುತ್ತದೆ. ಇಷ್ಟಾಗಿ ಅವರಲ್ಲಿ ಹೆಚ್ಚಿನವರು ಅನೌಪಚಾರಿಕವಾಗಿ, ಯಾವುದೇ ಬೆಂಬಲವಿಲ್ಲದೆ, ವೇತನವಿಲ್ಲದೆ ಮತ್ತು ಯಾವುದೇ ತರಬೇತಿಯಿಲ್ಲದೆ ಆರೈಕೆ ಮಾಡುತ್ತಿದ್ದಾರೆ.
ಅಪಾಯದ ಲಕ್ಷಣಗಳನ್ನು ಗುರುತಿಸುವುದು, ನಿಯತವಾಗಿ ಔಷಧಿ ತೆಗೆದುಕೊಳ್ಳುವಂತೆ ಎಚ್ಚರವಹಿಸುವುದು, ಆಹಾರ ಉಣಿಸುವುದು ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವುದು, ಹಾಸಿಗೆಯ ಹುಣ್ಣುಗಳನ್ನು ತಡೆಗಟ್ಟುವುದು, ಓಡಾಡುವುದಕ್ಕೆ ಸಹಾಯ ಮಾಡುವುದು, ತುರ್ತಿನ ಸನ್ನಿವೇಶಗಳಿಗೆ ಸಿದ್ಧರಾಗುವುದು ಮತ್ತು ಆರೋಗ್ಯ ಸೇವೆ ಒದಗಿಸುವವರೊಂದಿಗೆ ಸೂಕ್ತವಾಗಿ ಸಂವಹನ ನಡೆಸುವುದು – ಹೀಗೆ ಅನೇಕ ಅಗತ್ಯವಾದ ಕೆಲಸಗಳನ್ನು ಮಾಡುವುದಕ್ಕೆ ಕುಟುಂಬಗಳು ಖಂಡಿತವಾಗಿಯೂ ನೆರವನ್ನು ನೀಡಬಹುದು.
ಬಹುತೇಕ ಸಂದರ್ಭಗಳಲ್ಲಿ ರೋಗಿಯ ಮತ್ತು ಔಪಚಾರಿಕ ಆರೋಗ್ಯ ವ್ಯವಸ್ಥೆಯ ಮಧ್ಯದ ಸಂಪರ್ಕವು ಅಲ್ಪಾವಧಿಯದ್ದಾಗಿರುತ್ತದೆ, ಹಾಗಾಗಿ ಇದು ಮುಖ್ಯವಾಗುತ್ತದೆ. ರೋಗನಿರ್ಣಯ, ಔಷಧದ ವೇಳಾಪಟ್ಟಿ, ಅಪಾಯದ ಲಕ್ಷಣಗಳು, ಆಹಾರಕ್ರಮದ ಬದಲಾವಣೆಗಳು, ಪುನರ್ವಸತಿಯ ಹಂತಗಳು ಅಥವಾ ಆಸ್ಪತ್ರೆಗೆ ಯಾವಾಗ ಹಿಂತಿರುಗಬೇಕು ಎಂಬುದನ್ನು ರೋಗಿಗಳಿಗೆ ವಿವರಿಸಲು ವೈದ್ಯರು ಅಥವಾ ಶುಶ್ರೂಷಕಿಯರಿಗೆ ಕೆಲವೇ ಕೆಲವು ನಿಮಿಷಗಳು ಸಿಗಬಹುದು. ರೋಗಿಯು ಮನೆಗೆ ಹೋದ ನಂತರ, ಕುಟುಂಬವೇ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಪೂರ್ವಸಿದ್ಧತೆಯಿಲ್ಲದೆ ಇದನ್ನು ಮಾಡಬೇಕಾದಾಗ, ಕುಟುಂಬ ಸದಸ್ಯರು ಆತಂಕಕ್ಕೊಳಗಾಗಬಹುದು ಹಾಗೂ ಅವರಿಗೆ ದಿಕ್ಕುತೋಚದಂತಾಗಬಹುದು. ಅವರು ಅಪಾಯದ ಲಕ್ಷಣಗಳನ್ನು ಗುರುತಿಸದೇ ಹೋಗಬಹುದು, ವೈದ್ಯರ ಸೂಚನೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು ಅಥವಾ ಚಿಕಿತ್ಸೆ ಪಡೆಯುವುದಕ್ಕೆ ತಡಮಾಡಿಕೊಳ್ಳಬಹುದು. ಹೀಗೆಲ್ಲ ಆಗುವುದು