ಭಾರತದಲ್ಲಿ ಅಂಗಾಂಗ ದಾನದ ಪ್ರಮಾಣವು ಅತ್ಯಂತ ಕಡಿಮೆ ಇರುವುದೇಕೆ? 

ಭಾರತದಲ್ಲಿ ಅಂಗಾಂಗ ಕಸಿಯ ಕ್ಷೇತ್ರದ ಪ್ರವರ್ತಕರು ಹಾಗೂ ಈ ಕ್ಷೇತ್ರಕ್ಕೆ ಬದ್ಧವಾಗಿರುವ ಸಂಘಟನೆಯಾದ ಮೋಹನ್ ಫೌಂಡೇಶನ್ ನ ಕಾರ್ಯನಿರ್ವಾಹಕ ವಿಶ್ವಸ್ತರಾದ(ಟ್ರಸ್ಟಿ) ಡಾಕ್ಟರ್ ಸುನಿಲ್ ಶ್ರಾಫ್ ಅವರೊಂದಿಗೆ ಒಂದು ಸಂದರ್ಶನ

ಭಾರತದಲ್ಲಿ ಅಂಗಾಂಗ ಕಸಿಯ ಅವಶ್ಯಕತೆಯು ವಾರ್ಷಿಕವಾಗಿ ಐದು ಲಕ್ಷದಷ್ಟು ಎಂದು ಅಂದಾಜಿಸಲಾಗಿದೆ. ಆದರೆ ವಾಸ್ತವದಲ್ಲಿ ನಡೆಯುತ್ತಿರುವ ಅಂಗಾಂಗ ಕಸಿಗಳ ಪ್ರಮಾಣವು 20,000 ಕ್ಕಿಂತಲೂ ಕಡಿಮೆ ಇದೆ. ಇವೆರಡರ ಮಧ್ಯದ ಅಂತರ ಅಗಾಧವಾಗಿದೆ. ಪ್ರತಿ ವರ್ಷವೂ ಅಂಗಾಂಗಗಳ ಅಲಭ್ಯತೆಯಿಂದಾಗಿ ಸಹಸ್ರಾರು ಜನರು ಸಾಯುತ್ತಿದ್ದಾರೆ. 

ಭಾರತದಲ್ಲಿ ಮೃತರಾದವರ ಅಂಗಾಂಗಗಳ ದಾನದ ಪ್ರಮಾಣವು 10 ಲಕ್ಷಕ್ಕೆ ಒಂದಕ್ಕಿಂತ ಕಡಿಮೆ ಇದೆ. ವಿಶ್ವದಲ್ಲಿ ಇದರ ಪ್ರಮಾಣವು ಅತ್ಯಂತ ಹೆಚ್ಚು ಇರುವಂತಹ ದೇಶವಾದ ಸ್ಪೇನ್ ನಲ್ಲಿ 10 ಲಕ್ಷ ಜನತೆಗೆ 50ಕ್ಕಿಂತ ಹೆಚ್ಚು ಜನರು ಅಂಗಾಂಗ ದಾನವನ್ನು ಮಾಡುತ್ತಿದ್ದಾರೆ. 

ಈ ಅಂತರವನ್ನು ತಗ್ಗಿಸಲು ಅವಿಶ್ರಾಂತವಾಗಿ ದುಡಿಯುತ್ತಿರುವ ಸಂಘಟನೆಯಾದ ಮೋಹನ್ ಫೌಂಡೇಶನ್, ಅಂಗಾಂಗ ದಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶದ ಬಗ್ಗೆಯೂ – ಅದು ಸಂಭಾವ್ಯ ದಾನಿಗಳ ಕುಟುಂಬಗಳ ಸದಸ್ಯರಿಗೆ ಅರಿವು ಮೂಡಿಸುವುದು, ಅಂಗಾಂಗ ಕಸಿಯ ಶಸ್ತ್ರಚಿಕಿತ್ಸಕರಿಗೆ ತರಬೇತಿಯನ್ನು ಆಯೋಜಿಸುವುದು ಹಾಗೂ ಇದಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳು ರೂಪುಗೊಳ್ಳುವಂತೆ ಸರ್ಕಾರಗಳ ಮೇಲೆ ಪ್ರಭಾವ ಬೀರುವುದು – ಕೆಲಸ ಮಾಡುತ್ತಿದೆ.