ಅವರು ಕಾಳಜಿ ವಹಿಸುವುದಿಲ್ಲ ಎನ್ನುವ ಕಾರಣಕ್ಕಲ್ಲ. ಬದಲಿಗೆ, ನಾವು ಅವರನ್ನು ಆರೈಕೆ ತಂಡದ ಭಾಗವಾಗಿ ನಡೆಸಿಕೊಳ್ಳದೆ, ಅವರಿಂದ ಆರೈಕೆ ಕೆಲಸವನ್ನು ನಿರೀಕ್ಷಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಆರೋಗ್ಯ ವ್ಯವಸ್ಥೆಗಳು ಆರೈಕೆದಾರರನ್ನು ಉಲ್ಲೇಖಿಸುವಾಗ ‘ಪ್ರೇಕ್ಷಕರು ‘ (ಬೈಸ್ಟ್ಯಾಂಡರ್) ಎಂಬ ಪದವನ್ನು ಯೋಚಿಸದೆ ತಮ್ಮ ಶಬ್ದಕೋಶಕ್ಕೆ ಸೇರಿಸಿಕೊಂಡಿರುವುದರಲ್ಲಿ ಇದು ಹೆಚ್ಚಾಗಿ ಪ್ರತಿಫಲಿಸುತ್ತದೆ – ಇದು ಅವರನ್ನು ಕೇವಲ ನಿಷ್ಕ್ರಿಯ ವೀಕ್ಷಕರೆಂದು ಪರಿಗಣಿಸುವ ತಾರತಮ್ಯದ ಪದವಾಗಿದೆ, ಆದರೆ ವಾಸ್ತವದಲ್ಲಿ ಅವರೇ ಹೆಚ್ಚಿನ ಕಠಿಣ ಕೆಲಸಗಳನ್ನು ಮಾಡುತ್ತಾರೆ.
ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಕುಟುಂಬಗಳಿಗೆ ವಹಿಸುವುದು ಇದಕ್ಕೆ ಪರಿಹಾರವಲ್ಲ. ಚಿಕಿತ್ಸೆಗೆ ಸಂಬಂಧಿಸಿದ ಸಂಕೀರ್ಣವಾದ ಕೆಲಸಗಳನ್ನು ತರಬೇತಿ ಪಡೆದ ಆರೋಗ್ಯ ಸಿಬ್ಬಂದಿಯೇ ಮಾಡಬೇಕು. ಆದರೆ ಅಪಾಯದ ಲಕ್ಷಣಗಳನ್ನು ಗುರುತಿಸುವುದು, ನಿಯತವಾಗಿ ಔಷಧಿ ತೆಗೆದುಕೊಳ್ಳುವಂತೆ ಎಚ್ಚರವಹಿಸುವುದು, ಆಹಾರ ಉಣಿಸುವುದು ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವುದು, ಹಾಸಿಗೆಯ ಹುಣ್ಣುಗಳನ್ನು ತಡೆಗಟ್ಟುವುದು, ಓಡಾಡುವುದಕ್ಕೆ ಸಹಾಯ ಮಾಡುವುದು, ತುರ್ತಿನ ಸನ್ನಿವೇಶಗಳಿಗೆ ಸಿದ್ಧರಾಗುವುದು ಮತ್ತು ಆರೋಗ್ಯ ಸೇವೆ ಒದಗಿಸುವವರೊಂದಿಗೆ ಸೂಕ್ತವಾಗಿ ಸಂವಹನ ನಡೆಸುವುದು – ಹೀಗೆ ಅನೇಕ ಅಗತ್ಯವಾದ ಕೆಲಸಗಳನ್ನು ಮಾಡುವುದಕ್ಕೆ ಕುಟುಂಬಗಳು ಖಂಡಿತವಾಗಿಯೂ ನೆರವನ್ನು ನೀಡಬಹುದು. ಇವು ಸಣ್ಣ ವಿಷಯಗಳಲ್ಲ. ರೋಗಿಯು ಚೆನ್ನಾಗಿ ಗುಣಮುಖರಾಗುತ್ತಾರೋ, ಅನಗತ್ಯವಾಗಿ ಆಸ್ಪತ್ರೆಗೆ ಹಿಂತಿರುಗುತ್ತಾರೋ ಅಥವಾ ಮನೆಯಲ್ಲಿಯೇ ಅವರ ಆರೋಗ್ಯ ಕ್ಷೀಣಿಸುತ್ತದೋ ಎನ್ನುವುದನ್ನು ಇವು ನಿರ್ಧರಿಸಬಲ್ಲವು.
ತರಬೇತಿ ಪಡೆದ ಆರೈಕೆದಾರರು ಬದಲಾವಣೆಗಳನ್ನು ಗಮನಿಸಬಹುದು, ಒಳ್ಳೆಯ ಪ್ರಶ್ನೆಗಳನ್ನು ಕೇಳಬಹುದು, ಸೂಚನೆಗಳನ್ನು ಹೆಚ್ಚು ನಿಖರವಾಗಿ ಅನುಸರಿಸಬಹುದು ಮತ್ತು ತಡೆಯಬಹುದಾದ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡಬಹುದು. ಆರೋಗ್ಯ ಸಿಬ್ಬಂದಿಯೇ ಇಲ್ಲಿ ಮುಖ್ಯವಾಗುತ್ತಾರೆ, ಆದರೆ ಕುಟುಂಬವು ಉತ್ತಮ ಪಾಲುದಾರನಾಗಿ ಕೆಲಸಮಾಡುತ್ತದೆ.
ಭಾರತದ ಕೆಲವು ಸಂಸ್ಥೆಗಳು ಈಗಾಗಲೇ ಏನು ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಡುತ್ತಿವೆ. ನೂರಾ ಹೆಲ್ತ್ನ ‘ಕೇರ್ ಕಂಪ್ಯಾನಿಯನ್ ಪ್ರೋಗ್ರಾಂ’ ಎಂಬ ಯೋಜನೆಯು, ಸರ್ಕಾರಿ ಆಸ್ಪತ್ರೆಗಳಿಂದ ರೋಗಿಗಳು ಬಿಡುಗಡೆಯಾಗುವ ಮೊದಲು, ರೋಗಿಗಳಿಗೆ ಮತ್ತು ಕುಟುಂಬದ ಸದಸ್ಯರಿಗೆ, ಪ್ರಾಯೋಗಿಕವಾದ ಮತ್ತು ಸಾಂಸ್ಕೃತಿಕವಾಗಿ ಸೂಕ್ತವಾದ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತದೆ. ಪ್ಯಾಲಿಯಮ್ ಇಂಡಿಯಾ ಸಂಸ್ಥೆಯು ಗೃಹ-ಆಧಾರಿತ ಮತ್ತು ಉಪಶಮನಕಾರಿ (ಪ್ಯಾಲಿಯೇಟಿವ್) ಆರೈಕೆಯನ್ನು ಬೆಂಬಲಿಸಲು ತರಬೇತಿ ಸಾಮಗ್ರಿಗಳನ್ನು ಮತ್ತು ವೀಡಿಯೊಗಳನ್ನು ಸಿದ್ಧಪಡಿಸಿದೆ. ‘ಕೇರ್ಗಿವರ್ ಸಾಥಿ’ ಸಂಸ್ಥೆಯು ಆರೈಕೆ ಮಾಡುವವರು ಅನುಭವಿಸುವ ಭಾವನಾತ್ಮಕವಾದ ಮತ್ತು ಅವರ ವೈಯಕ್ತಿಕ ಜೀವನದ ರಕ್ಷಣೆಗೆ ಸಂಬಂಧಿಸಿದ ಕೆಲಸ ಮಾಡುತ್ತದೆ. ‘ನಯಿ ದಿಶಾ’ ಸಂಸ್ಥೆಯು ಬೆಳವಣಿಗೆಯ ಅಸಾಮರ್ಥ್ಯಗಳನ್ನು ಹೊಂದಿರುವ ಮಕ್ಕಳ ಕುಟುಂಬಗಳಿಗೆ ಮಾಹಿತಿ, ಹಕ್ಕುಗಳ ಆಧಾರಿತ ಮಾರ್ಗದರ್ಶನ ಮತ್ತು ಸಮಾನಮನಸ್ಕರ ಬೆಂಬಲವನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಸಮುದಾಯ ಸ್ವಯಂಸೇವಕರು ಹೇಗೆ ಏಕಾಂಗಿತನವನ್ನು ಕಡಿಮೆ ಮಾಡಬಹುದು ಮತ್ತು ಕುಟುಂಬಗಳನ್ನು ಬೆಂಬಲಿಸಬಹುದು ಎನ್ನುವುದನ್ನು ಕೇರಳದ ಉಪಶಮನಕಾರಿ ಆರೈಕೆಯ ಅನುಭವವು ತೋರಿಸುತ್ತದೆ. ಈ ಉದಾಹರಣೆಗಳು ವಿಭಿನ್ನವಾಗಿದ್ದರೂ, ಅವು ಒಂದೇ ಗುರಿಯನ್ನು ಸೂಚಿಸುತ್ತವೆ: ಆರೈಕೆದಾರರನ್ನು ಗುರುತಿಸಿದಾಗ, ತರಬೇತಿ ನೀಡಿದಾಗ, ಸಂಪರ್ಕಿಸಿದಾಗ ಮತ್ತು ಬೆಂಬಲಿಸಿದಾಗ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ.