ಹಿರಿಯ ಮೂತ್ರಶಾಸ್ತ್ರ ಸಲಹೆಗಾರರಾದ ಹಾಗೂ ಮದ್ರಾಸ್ ಮೆಡಿಕಲ್ ಮಿಷನ್ ಹಾಸ್ಪಿಟಲ್ ನ ಅಂಗಾಂಗ ಕಸಿ ಶಸ್ತ್ರಚಿಕಿತ್ಸಕರಾದ ಹಾಗೂ ಮೋಹನ್ ಫೌಂಡೇಶನ್ ನ ಕಾರ್ಯನಿರ್ವಾಹಕ ವಿಶ್ವಸ್ತರಾದ(ಟ್ರಸ್ಟಿ) ಡಾಕ್ಟರ್ ಸುನಿಲ್ ಶ್ರಾಫ್ ರವರೊಂದಿಗೆ ನಡೆದ ಸಂಭಾಷಣೆಯೊಂದರ ವಿಡಿಯೋ ತುಣುಕನ್ನು ನಾವು ಹಂಚಿಕೊಳ್ಳುತ್ತಿದ್ದೇವೆ. 

ಕಳೆದ ಮೂರು ದಶಕಗಳಿಂದ ಡಾ. ಶ್ರಾಫ್ ರವರು ಭಾರತದಲ್ಲಿ ಮೃತರಾದವರ ಅಂಗಾಂಗ ದಾನದ ಕಾರ್ಯಕ್ರಮವನ್ನು ರೂಪಿಸುತ್ತಿರುವ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅಂಗಾಂಗ ಕಸಿಯ ಶಸ್ತ್ರ ಚಿಕಿತ್ಸೆಗಳನ್ನು ಆರಂಭಿಸಿರುವುದರಿಂದ ಹಿಡಿದು ನೀತಿ ನಿರೂಪಣೆಗಳನ್ನು ರೂಪಿಸುವುದು ಹಾಗೂ ಸಾರ್ವಜನಿಕ ತಿಳಿವಳಿಕೆಯನ್ನು ಮೂಡಿಸುವುದರವರೆಗೂ ಭಾರತದಲ್ಲಿ ಅಂಗಾಂಗ ದಾನದ ಕುರಿತಾದ ತಿಳಿವಳಿಕೆಯು ರೂಪುಗೊಳ್ಳುವ ನಿಟ್ಟಿನಲ್ಲಿ ಡಾ. ಶ್ರಾಫ್ ಶ್ರಮಿಸಿದ್ದಾರೆ. ಮೋಹನ್ ಫೌಂಡೇಶನ್ ಮೂಲಕ ಮೆದುಳಿನ ಸಾವಿನ ನಂತರ ಮೃತರಾದವರ ಅಂಗಾಂಗ ದಾನ ಮಾಡುವುದನ್ನು ಉತ್ತೇಜಿಸುವುದು, ಅಂಗಾಂಗ ಕಸಿಯ ವ್ಯವಸ್ಥೆಗಳನ್ನು ಉತ್ತಮಪಡಿಸುವುದು ಹಾಗೂ ಆಸ್ಪತ್ರೆಗಳು, ಸರ್ಕಾರಗಳು ಹಾಗೂ ಸಾರ್ವಜನಿಕರ ಮಧ್ಯೆ ಅರಿವು ಮೂಡಿಸುವ ಕೆಲಸವನ್ನು ಮೋಹನ್ ಫೌಂಡೇಶನ್ ಮೂಲಕ ಡಾ.ಶ್ರಾಫ್ ಮಾಡುತ್ತಿದ್ದಾರೆ.