ಇದು ಆರೋಗ್ಯ ಸಿಬ್ಬಂದಿಯ ಮೇಲೂ ಸಹ ಪರಿಣಾಮ ಬೀರುತ್ತದೆ. ಆರೈಕೆದಾರರಿಗೆ ಬೆಂಬಲ ನೀಡುವುದನ್ನು ಶುಶ್ರೂಷಕಿಯರು, ವೈದ್ಯರು, ಆಶಾ ಕಾರ್ಯಕರ್ತೆಯರು ಅಥವಾ ಸಮುದಾಯ ಆರೋಗ್ಯ ಸಿಬ್ಬಂದಿಯ ಮೇಲೆ ಬೀಳುವ ಮತ್ತೊಂದು ಹೊರೆ ಎನ್ನುವಂತೆ ನೋಡಬಾರದು. ಸರಿಯಾಗಿ ನಿರ್ವಹಿಸಿದರೆ, ಇದು ಅವರ ಕೆಲಸವನ್ನು ಸುಲಭಗೊಳಿಸುತ್ತದೆ. ತರಬೇತಿ ಪಡೆದ ಆರೈಕೆದಾರರು ಬದಲಾವಣೆಗಳನ್ನು ಗಮನಿಸಬಹುದು, ಒಳ್ಳೆಯ ಪ್ರಶ್ನೆಗಳನ್ನು ಕೇಳಬಹುದು, ಸೂಚನೆಗಳನ್ನು ಹೆಚ್ಚು ನಿಖರವಾಗಿ ಅನುಸರಿಸಬಹುದು ಮತ್ತು ತಡೆಯಬಹುದಾದ ಸಂಕೀರ್ಣ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡಬಹುದು. ಆರೋಗ್ಯ ಸಿಬ್ಬಂದಿಯೇ ಇಲ್ಲಿ ಮುಖ್ಯವಾಗುತ್ತಾರೆ, ಆದರೆ ಕುಟುಂಬವು ಉತ್ತಮ ಪಾಲುದಾರನಾಗಿ ಕೆಲಸಮಾಡುತ್ತದೆ.
ಮೊದಲ ಹೆಜ್ಜೆಯೆಂದರೆ ನಮ್ಮ ಯೋಚನಾಲಹರಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು. ರೋಗಿಯ ಕುಟುಂಬವನ್ನು ಕೇವಲ ಸಂದರ್ಶಕರು, ಸಹಾಯಕರು ಅಥವಾ ವೀಕ್ಷಕರು ಎಂದು ನೋಡುವುದನ್ನು ನಾವು ನಿಲ್ಲಿಸಬೇಕು. ಆರೈಕೆಯು ನಿರಂತರವಾಗಿ ಸಾಗುವಂತೆ ನೋಡಿಕೊಳ್ಳುವವರು ಹೆಚ್ಚಾಗಿ ಅವರೇ ಆಗಿರುತ್ತಾರೆ. ನಾವು ಅವರಿಗೆ ಉತ್ತಮ ತರಬೇತಿ ನೀಡಿ, ಹೆಚ್ಚಿನ ಹೊರೆಯಿಂದ ಅವರನ್ನು ರಕ್ಷಿಸಿ, ಅವರ ಪಾತ್ರವನ್ನು ಗೌರವಿಸಿದರೆ, ಅವರು ಆರೋಗ್ಯ ವ್ಯವಸ್ಥೆಯಲ್ಲಿ ಸದ್ದಿಲ್ಲದೆ ಕೆಲಸ ಮಾಡುವ ಆದರೆ ಆದರೆ ಶಕ್ತಿಯುತ ವಿಸ್ತರಣೆಯಾಗಬಲ್ಲರು.
Subscribe to stay connected
We will send you a monthly newsletter listing all the articles that were published in the month.
ಎರಡನೆಯ ಹೆಜ್ಜೆಯು ಕುಟುಂಬದ ಆರೈಕೆದಾರರ ಪಾತ್ರಗಳನ್ನು ಅಧಿಕೃತಗೊಳಿಸುವುದನ್ನು ಒಳಗೊಂಡಿದೆ, ಈ ವಿಧಾನವು ವಿಶ್ವ ಆರೋಗ್ಯ ಸಂಸ್ಥೆಯ (WHO) ಆರೋಗ್ಯ ವ್ಯವಸ್ಥೆಯ ಪ್ರಮುಖ ಘಟಕಗಳ (ಹೆಲ್ತ್ ಸಿಸ್ಟಮ್ ಬಿಲ್ಡಿಂಗ್ ಬ್ಲಾಕ್ಸ್) (https://l1nk.dev/gsnd6l2) ಹಲವು ಅಂಶಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ, ಇಲ್ಲಿ ನಿರ್ಲಕ್ಷಿಸಲಾಗದಂತಹ ಲಿಂಗ ಸಂಬಂಧಿತ ಕಾಳಜಿಯೂ ಇದೆ. ಸಂಭಾವನೆ ಇಲ್ಲದ ಹೆಚ್ಚಿನ ಆರೈಕೆ ಕೆಲಸಗಳನ್ನು ಮಹಿಳೆಯರೇ ಮಾಡುತ್ತಾರೆ. ಆರೈಕೆದಾರರ ಅಧಿಕೃತ ಗುರುತಿಸುವಿಕೆಯು ಮಹಿಳೆಯರ ಕಣ್ಣಿಗೆ ಕಾಣದ ಶ್ರಮವನ್ನು ಮತ್ತಷ್ಟು ದುಡಿಸಿಕೊಳ್ಳುವಂತಾಗಬಾರದು. ಅದು ಹೊರೆಯನ್ನು ಕಡಿಮೆ ಮಾಡಬೇಕು, ಜವಾಬ್ದಾರಿಯನ್ನು ಹಂಚಿಕೊಳ್ಳುವಂತೆ ಮಾಡಬೇಕು, ಪ್ರಾಯೋಗಿಕ ನೆರವು ನೀಡಬೇಕು ಮತ್ತು ಸೂಕ್ತವಾದ ಸ್ಥಳಗಳಲ್ಲಿ ಆರ್ಥಿಕ ಅಥವಾ ಸಾಮಾಜಿಕ ರಕ್ಷಣೆಯನ್ನು ಒದಗಿಸಬೇಕು. ಜೀವ-ರಕ್ಷಕ ಉಪಕರಣಗಳನ್ನು ಬಳಸುವ ಕುಟುಂಬಗಳಿಗೆ ಬೆಂಬಲ ನೀಡುವುದು ಮತ್ತು ಆಯ್ಕೆ ಮಾಡಿದ ಆರೋಗ್ಯ ಸಮಸ್ಯೆಗಳಿಗೆ ಆರೈಕೆದಾರರಿಗೆ ಹಣ ನೀಡುವುದು ಮುಂತಾದ ರೀತಿಗಳಲ್ಲಿ ಭಾರತದಲ್ಲಿ ಈಗಾಗಲೇ ಸಣ್ಣಪುಟ್ಟ ಉದಾಹರಣೆಗಳಿವೆ. ಇವುಗಳನ್ನು ಕೇವಲ ಕಲ್ಯಾಣ ಯೋಜನೆಯಾಗಿ ರೂಪಿಸುವ ಅಗತ್ಯವಿಲ್ಲ. ಅವುಗಳನ್ನು ಆರೋಗ್ಯ ವ್ಯವಸ್ಥೆಯ ಗುರಿಗಳೊಂದಿಗೆ ಹೊಂದಿಸಬಹುದು, ವೈದ್ಯಕೀಯ ತೊಡಕುಗಳು, ಮರು-ದಾಖಲಾತಿಗಳು ಅಥವಾ ಆಸ್ಪತ್ರೆ ಆರೈಕೆಯನ್ನು ತಡೆಯಬಹುದಾದ ಸಂದರ್ಭಗಳಲ್ಲಿ ವಿಶೇಷವಾಗಿ ಆರೈಕೆದಾರರ ಬೆಂಬಲವು ಸಹಕಾರಿಯಾಗುತ್ತದೆ.
ಆರೈಕೆಯನ್ನು ಸುಧಾರಿಸಲು ಭಾರತವು ಪರಿಪೂರ್ಣ ಆರೋಗ್ಯ ಪಡೆಗಾಗಿ ಕಾಯಬೇಕಾದ ಅಗತ್ಯವಿಲ್ಲ. ಈಗಾಗಲೇ ಆರೈಕೆ ಮಾಡುತ್ತಿರುವ ಜನರನ್ನು ಬಲಪಡಿಸುವ ಮೂಲಕವೇ ಅದು ತನ್ನ ಕೆಲಸವನ್ನು ಪ್ರಾರಂಭಿಸಬಹುದು.
